ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಈ ಮಧ್ಯೆ ಪಕ್ಷಾಂತರ ಪರ್ವ ಕೂಡ ಜೋರಾಗಿದೆ.
ಟಿಕೆಟ್​ ಸಿಗದೆ ಇರುವ ಆಕಾಂಕ್ಷಿಗಳು ಬೇರೆ ಪಕ್ಷಗಳತ್ತ ಮುಖ ಮಾಡುವುದು ಸಾಮಾನ್ಯವಾಗಿದ್ದು ಈ ನೆಲೆಯಲ್ಲಿ ಕಾಂಗ್ರೆಸ್​ಗೆ ಮತ್ತೊಂದು ಆಘಾತ ಎದುರಾಗಿದೆ.
ಇನ್ನು ತಮಗೆ ಕಾಂಗ್ರೆಸ್​ ಪಕ್ಷದಿಂದ ಟಿಕೆಟ್​ ಸಿಗದ ಕಾರಣ ಅಸಮಾಧಾನಗೊಂಡಿದ್ದ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್​ ಜೆಡಿಎಸ್​ ಸೇರಿದ್ಧಾರೆ.
ಇದನ್ನೂ ಓದಿ:VIDEO| ವಿಮಾನದಲ್ಲಿ ಮಗುವಿನ ಅಳು ತಾಳಲಾರದೆ ಕೂಗಾಡಿದ ಪ್ರಯಾಣಿಕ; ಮುಂದೇನಾಯ್ತು?
ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹಾಗೂ ಪಕ್ಷದ ವರಿಷ್ಠ ಎಚ್​.ಡಿ.ದೇವೇಗೌಡ ಸಮ್ಮುಖದಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ಜೆಡಿಎಸ್​​ ಸೇರ್ಪಡೆಯಾಗಿದ್ದಾರೆ.
ಇನ್ನು ತಮಗೆ ಕಾಂಗ್ರೆಸ್​ ಪಕ್ಷದಿಂದ ಟಿಕೆಟ್​ ಸಿಗದ ಹಿನ್ನಲೆಯಲ್ಲಿ ಬೇಸರಗೊಂಡಿದ್ದ ಪ್ರಸನ್ನ ಕುಮಾರ್​ ಜೆಡಿಎಸ್​ ಪಕ್ಷದಿಂದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್​ಗಾಗಿ ಕಸರತ್ತು ನಡೆಸಿದ್ದರು. ಆದರೆ, ಟಿಕೆಟ್​ ಅಂತಿಮ ಕ್ಷಣದಲ್ಲಿ ಆಯನೂರು ಮಂಜುನಾಥ್​ ಪಾಲಾದ ಕಾರಣ ಪ್ರಸನ್ನ ಕುಮಾರ್​ ಬಿ ಫಾರಂ ಪಡೆಯುವಲ್ಲಿ ವಿಫಲರಾಗಿದ್ದರು. ​
ಜೆಡಿಎಸ್​ನಲ್ಲಿ ಟಿಕೆಟ್​ ಸಿಗದ ಮುನಿಸಿನ ನಡುವೆಯೂ ಪಕ್ಷದ ಅಭ್ಯರ್ಥಿ ಆಯನೂರು ಮಂಜುನಾಥ್​ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ್​ ಪ್ರಸನ್ನ ಕುಮಾರ್​ ಅವರ ಮನವೊಲಿಸಿ ಜೆಡಿಎಸ್​ ಪಕ್ಷಕ್ಕೆ ಕರೆತಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
