ಬೆಂಗಳೂರು: ಮಹಾಮಾರಿ ಕರೊನಾದಿಂದ ರಾಜ್ಯ ತತ್ತರಿಸಿದೆ. ಬಡವರು, ಕಾರ್ವಿುಕರು ತುತ್ತು ಅನ್ನಕ್ಕೂ ಪರಿತಪಿಸುವ ಸ್ಥಿತಿ ಬಂದೊದಗಿದೆ. ಇಂತಹ ವಿಷಮ ಸಂದರ್ಭದಲ್ಲಿ ನನ್ನ ಹುಟ್ಟುಹಬ್ಬ(ಮೇ 18) ಆಚರಿಸುವುದು ಸೂಕ್ತವಲ್ಲ. ನೀವು ಇರುವಲ್ಲಿಂದಲೇ ನನಗೆ ಶುಭ ಹಾರೈಸಿ ಸಾಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದ್ದಾರೆ.
ಸಾರ್ವಜನಿಕ ಬದುಕಿನಲ್ಲಿ ಕೆಲಸ ಮಾಡುತ್ತಿರುವ ನನ್ನಂತಹವರ ಹುಟ್ಟು ಹಬ್ಬದ ಆಚರಣೆಗಳು ಯಾವುದೇ ರೀತಿಯಲ್ಲೂ ಜಾರಿಯಲ್ಲಿರುವ ನಿರ್ಬಂಧಗಳ ಉಲ್ಲಂಘನೆಗೆ ಅವಕಾಶ ಮಾಡಿಕೊಡಬಾರದು ಎಂಬ ಕಾರಣಕ್ಕೆ ಮೇ 18 ರಂದು ನನ್ನ ಹುಟ್ಟು ಹಬ್ಬ ಕಾರ್ಯಕರ್ತರು, ಅಭಿಮಾನಿಗಳು, ಪಕ್ಷದ ನಾಯಕರು ಪ್ರತಿ ವರ್ಷದಂತೆ ಈ ವರ್ಷವೂ ನನ್ನ ಮನೆಯ ಬಳಿ ಬಂದು ಸೇರಿದರೆ ಅದು ಕರೊನಾ ನಿಯಮ ಉಲ್ಲಂಘನೆಯಾಗುತ್ತದೆ. ಇಂದಿನ ಸಂದಿಗ್ಧ ಪರಿಸ್ಥಿತಿಯನ್ನು ನನ್ನ ಎಲ್ಲ ಅಭಿಮಾನಿಗಳು, ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ನೀವು ಇರುವಲ್ಲಿಯೇ ನನಗೆ ನಿಮ್ಮ ಅಭಿಮಾನದ ಶುಭಾಶಯ ಅರ್ಪಿಸಿ ಎಂದು ದೇವೇಗೌಡ ಕೋರಿದ್ದಾರೆ.
ಇದನ್ನೂ ಓದಿಕೋವಿಡ್ ಹೆಸರಿನಲ್ಲಿ ಸರ್ಕಾರಗಳಿಂದ ಲೂಟಿ
ನಿಮ್ಮ ಅಭಿಮಾನದ ಶಕ್ತಿ ಅಪಾರ. ಅದು ನನಗೆ ಚೈತನ್ಯದಾಯಕ. ನಮ್ಮ ಪಕ್ಷಕ್ಕೂ ಪ್ರೋತ್ಸಾಹದಾಯಕ. ಅದಕ್ಕಾಗಿ ನನ್ನ ಪೂರ್ವಭಾವಿ ಧನ್ಯವಾದಗಳು. ಈ ಬಾರಿ ಮಾತ್ರ ನಿಮ್ಮ ಅಭಿಮಾನ ನೀವಿರುವ ಜಾಗದಿಂದಲೇ ಮೂಡಿಬರಲಿ, ಜನಜಾತ್ರೆಗೆ ಅನುವು ಮಾಡಿ ಕೊಡದಿರಲಿ ಎಂದು ಮನವಿ ಮಾಡಿದ್ದಾರೆ.
ಮೈಶುಗರ್ಸ್ ಖಾಸಗೀಕರಣ ಮಾಡದಿರಲು ಸಿಎಂ ನಿರ್ಧಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − six =
Remember me
