ಹುಬ್ಬಳ್ಳಿ:ಬಿಜೆಪಿಗೆ ಗುಡ್​ ಬೈ ಹೇಳಿ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ತಮ್ಮ ರಾಜಕೀಯ ಜೀವನದಲ್ಲಿ ಮತ್ತೊಂದು ದೃಢ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಶೆಟ್ಟರ್​ ಅವರು ಚುನಾವಣೆಗೂ ಮುನ್ನವೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದು‌ ನನ್ನ‌ ಕೊನೆಯ ಚುನಾವಣೆ, ಇದೊಂದು ಬಾರಿಗೆ ನನಗೆ ಅವಕಾಶ ಮಾಡಿಕೊಡಿ ಎಂದು ಕರಪತ್ರಗಳ ಮುಖಾಂತರವೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:ಮದ್ಯದ ಅಮಲಿನಲ್ಲಿ ದೆಹಲಿ ಪೊಲೀಸರಿಂದ ಹಲ್ಲೆ: ಪ್ರತಿಭಟನಾ ನಿರತ ಕುಸ್ತಿಪಟುಗಳಿಂದ ಆರೋಪ
ನಾನು ಓರ್ವ ಜನಪ್ರತಿನಿಧಿಯಾಗಿ ಅನೇಕ ಸಾಧನೆ ಮಾಡಿದ್ದೇನೆ. ನಾನು ಅಧಿಕಾರಕ್ಕಾಗಿ ಪಕ್ಷ ಬಿಟ್ಟಿದ್ದೇನೆ ಎಂಬ ಅಪಪ್ರಚಾರ ಭರಾಟೆಯಿಂದ ಸಾಗಿದೆ. ಅದರ ನಾನು ಬಗ್ಗೆ ನಾನು ತೆಲೆ ಕೆಡಿಸಿಕೊಂಡಿಲ್ಲ. ನಾನು ಎಂದೂ ಕೂಡ ಅಧಿಕಾರಕ್ಕೆ ದುಂಬಾಲು ಬಿದ್ದಿಲ್ಲ. ರಾಜಕೀಯ ಜೀವನ ಆರಂಭದಿಂದಲೂ ತತ್ವ, ಸಿದ್ಧಾಂತ ಆಧಾರದ ರಾಜಕಾರಣ ಮಾಡಿಕೊಂಡು ಬಂದವನು.
ಈಗ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿರುವುದು ನಿರ್ದಿಷ್ಟ ಉದ್ದೇಶಕ್ಕಾಗಿ. ಕುಲಗೆಟ್ಟು ಹೋಗುತ್ತಿರುವ ವ್ಯವಸ್ಥೆಯಲ್ಲಿ ಪರಿವರ್ತನೆ ಆಗಬೇಕಿದೆ. ಇದು ನನ್ನ‌ ಕಟ್ಟ ಕಡೆಯ ಚುನಾವಣೆಯಾಗಿದೆ. 7ನೇ ಬಾರಿಗೆ ಚುನಾವಣೆ ಎದುರಿಸುತ್ತಿರುವ ನಾನು ಗೆದ್ದೇ ಗೆಲ್ಲುತ್ತೇನೆ. ಈ ಅವಧಿ ಮುಗಿದ ಬಳಿಕ ಚುನಾವಣಾ ರಾಜಕಾರಣದಿಂದ ನಿರ್ಗಮಿಸುತ್ತೇನೆ ಎಂದು ಕರಪತ್ರದಲ್ಲಿ ಶೆಟ್ಟರ್​ ಉಲ್ಲೇಖ ಮಾಡಿದ್ದಾರೆ.
ಇದನ್ನೂ ಓದಿ:ಜಾಮೀನು ಕೊಡದ ಜಡ್ಜ್​ಗೆ ಸುಪ್ರೀಂ ಕೋರ್ಟ್ ಶಿಕ್ಷೆ; ಕೋರ್ಟ್ ಕಾರ್ಯದಿಂದ ಬಿಡುಗಡೆ ಮಾಡಿ ನ್ಯಾಯಾಂಗ ಅಕಾಡೆಮಿಗೆ ವರ್ಗ
ನನ್ನ ಈ ಮಾತುಗಳಿಗೆ ನಾನು ಕಟಿಬದ್ಧನಾಗಿದ್ದೇನೆಂದು ವಿರೋಧಿಗಳಿಗೆ ರಾಜಕೀಯ ನಿವೃತ್ತಿ ಮುಖಾಂತರವೇ ಶೆಟ್ಟರ್ ಟಕ್ಕರ್ ಕೊಟ್ಟಿದ್ದಾರೆ.(ದಿಗ್ವಿಜಯ ನ್ಯೂಸ್​)
ವಿಶ್ವ ಬ್ಯಾಂಕ್ ಮುಂದಿನ ಅಧ್ಯಕ್ಷರಾಗಿ ಭಾರತ ಮೂಲದ ಅಜಯ್ ಬಂಗಾ ಅವಿರೋಧ ಆಯ್ಕೆ!

ಮಹಾನ್ ಪ್ರಾಕೃತಿಕ ದೇವಾಲಯ ಹಿಮಾಲಯ

ಯಾರ ಪಾಲಾಗಲಿದೆ ಬೆಳಗಾವಿ ಕುಂದಾ?: ರಮೇಶ ಜಾರಕಿಹೊಳಿ ಜಿದ್ದಿಗೆ ಲಕ್ಷ್ಮೀ, ಲಕ್ಷ್ಮಣ ಸವದಿ ಸವಾಲು

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:three × four =
Remember me
