ಬೆಂಗಳೂರು: ಕಷ್ಟದ ಕಾಲದಲ್ಲಿ ನಿಮ್ಮೊಂದಿಗೆ ಇದ್ದ ನನ್ನನ್ನು ಮರೆಯಬೇಡಿ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೇಳಿ ತುಳಸಿ ಮುನಿರಾಜುಗೌಡ ಕೋರ್ಟ್​ನಲ್ಲಿ ನನ್ನ ವಿರುದ್ಧ ಹಾಕಿರುವ ಕೇಸು ಹಿಂದಕ್ಕೆ ಪಡೆಯುವಂತೆ ಮಾಡಿ ಎಂದು ಮಾಜಿ ಶಾಸಕ ಮುನಿರತ್ನ ನೂತನ ಸಚಿವರಲ್ಲಿ ಮನವಿ ಮಾಡಿದರು.
ಕುಮಾರ ಕೃಪಾ ಗೆಸ್ಟ್​ಹೌಸ್​ನಲ್ಲಿ ಸಚಿವರಾದ ಎಸ್​.ಟಿ.ಸೋಮಶೇಖರ್​, ನಾರಾಯಣಗೌಡ ಹಾಗೂ ಬಿ.ಸಿ.ಪಾಟೀಲ್​ ಅವರನ್ನು ಭೇಟಿ ಮಾಡಿದ ಮಾಜಿ ಶಾಸಕ ಮುನಿರತ್ನ ತಮ್ಮ ನೋವು ತೋಡಿಕೊಂಡರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲಿ ಎಂದು ನಾನು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದೆ. ಆದರೆ ಮುನಿರಾಜು ಗೌಡ ಕೇಸನ್ನು ಹಿಂದಕ್ಕೆ ಪಡೆಯುತ್ತಿಲ್ಲ. ನಾನು ಈಗ ಕಷ್ಟದಲ್ಲಿ ಇದ್ದೇನೆ. ಚುನಾವಣೆ ಎದುರಿಸಿ ಶಾಸಕನಾಗಬೇಕು. ಕೇಸು ಹಿಂದಕ್ಕೆ ಪಡೆಯುವಂತೆ ನೀವು ಸಿಎಂಗೆ ಒತ್ತಡ ಹಾಕಿ. ಕಷ್ಟದ ಕಾಲದಲ್ಲಿ ನಾನು ನಿಮ್ಮೊಂದಿಗೆ ಇದ್ದೆ. ಈಗ ನಾನು ಕಷ್ಟ ಎದುರಿಸುತ್ತಿದ್ದೇನೆ. ಈಗ ನೀವು ನನ್ನನ್ನು ಕೈಬಿಡಬೇಡಿ ಎಂದು ಅವರು ಸಚಿವರಲ್ಲಿ ಮನವಿ ಮಾಡಿದರು. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
