ಮಂಡ್ಯ:ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಗುರುವಾರ (ಏಪ್ರಿಲ್ 04) ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಮಂಡ್ಯದಲ್ಲಿ ಬೃಹತ್​ ರೋಡ್​ಶೋ ನಡೆಸಿದ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿಗೆ ಹಿರಿಯ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ, ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್, ಮೈಸೂರು-ಕೊಡಗು ಅಭ್ಯರ್ಥಿ ಯದುವೀರ್​, ಜೆಡಿಎಸ್​ ಹಾಗೂ ಬಿಜೆಪಿ ನಾಯಕರು ಸಾಥ್​ ನೀಡಿದ್ದರು.
ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ 217.21 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದು, 102.23 ಕೋಟಿ ರೂ ಮೌಲ್ಯ ಚರಾಸ್ತಿ ಹಾಗೂ 114.98 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿರುವ ಅಫಿಡೆವಿಟ್​ನಲ್ಲಿ ಘೋಷಿಸಿದ್ದಾರೆ. 2023ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಸಮಯಕ್ಕೆ ಹೋಲಿಸಿದರೆ ಎಚ್​ಡಿಕೆ ಆಸ್ತಿ ಮೌಲ್ಯ ಒಂದು ವರ್ಷದಲ್ಲಿ 50.07 ಕೋಟಿ ರೂ. ಹೆಚ್ಚಳವಾಗಿದೆ.
ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ದಂಪತಿ ಕೋಟ್ಯಂತರ ರೂಪಾಯಿ ಆಸ್ತಿಯ ಜೊತೆಗೆ ಅಷ್ಟೇ ಮೌಲ್ಯದ ಚಿನ್ನಾಭರಣವನ್ನು ಹೊಂದಿದ್ದಾರೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಬಳಿ 47 ಲಕ್ಷ ರೂ. ಮೌಲ್ಯದ 750 ಗ್ರಾಂ ಚಿನ್ನಾಭರಣ, 9.62 ಲಕ್ಷ ರೂಪಾಯಿ ಮೌಲ್ಯದ 12.5ಕೆಜಿ ಬೆಳ್ಳಿ ಮತ್ತು 2.60 ಲಕ್ಷ ರೂ. ಮೌಲ್ಯದ 4 ಕ್ಯಾರೆಟ್ ವಜ್ರ ಹೊಂದಿದ್ದಾರ. ಪತ್ನಿ ಅನಿತಾ ಕುಮಾರಸ್ವಾಮಿ ಬಳಿ 2.41ಕೋಟಿ ರೂ. ಮೌಲ್ಯದ 3.8ಕೆಜಿ ಚಿನ್ನಾಭರಣ, 13 ಲಕ್ಷ ರೂ. ಮೌಲ್ಯದ 17 ಕೆಜಿ ಬೆಳ್ಳಿ ಮತ್ತು 33 ಲಕ್ಷ ರೂ. ಮೌಲ್ಯದ 50 ಕ್ಯಾರೆಟ್ ಡೈಮಂಡ್ ಹೊಂದಿವುದಾಗಿ ನಾಮಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಸ್ಪರ್ಧೆಗೆ ಅಮಿತ್​ ಷಾ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ, ಚುನಾವಣೆಯಿಂದ ಹಿಂದೆ ಸರಿಯುವ ಮಾತಿಲ್ಲ: ಈಶ್ವರಪ್ಪ
ಇದಲ್ಲದೆ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ದಂಪತಿಗಳು ಕೋಟ್ಯಂತರ ರೂಪಾಯಿ ಸಾಲವನ್ನು ಹೊಂದಿರುವುದಾಗಿ ಘೋಷಿಸಿದ್ದಾರೆ. ಪತ್ನಿ ಅನಿತಾ ಕುಮಾರಸ್ವಾಮಿ 63.05 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದರೆ,  ಕುಮಾರಸ್ವಾಮಿ ಅವರು ಬರೋಬ್ಬರಿ 19.12 ಕೋಟಿ ರೂಪಾಯಿ ಸಾಲ ಮಾಡಿರುವುದಾಗಿ ತಿಳಿಸಿದ್ಧಾರೆ.
ಕುಮಾರಸ್ವಾಮಿ ಹೆಸರಿನಲ್ಲಿ ಚರಾಸ್ತಿ ಮೌಲ್ಯ 10,71,26,254 ರೂ. ಇದ್ದರೆ, ಪತ್ನಿ ಅನಿತಾ ಹೆಸರಿನಲ್ಲಿ ಚರಾಸ್ತಿ ಮೌಲ್ಯ 90,32,28,973 ರೂ. ಇದೆ. ಇನ್ನು ಕುಮಾರಸ್ವಾಮಿಯ ಸ್ಥಿರಾಸ್ತಿ ಮೌಲ್ಯ 43,94,42100 ರೂ. ಇದ್ದರೆ, ಪತ್ನಿ ಅನಿತಾ ಹೆಸರಿನಲ್ಲಿ 64,07,73,530 ರೂ. ಸ್ಥಿರಾಸ್ತಿ ಇದೆ. ಇನ್ನು ಹಿಂದು ಅವಿಭಕ್ತ ಕುಟುಂಬದ ಚರಾಸ್ತಿ ಆಸ್ತಿ 1.20ಕೋಟಿ ರೂ, ಹಿಂದೂ ಅವಿಭಕ್ತ ಕುಟುಂಬದ ಸ್ಥಿರಾಸ್ತಿ 6.97 ರೂ. ಇರುವುದಾಗಿ ತಮ್ಮ ನಾಮಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 20 =
Remember me
