ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ಆನ್​ಲೈನ್​ ವಂಚನೆ ದಿನೇ ದಿನೇ ಹೆಚ್ಚುತ್ತಿದೆ. ನಾನಾ ರೀತಿಗಳಲ್ಲಿ ಸೈಬರ್​ ಕಳ್ಳರು ಜನರ ಖಾತೆಗಳಿಗೆ ಕನ್ನ ಹಾಕುತ್ತಾರೆ. ದುಃಖದ ವಿಚಾರ ಏನೆಂದರೆ ಅನೇಕ ಸುಶಿಕ್ಷಿತರೂ ವಂಚಕರ ಮಾತಿಗೆ ಮರುಳಾಗಿ ಹಣವನ್ನು ಕಳೆದುಕೊಂಡಿರುತ್ತಾರೆ. ಇದೀಗ ಮಾಜಿ ಸಂಸದರೊಬ್ಬರ ಮಗನ ಖಾತೆಗೇ ಸೈಬರ್​ ವಂಚಕರು, ಕನ್ನ ಹಾಕಿದ್ದಾರೆ.
ಆನ್‌ಲೈನ್ ಮೂಲಕ ಎಂಎಲ್‌ಸಿ ಪುತ್ರ ಅಮಿತ್ ದೇವರಹಟ್ಟಿ ಅವರ ಖಾತೆಗೆ ಕನ್ನ ಹಾಕಲಾಗಿದೆ. ಇದೀಗ 1.99 ಲಕ್ಷ ರೂ. ಹಣವನ್ನು ಅಪರಿಚಿತನೊಬ್ಬ ವರ್ಗಾವಣೆ ಮಾಡಿಕೊಂಡಿದ್ದಾನೆ.
ಎಟಿಎಂಗೆ ಹಣ ಡ್ರಾ ಮಾಡಲು ಹೋಗಿದ್ದ ಅಮಿತ್, ಹಣ ಬಾರದ ಹಿನ್ನೆಲೆಯಲ್ಲಿ ಕಸ್ಟಮರ್ ಕೇರ್ ನಂಬರ್‌‌ಗೆ ಕರೆ ಮಾಡಿದ್ದಾರೆ. ಅವರು ಈ ಸಂದರ್ಭ, ಗೂಗಲ್‌ನಲ್ಲಿ ನಂಬರ್ ಹುಡುಕಿ ಕರೆ ಮಾಡಿರುವುದೇ ತಪ್ಪಾಗಿದೆ. ಆ ಬದಿಯಲ್ಲಿ ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ, ಬ್ಯಾಂಕ್ ಖಾತೆ ವಿವರ ಪಡೆದು ಹಣ ಲಪಟಾಯಿಸಿದ್ದಾನೆ. ಇದೀಗ ಅವರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen − 2 =
Remember me
