ಮಂಡ್ಯ:ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಎಸ್​ಐಟಿ ತನಿಖೆ ಚುರುಕುಗೊಳಿಸಿರುವ ಬೆನ್ನಲ್ಲೇ ಹೊಸ ಆರೋಪಗಳು ಕೇಳಿ ಬರುತ್ತಿವೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ, ಬಿಜೆಪಿ ನಾಯಕ ಎಲ್​.ಆರ್. ಶಿವರಮೇಗೌಡ ಹೊಸ ಆರೋಪಗಳನ್ನು ಮಾಡಿದ್ದಾರೆ.
ಮಂಡ್ಯದಲ್ಲಿ ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಶಿವರಾಮೇಗೌಡ, ಪ್ರಜ್ವಲ್ ರೇವಣ್ಣ ಮುಂದೆ ಉಮೇಶ್ ರೆಡ್ಡಿ ಕೂಡ ಕಡಿಮೆ. ಬ್ಲೂ ಫಿಲ್ಮ್ ಮಾಡುವವರ ಬಳಿಯೂ ಇಷ್ಟೊಂದು ವಿಡಿಯೋಗಳು ಇರುವುದಿಲ್ಲ. ಎಂಪಿಯಾಗಿ ಐದು ವರ್ಷ ಏನನ್ನು ಮಾಡಿಲ್ಲ. ದಿನಕ್ಕೆ ಮೂವರಂತೆ ಐದು ವರ್ಷ ಇದನ್ನೇ ಮಾಡಿದ್ದಾನೆ. ನಮ್ಮಂತವರನ್ನು ತುಳಿದ ಪಾಪದಿಂದ ದೇವೇಗೌಡರಿಗೆ ಇಂತಹ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:VIDEO| ಭಾರತದ ಕ್ರಿಕೆಟಿಗನನ್ನು ತೆಗಳಿ ಪಾಕ್​ ಆಟಗಾರನನ್ನು ಹೊಗಳಿದ ಊರ್ವಶಿ ರೌಟೇಲಾ
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಕೂಡಲೇ ಸಂತ್ರಸ್ಥೆಯರ ಪರವಾಗಿ ಹೋರಾಟ ಮಾಡಬೇಕು. ಅಲ್ಲದೇ ಜೆಡಿಎಸ್​ ಪಕ್ಷವನ್ನು ಎನ್​ಡಿಎ ಮೈತ್ರಿಕೂಟದಿಂದ ಹೊರಹಾಕಬೇಕು. ಹಾಸನದಲ್ಲಿ ನಡೆದಿದ್ದ ಘಟನೆ ಇಂಗ್ಲೆಂಡ್​ನಲ್ಲೂ ನಡೆದಿತ್ತು. ರೇವಣ್ಣ ಇದೇ ರೀತಿ ಇಂಗ್ಲೆಂಡ್​ನಲ್ಲೂ ಸಿಕ್ಕಿಬಿದ್ದಿದ್ದರು. ಎಸ್​ಐಟಿ ತಂಡ ಇಂಗ್ಲೆಂಡ್​ಗೆ ಹೋಗಿ ತನಿಖೆ ಮಾಡಲಿ ಎಂದು ಸಂಸದ ಶಿವರಾಮೇಗೌಡ ಆಗ್ರಹಿಸಿದ್ದಾರೆ.
ಪ್ರಜ್ವಲ್​ ರೇವಣ್ಣ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಮಾಜಿ ಸಂಸದ, ಒಂದು ಕಾಲದಲ್ಲಿ ದೇವೇಗೌಡರ ಕುಟುಂಬದ ಪರಮಾಪ್ತ ಶಿವರಾಮೇಗೌಡ ಹೇಳಿಕೆ ಸಂಚಲನ ಮೂಡಿಸಿದ್ದು, ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
