ಮೈಸೂರು: ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ಮಾಜಿ ಸಚಿವ, ಬಿಜೆಪಿ ನಾಯಕ ಮುರುಗೇಶ ನಿರಾಣಿ ಅವರು ಮಂಗಳವಾರ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನು ಮೈಸೂರು ಅರಮನೆಯಲ್ಲಿ ಭೇಟಿ ಮಾಡಿದರು.
ಮುಂದಿನ 20 ವರ್ಷಗಳ ಅವಧಿಗಾಗಿ 405 ಕೋಟಿ ರೂ.ಗೆ ಈ ಸಕ್ಕರೆ ಕಾರ್ಖಾನೆಯನ್ನು ತಾವು ಗುತ್ತಿಗೆ ಪಡೆದಿದ್ದು, ಅದರ ಪುನರಾರಂಭಕ್ಕೆ ಸಂಬಂಧಿಸಿದ ಸಮಾರಂಭಕ್ಕೆ ಆಹ್ವಾನಿಸಲು ರಾಜವಂಶಸ್ಥರ ಬಳಿ ಬಂದಿರುವುದಾಗಿ ನಿರಾಣಿ ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿಮೈಶುಗರ್ ಸೇರಿ 3 ಸಕ್ಕರೆ ಕಾರ್ಖಾನೆ ಖಾಸಗೀಕರಣ
ಇದೇ ವೇಳೆ ನಿರಾಣಿ ಗ್ರೂಪ್‌ನ ಕಾರ್ಯಚಟುವಟಿಕೆ, ಸಕ್ಕರೆ ವಹಿವಾಟು, ಸ್ಥಳೀಯ ರಾಜಕೀಯ ಮತ್ತಿತರ ವಿಷಯಗಳ ಕುರಿತು ಇಬ್ಬರೂ ಗಣ್ಯರ ನಡುವೆ ಚರ್ಚೆ ನಡೆಯಿತು ಎನ್ನಲಾಗಿದೆ. ಪಾಂಡವಪುರ ಸಕ್ಕರೆ ಕಾರ್ಖಾನೆ ಇನ್ನು ಎರಡು ತಿಂಗಳಲ್ಲಿ ಪುನರಾರಂಭಿಸಲು ನಿರಾಣಿ ಗ್ರೂಪ್ ನಿರ್ಧರಿಸಿದೆ. ನಿರ್ದಿಷ್ಟ ದಿನಾಂಕ ಇನ್ನೂ ಅಂತಿಮವಾಗಿಲ್ಲ.
ನಿರಾಣಿ ಫೌಂಡೇಶನ್‌ದಿಂದ ನೆರವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + seventeen =
Remember me
