ಮೈಸೂರು:ಅಹಿಂದ ನಾಯಕ ಎಂದೇ ಗುರುತಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಣಿಯಲು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಅಹಿಂದ ಅಸ್ತ್ರವನ್ನೇ ಹೂಡಿದ್ದಾರೆ.
ವರುಣ ಕ್ಷೇತ್ರ ದಿನದಿಂದ ದಿನಕ್ಕೆ ಭರ್ಜರಿ ಕಾವು ಪಡೆದುಕೊಳ್ಳುತ್ತಿದೆ. ಬಿಜೆಪಿಯ ಪ್ರಭಾವಿ ನಾಯಕ ವಿ. ಸೋಮಣ್ಣ ಹಾಗೂ ಜೆಡಿಎಸ್​ನಿಂದ ಡಾ. ಭಾರತಿಶಂಕರ್​ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಣದಲ್ಲಿದ್ದಾರೆ.ಇದನ್ನೂ ಓದಿ:ಭಾರತ-ಚೀನಾ ಜನಸಂಖ್ಯೆ ಕುರಿತು ವ್ಯಂಗ್ಯಚಿತ್ರ; ವ್ಯಾಪಕ ಖಂಡನೆ
ಸಿದ್ದು ಅಣಿಯಲು ವರುಣ ಅಖಾಡಕ್ಕೆ ಧುಮುಕಿರುವ ಮಾಜಿ ಸಿಎಂ ಎಚ್ .ಡಿ.ಕುಮಾರಸ್ವಾಮಿ, ಜೆಡಿಎಸ್‌ ಅಭ್ಯರ್ಥಿ ಪರ ವರುಣದಲ್ಲಿ ಪ್ರಚಾರ ಮಾಡಲಿದ್ದಾರೆ. ಅಹಿಂದಾ ಸಮಾವೇಶದ ಹೆಸರಿನಲ್ಲಿ ಸಂಜೆ 4 ಗಂಟೆಗೆ ವರುಣ ಕ್ಷೇತ್ರದ ಪ್ರಚಾರ ಸಭೆ ಕರೆದಿದ್ದಾರೆ. ಟಿ.ನರಸೀಪುರದ ತ್ರಿವೇಣಿ ಸಂಗಮ‌ ಸ್ಥಳದಲ್ಲಿ ಸಭೆ ನಡೆಯಲಿದೆ.
ಈ ಬಾರಿ ಸಿದ್ದು ಅಣಿಯಲು ಕುಮಾರಸ್ವಾಮಿ ಅವರು ದಲಿತ ಅಸ್ತ್ರ ಬಿಟ್ಟಿದ್ದಾರೆ. ಇದು ಯಾವ ರೀತಿ ಫಲ ಕೊಡುತ್ತದೆ ಎಂಬುದನ್ನು ಚುನಾವಣಾ ಫಲಿತಾಂಶ ಬಂದಾಗಲೇ ತಿಳಿಯುತ್ತದೆ. ಮೈಸೂರು ನಗರದ ಚಾಮರಾಜ ಹಾಗೂ ಕೃಷ್ಣರಾಜ ಕ್ಷೇತ್ರದಲ್ಲಿಯೂ ಎಚ್​ಡಿಕೆ ಪ್ರಚಾರ ಸಭೆ ನಡೆಸಲಿದ್ದಾರೆ.ಇದನ್ನೂ ಓದಿ:ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ; ಭಾರತ ಮೂಲದ ವ್ಯಕ್ತಿ ಬಂಧನ
ನಿರಂತರ ಪ್ರಚಾರದಿಂದ ತೀವ್ರವಾಗಿ ದಣಿದಿದ್ದ ಎಚ್​.ಡಿ. ಕುಮಾರಸ್ವಾಮಿ ಅವರು ಜ್ವರದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡ್ಮೂರು ದಿನ ವಿಶ್ರಾಂತಿ ಪಡೆದು, ಇಂದು ಮತ್ತೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.(ದಿಗ್ವಿಜಯ ನ್ಯೂಸ್​)
ಮೈಸೂರಿನಲ್ಲಿ ಕಾವೇರಿದ ಚುನಾವಣಾ ಅಖಾಡ: ಮೂರೂ ಪಕ್ಷದ ಘಟಾನುಘಟಿ ನಾಯಕರಿಂದ ಇಂದು ಪ್ರಚಾರ

ಕಿವಿಗೆ ಸಂಬಂಧಪಟ್ಟ ಕಿರಿಕಿರಿ, ನೋವು ನಿಯಂತ್ರಣಕ್ಕೆ ಶೂನ್ಯ ಮುದ್ರೆ

ಸಾಮಾಜಿಕ ಕ್ರಾಂತಿಯ ಸಂತ; ಇಂದು ರಾಮಾನುಜ ಜಯಂತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − ten =
Remember me
