ದಾವಣಗೆರೆ:ಯಡಿಯೂರಪ್ಪ ಕೇವಲ ಲಿಂಗಾಯತ ಸಮುದಾಯದ ನಾಯಕರಾಗಿರಲಿಲ್ಲ. ಎಲ್ಲಾ ಸಮುದಾಯದ ನಾಯಕರಾಗಿದ್ದರು. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ದೊಡ್ಡ ಹೊಡೆತವೆಂದು ತಮ್ಮ ಪಕ್ಷದ ನಾಯಕರ ವಿರುದ್ಧವೇ ಮಾಜಿ ಸಚಿವ ರೇಣುಕಾಚಾರ್ಯ ಅವರು ಗುಡುಗಿದ್ದಾರೆ.
ಹೊನ್ನಾಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇಣುಕಾಚಾರ್ಯ ಅವರು ನಾನು ಒಳಮೀಸಲಾತಿ ಕೊಡಬೇಡಿ ಎಂದು ಈ ಮೊದಲೇ ಹೇಳಿದ್ದೆ. ಆದರೆ ಚುನಾವಣಾ ಹೊತ್ತಲ್ಲಿ ಜಾರಿ ಮಾಡಿದ್ದು ಭಾರೀ ಪೆಟ್ಟು ಕೊಟ್ಟಿತು. ಕೇಂದ್ರ ಸರ್ಕಾರದ ಅಕ್ಕಿ ಕೊಡೋದು ನಿಲ್ಲಿಸಬೇಡಿ ಅಂತೆಯೂ ಹೇಳಿದ್ದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ಇದನ್ನೂ ಓದಿ:VIDEO| ಬಾಯ್​ಫ್ರೆಂಡ್​​ ಇದ್ದಾನೆಂದ ಮಗಳಿಗೆ ಮುಖ ಮೂತಿ ನೋಡದೆ ಗುದ್ದಿದ ತಾಯಿ!
ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿ 70 ಜನರಿಗೆ ಟಿಕೆಟ್ ತಪ್ಪಿದ್ದು ಚುನಾವಣೆಗೆ ಹಿನ್ನಡೆಯಾಯಿತು. ಅಷ್ಟೇ ಅಲ್ಲ, ಹಿರಿಯರನ್ನು ಬಿಟ್ಟು ಸುಧಾಕರ್ ನೇತೃತ್ವದಲ್ಲಿ ಚುನಾವಣಾ ಪ್ರಣಾಳಿಕೆ ಮಾಡಿದರು. ಸೋಲಾಗಿದ್ದು ಕಾರ್ಯಕರ್ತರಿಂದಲ್ಲ. ಬಿಜೆಪಿ ಪಕ್ಷದ ತಪ್ಪು ನಿರ್ಧಾರದಿಂದ. ನಾನು ಇದನ್ನು ನೇರವಾಗಿ ಹೇಳುತ್ತೇನೆ ಎಂದು ಪಕ್ಷದ ವಿರುದ್ಧವೇ ಹರಿಹಾಯ್ದಿದ್ದಾರೆ ರೇಣುಕಾಚಾರ್ಯ.
ಟ್ವೀಟ್ ಮಾಡಿದ ಕಾಂಗ್ರೆಸ್ಬಿಜೆಪಿಯಲ್ಲಿ ಅಂತರ್ಯುದ್ಧ ಜೋರಾಗಿರುವ ಕುರಿತು ಕಾಂಗ್ರೆಸ್ ಕೂಡ ಟ್ವೀಟ್ ಮಾಡಿದ್ದು, ಬಿಜೆಪಿಯಲ್ಲಿ ಮಾತಿನ ಮಲ್ಲಯುದ್ಧ ನಡೆಯುತ್ತಿದೆ. ಮುಂದೆ RSS ನವರ ಲಾಠಿ ಕಸಿದುಕೊಂಡು ಬಡಿದಾಡಿಕೊಂಡರೂ ಆಶ್ಚರ್ಯವಿಲ್ಲ. ಚುನಾವಣೆಯ ಸೋಲಿನ ನಂತರ ಮರೆಗೆ ಸರಿದ ಜೋಶಿ-ಸಂತೋಷ್ ಜೋಡಿ ತೆರೆಯ ಹಿಂದೆ ಕುಳಿತು ಆಡಿಸುತ್ತಿರುವ ಗೊಂಬೆಯಾಟ ಇದು ಎಂದು ಲೇವಡಿ ಮಾಡಿದೆ.
‘ಸೈಕೋ ವುಮನ್ ಶ್ರುತಿ ಹಾಸನ್ ಗೆಳೆಯನೊಂದಿಗೆ ನಿತ್ಯ ಡ್ರಗ್ಸ್ ಸೇವಿಸುತ್ತಾರೆ’






ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
