ತುಮಕೂರು:ಮಾಜಿ ಶಾಸಕರ ಕಾರು ಡಿಕ್ಕಿ ಹೊಡೆದು ರೈತರೊಬ್ಬರ ಕಾಲು ಮುರಿತಕ್ಕೊಳಗಾದ ಘಟನೆ ಸಂಭವಿಸಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ತೊಳಲಿ ಗ್ರಾಮದಲ್ಲಿ ಈ ಅವಘಡ ಉಂಟಾಗಿದೆ. ಗಾಯಾಳುವನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿಯ ಸುರೇಶ್​ ಗೌಡ ಅವರ ಫಾರ್ಚೂನರ್ ಕಾರು, ಟಿವಿಎಸ್ ಎಕ್ಸ್​ಎಲ್​ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ತೊಳಲಿ ಗ್ರಾಮದ ರೈತ ಸುರೇಶ್ ಎಂಬವರ ಕಾಲು ಮುರಿತಕ್ಕೊಳಗಾಗಿದೆ.
ಮಾಜಿ ಶಾಸಕರು ಮೈಸೂರಿನಿಂದ ತುಮಕೂರು ಕಡೆಗೆ ಸಾಗುತ್ತಿದ್ದು, ರೈತ ಸುರೇಶ್ ತಮ್ಮ ದ್ವಿಚಕ್ರ ವಾಹನದಲ್ಲಿ ಜಮೀನಿನಿಂದ ಜಾನುವಾರುಗಳಿಗೆ ಮೇವು ತೆಗೆದುಕೊಂಡು ಬರುತ್ತಿರುವಾಗ ಈ ಅಪಘಾತ ಸಂಭವಿಸಿದೆ.
ಅಪಘಾತ ಮಾಡಿ ಗಾಯಾಳು ರೈತನ ಮೇಲೆ ಮಾಜಿ ಶಾಸಕರು ಎಗರಾಡಿದ್ದು, ಜನರು ಜಮಾಯಿಸುತ್ತಿದ್ದಂತೆ ಸುಮ್ಮನಾಗಿದ್ದಾರೆ. ಬಳಿಕ ತನ್ನ ಕಾರು ಬಿಟ್ಟು, ಬೇರೊಂದು ಕಾರಿನಲ್ಲಿ ಗಾಯಳುವನ್ನು ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ. ನಾಗಮಂಗಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.
ಇಲ್ಲಿ ಸದ್ಯಕ್ಕೆ ಪಾನಿಪುರಿ ಮಾರಾಟ ನಿಷೇಧ: ಕಾರಣ ಮತ್ತೇನೂ ಅಲ್ಲ, ಇದು..

ಭ್ರಷ್ಟಾಚಾರದ ಆರೋಪದಲ್ಲಿ ಬಂಧಿತ ಐಎಎಸ್ ಅಧಿಕಾರಿಯ ಪುತ್ರ ಗುಂಡಿಟ್ಟುಕೊಂಡು ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 12 =
Remember me
