ಹಾಸನ:ಮುಂದಿನ ಒಂದು ವಾರಗಳ ಕಾಲ ನಾನು ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ. ಜನರೆಲ್ಲರೂ ಚಂದ್ರಯಾನ-3ರ ಯಶಸ್ಸಿನ ಗುಂಗಿನಲ್ಲಿದ್ದು, ಎಲ್ಲರ ಗಮನ ಆ ಕಡೆಯೇ ಇದೆ. ಇವತ್ತು ದೇಶ-ವಿದೇಶಗಳಲ್ಲಿ ಚಂದ್ರಯಾನದ ಬಗ್ಗೆಯೇ ದೊಡ್ಡಮಟ್ಟದ ಚರ್ಚೆಗಳು ನಡೆಯುತ್ತಿವೆ, ಪ್ರಶಂಸೆಗಳು ಬರುತ್ತಿವೆ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನದಲ್ಲಿ ಈ ಕುರಿತು ಮಾತನಾಡಿದ ಮಾಜಿ ಸಿಎಂ ಎಚ್​.ಡಿ.ಕೆ ವಿಜ್ಞಾನಿಗಳ ಅವಿರತ ಶ್ರಮದಿಂದಾಗಿ ದೇಶದ ಪ್ರತಿಷ್ಠೆಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಪ್ರಧಾನಮಂತ್ರಿಗಳು ಬೆಂಗಳೂರಿಗೆ ಆಗಮಿಸಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿ ಹೋಗಿದ್ದಾರೆ. ಹೀಗಾಗಿ ರಾಜಕಾರಣ ಬಗ್ಗೆ ಹೆಚ್ಚಿಗೆ ಚರ್ಚೆ ಮಾಡಲು ಹೋಗಲ್ಲ ಎಂದಿದ್ದಾರೆ.
ಕೆಲವರು ನೀವು ಈ ಕಾಂಗ್ರೆಸ್​ ಸರ್ಕಾರದ ಬಗ್ಗ ಮಾತನಾಡುವುದು ಬೇಡ ಎಂದು ಹೇಳುತ್ತಿದ್ದಾರೆ. ಇವರು ತಪ್ಪುಗಳನ್ನು ಮಾಡಿಕೊಂಡು ಹೋಗಲಿ ಹಾಗೆಯೇ ಬಿಟ್ಟುಬಿಡಿ ಎಂದು ಬಹಳಷ್ಟು ಮಂದಿ ಹೇಳುತ್ತಿದ್ದಾರೆ. ಹಾಗೆಂದ ತಕ್ಷಣ ಇವರನ್ನು ಬಿಟ್ಟುಬಿಟ್ಟರೆ ಹೇಳೋರು ಕೇಳೋರು ಇಲ್ಲದಂತಾಗುತ್ತದೆ. ನಾನು ಸರ್ಕಾರಕ್ಕೆ ಹೇಳುವುದು ಇಷ್ಟೇ. ನಿಮ್ಮ‌ ಗ್ಯಾರಂಟಿ ಯೋಜನೆಗಳನ್ನು ಮಾಡಿಕೊಂಡು ಹೋಗಿ, ಸಂತೋಷ. ಅದು ಎಷ್ಟರಮಟ್ಟಿಗೆ ಇಡೀ ನಾಡಿನ ಜನತೆಗೆ ಅನೂಕೂಲ ಆಗುತ್ತಿದೆ ಎಂಬುದನ್ನು ಕಾದು ನೋಡೋಣ.
