ತುಮಕೂರು:ಖಾಸಗಿಯವರ ಗುತ್ತಿಗೆ ಅವಧಿ ಮುಗಿದಿರುವ ಕುಣಿಗಲ್​ ಸ್ಟಡ್​ ಫಾರ್ಮ್​ ಅಭಿವೃದ್ಧಿಯ ಹೊಣೆಯನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಬೇಕು ಎಂದು ಮಾಜಿ ಸಂಸದ ಎಸ್​.ಪಿ.ಮುದ್ದಹನುಮೇಗೌಡ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ಇತ್ತೀಚೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಷಿ ಅವರನ್ನು ಭೇಟಿದ ಎಸ್​ಪಿಎಂ, ಕುಣಿಗಲ್​ ಸ್ಟಡ್​ ಫಾರ್ಮ್​ ವಿಶ್ವವಿಖ್ಯಾತ ಕುದುರೆ ಸಂತಾನೋತ್ಪತ್ತಿ ಕೇಂದ್ರವಾಗಿದೆ. 421 ಎಕರೆ ಪ್ರದೇಶದಲ್ಲಿರುವ ಸ್ಟಡ್​ ಫಾರ್ಮ್​ನ ನಿರ್ವಹಣೆಯನ್ನು ಕೇಂದ್ರ ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಪ್ರಸ್ತಾವನೆ ಸಲ್ಲಿಸಲು ಮನವಿ ಮಾಡಿದರು.
ಮೈಸೂರು ಅರಸರ ಕಾಲದಿಂದಲೂ ಇಲ್ಲಿನ ಮಣ್ಣಿನ ವಿಶೇಷ ಗುಣದ ಆಧಾರದ ಮೇಲೆ ಕುದುರೆ ಸಾಕಾಣಿಕೆ ಮತ್ತು ಸಂತಾನೋತ್ಪತ್ತಿ ಕೇಂದ್ರವಾಗಿ ಉಪಯೋಗಿಸಲಾಗುತ್ತಿದೆ. ಸೈನ್ಯಕ್ಕೆ ಅನುಕೂಲ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಸ್ಟಡ್​ ಫಾರ್ಮ್​ ಕಾರಣದಿಂದಲೂ ನಮ್ಮ ಕುಣಿಗಲ್​ಗೆ ಒಂದು ಬ್ರಾಂಡ್​ ವ್ಯಾಲ್ಯೂ ಬಂದಿದೆ ಎಂದರೆ ತಪ್ಪಾಗಲಾರದು. ಅನೇಕರಿಗೆ ಉದ್ಯೋಗ ಕೂಡ ಲಭ್ಯವಾಗಿದೆ. ಪ್ರಸ್ತುತ ಇದರ ಗುತ್ತಿಗೆ ಅವಧಿ ಮುಗಿದಿರುವುದು ಸ್ಟಡ್​ ಫಾರ್ಮ್ ಉಳಿಸಿಕೊಳ್ಳಬೇಕಿದೆ ಎಂದು ಮನವರಿಕೆ ಮಾಡಿದ್ದಾರೆ.
ನಿರ್ವಹಣೆಯನ್ನು ಕೇಂದ್ರ ಸರ್ಕಾರವೇ ವಹಿಸಿಕೊಂಡರೆ ಭಾರತೀಯ ಸೇನೆಗೆ ಅಗತ್ಯವಿರುವ ಕುದುರೆಗಳನ್ನು ಇಲ್ಲಿಂದಲೇ ಸರಬರಾಜು ಮಾಡಬಹುದು. ಜತೆಗೆ ಸ್ಥಳಿಯರಿಗೂ ಉದ್ಯೋಗಾವಕಾಶ ಲಭ್ಯವಾಗಲಿದೆ. ಈ ಬಗ್ಗೆ ನಮ್ಮ ರಾಜ್ಯದವರೇ ಆದ ಹಿರಿಯ ಸಚಿವ ಪ್ರಹ್ಲಾದ್ ​ಜೋಷಿ ಅವರಿಗೆ ಮನವಿ ಮಾಡಿದ್ದೇನೆ| ಎಸ್​.ಪಿ.ಮುದ್ದಹನುಮೇಗೌಡಮಾಜಿ ಸಂಸದ
ಮೂರು ಸರ್ಜರಿಯಾದ್ರೂ ಕಡಿಮೆಯಾಗದ ನೋವು: ಗಂಡ ಮರಳಿ ಬರುವಷ್ಟರಲ್ಲಿ ಮರೆಯಾದ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + twelve =
Remember me
