ಹಾವೇರಿ:ಶಿಗ್ಗಾವಿಯಲ್ಲಿ 2 ಸಾವಿರ ವರ್ಷಗಳ ಇತಿಹಾಸವುಳ್ಳ ಹುಣಸೆ ಮರ ಧರೆಗೆ ಉರುಳಿತ್ತು. ಇದೀಗ ಘಟನೆ ನಡೆದ ಸ್ಥಳಕ್ಕೆ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಭೇಟಿ ನೀಡಿ ಬೇಸರ ವ್ಯಕ್ತಪಡಿಸಿದ್ದಾರೆ.

ನಿನ್ನೆ ಧರೆಗೆ ಉರುಳಿದ 2 ಸಾವಿರ ವರ್ಷಗಳ ಐತಿಹಾಸಿಕ ದೊಡ್ಡ ಹುಣಸೆ ಮರ ಸವಣೂರು ಪಟ್ಟಣದ ಶ್ರೀ ದೊಡ್ಡಹುಣಸೆ ಕಲ್ಲ ಮಠದ ಆವರಣದಲ್ಲಿದೆ. ಶ್ರೀ ಮಠದಲ್ಲಿ ಒಟ್ಟು 3 ದೊಡ್ಡ ಹುಣಸೆ ಮರಗಳಿದ್ದು ಅದರ ಪೈಕಿ ನಿನ್ನೆ ಒಂದು ಮರ ಧರೆಗೆ ಉರುಳಿದ್ದು ಸಾವಿರಾರು ವರ್ಷಗಳ ಹಿಂದೆ ಗೋರಕನಾಥ ಸ್ವಾಮೀಜಿ ಗಿಡಗಳನ್ನು ನೆಟ್ಟು ಹೋಗಿದ್ದರು ಎನ್ನುವ ಪ್ರತೀತಿ ಇದೆ.
ಶ್ರೀ ಮಠದಲ್ಲಿದ್ದ ಈ ಮರ ಅನೇಕರ ಭಕ್ತಿಯ ಪ್ರತೀಕವಾಗಿತ್ತು. ದೊಡ್ಡ ಹುಣಸೆ ಮರ ನೋಡಲು ಅನೇಕರು ಮಠಕ್ಕೆ ಭೇಟಿ ನೀಡುತ್ತಿದ್ದರು. ದೊಡ್ಡ ಹುಣಸೆ ಮರ ಕೇವಲ ಮರ ಆಗದೆ ಈ ಮಠದ ಅವಿಭಾಜ್ಯ ಅಂಗವಾಗಿತ್ತು.
ಧರೆಗುರುಳಿದ ಮರವನ್ನು ವೀಕ್ಷಿಸಲು ಮಠಕ್ಕೆ ಭೇಟಿ ನೀಡಿದ್ದ ಅಜ್ಜಂಪೀರ ಖಾದ್ರಿ, “ಅನೇಕರ ಭಕ್ತಿಯ ಪ್ರತೀಕವಾಗಿದ್ದ ಈ ಮರ ನಿನ್ನೆ ಧರೆಗೆ ಉರುಳಿ ನಮಗೆ ಹಾಗೂ ಮಠಕ್ಕೆ ದೊಡ್ಡ ನಷ್ಟವಾಗಿದೆ” ಎಂದು ಶಿಗ್ಗಾವಿ ಮಾಜಿ ಶಾಸಕ ಅಜ್ಜಂಫೀರ ಖಾದ್ರಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − twelve =
Remember me