ಅದಾನಿ, ಅಂಬಾನಿಗೆ ಸೇರುವ ದುಡ್ಡನ್ನು ಪ್ರತಿಯೊಬ್ಬರಿಗೂ ಹಂಚುತಿದ್ದೇವೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅದ್ಯಾರಿಗೆ ಹಂಚುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಗೃಹಜ್ಯೋತಿ ಹೆಸರಿನಲ್ಲಿ ಜನರಿಗೆ ಟೋಪಿ ಹಾಕುವುದುನ್ನು ಪ್ರತಿನಿತ್ಯ ಕಾಣುತ್ತಿದ್ದೇವೆ. ಈಗಾಗಲೇ ಅನಧಿಕೃತ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ಮಂತ್ರಿಗಳು ಲೋಡ್ ಶೆಡ್ಡಿಂಗ್ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಯಾವ ಸಮಯದಲ್ಲಿ ವಿದ್ಯುತ್ ಕೊಡುತ್ತಾರೆ ಎಂದು ಹಳ್ಳಿ‌ಜನ ಕಾಯುತ್ತಾ ಕೂರಬೇಕಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:VIDEO| ಜೈ ಶ್ರೀರಾಮ್​ ಎಂದು ಬರೆದಿದ್ದಕ್ಕೆ ವಿದ್ಯಾರ್ಥಿಯನ್ನು ಅಮಾನುಷವಾಗಿ ಥಳಿಸಿದ ಶಿಕ್ಷಕ
ಅನಧಿಕೃತ ಲೋಡ್ ಶೆಡ್ಡಿಂಗ್‍ಗೆ ಯಾವುದೇ ರೀತಿಯ ಸಿದ್ಧತೆಗಳಿಲ್ಲ, ಮುಂದೆ ಆಗುವ ಸಮಸ್ಯೆಗಳ ಬಗ್ಗೆ ಚಿಂತನೆಯೂ ಇಲ್ಲ. ಮೊದಲು ರೈತರ ಪರಿಸ್ಥಿತಿ ಏನಾಗಿದೆ ಎನ್ನುವುದನ್ನು ಯೋಚನೆ ಮಾಡಬೇಕಿತ್ತು. 130 ತಾಲೂಕುಗಳಲ್ಲಿ ಬರದ ಛಾಯೆ ಮೂಡಿದೆ ಅಂತಾ ಕೃಷಿಮಂತ್ರಿಗಳೇ ಹೇಳೀದ್ದಾರೆ. ಭಿತ್ತನೆ ಸಂಪೂರ್ಣ ನಾಶವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗ್ಯಾರಂಟಿ ಎಂದು ವಿಜೃಂಭಿಸುವುದನ್ನು ಬಿಟ್ಟು ಮೊದಲು ರೈತರ ಬದುಕು ಏನಾಗಿದೆ ಎಂಬುದನ್ನು ನೋಡಲಿ ಎಂದು ಚಾಟಿ ಬೀಸಿದ್ದಾರೆ.
ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ನಮ್ಮ ರೈತರ ಹಿತವನ್ನು ಕಡೆಗಣಿಸಿದೆ. ಸರ್ವಪಕ್ಷದ ಸಭೆಯಲ್ಲೂ‌ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ನನ್ನ ಅಭಿಪ್ರಾಯವನ್ನು ನೇರವಾಗಿ ಹೇಳಿದ್ದೇನೆ. ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ನೀರು ಬಿಡಿ ಎಂದಾಗಲೇ ಸರ್ವಪಕ್ಷದ ಸಭೆ ಕರೆದು ಚರ್ಚೆ ಮಾಡಬೇಕಿತ್ತು.
ಸುಪ್ರೀಂಕೋರ್ಟ್‌ಗೆ ತಮಿಳುನಾಡಿನವರು ಅರ್ಜಿ ಹಾಕಿಕೊಂಡಾಗ ತೀರ್ಪು ಬರುವವರೆಗೂ ಕಾಯಬೇಕಿತ್ತು. ಏಕಾಏಕಿ ನೀರು ಬಿಟ್ಟುಬಿಟ್ಟರು, ನಂತರ ರೈತರು ಪ್ರತಿಭಟನೆ ಮಾಡಲು ಹೋದಾಗ ‘ನೀವು ಕೋರ್ಟ್‌ಗೆ ಕೇಸ್ ಹಾಕಿಕೊಳ್ಳಿʼ ಎಂದು ಡಿಸಿಎಂ ಡಿಕೆಶಿ ಹೇಳಿದರು. ಇಂತಹ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಿ ಎಂದು ಸಭೆಯಲ್ಲಿ ನೇರವಾಗಿಯೇ ಹೇಳಿದ್ದೇನೆ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × three =
Remember me
