ಬೆಂಗಳೂರು:ವಾಲ್ಮೀಕಿ ಸಮುದಾಯದ ಕೋಟ್ಯಂತರ ರೂ. ದುರುಪಯೋಗ, ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದ ಬದಲಿ ನಿವೇಶನಗಳ ಹಂಚಿಕೆ ಅವ್ಯಹಾರವು ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ನಡುವೆಯೂ ಅಬಕಾರಿ ಇಲಾಖೆಯ ಲಂಚ ವಿಚಾರವು ಮತ್ತೆ ಮನ್ನಲೆಗೆ ಬಂದಿದೆ.
ಫೆಡರೇಷನ್​ ಆಫ್​​​ ವೈನ್​ ಮರ್ಚಂಟ್ಸ್​ ಅಸೋಸಿಯೇಷನ್​, ಶುಕ್ರವಾರ (ಜು.26) ಸ್ವಾತಂತ್ಯ ಉದ್ಯಾನದಲ್ಲಿ ಹಮ್ಮಿಕೊಂಡಿರುವ ಬೃಹತ್​ ಪ್ರತಿಭಟನೆಯಲ್ಲಿ ಅಬಕಾರಿ ಅಧಿಕಾರಿಗಳ ವರ್ಗಾವಣೆ ದರ ಪಟ್ಟಿ, ಅಬಕಾರಿ ಲಂಚದ ದರ ಪಟ್ಟಿ, ಅಬಕಾರಿ ಅಧಿಕಾರಿಗಳ ಸರ್ಕಾರಿ ಕರ್ತವ್ಯಕ್ಕೆ ಹೊರತಾದ ಕೆಲಸಗಳ ದರ ಪಟ್ಟಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇಲಾಖೆಯಲ್ಲಿ ಮಿತಿ ಮೀರಿದ ಭ್ರಷ್ಟಾಚಾರ, ದುರ್ವರ್ತನೆ ತೋರುತ್ತಿರುವ ಅಧಿಕಾರಿಗಳ ವರ್ಗಾವಣೆ, ಅಮಾನತಾದ ಅಧಿಕಾರಿಗಳಿಗೆ ಲಾಭದಾಯಕ ಹುದ್ದೆ ನೀಡಬಾರದು ಎಂಬುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮದ್ಯದಂಗಡಿ ಮಾಲೀಕರು ಪ್ರತಿಭಟನೆ ನಡೆಸಲು ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ.
ಸಂಘದ ಅಧ್ಯಕ್ಷ ಎಸ್​. ಗುರುಸ್ವಾಮಿ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ, ಎಲ್ಲ ವರ್ಗದ ಸನ್ನದುದಾರರ ಸಮಸ್ಯೆ ಬಗೆಹರಿಸುವಂತೆ ಈಗಾಗಲೇ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಸರ್ಕಾರ ಈಡೇರಿಸಿಲ್ಲ. ಅಬಕಾರಿ ಅಧಿಕಾರಿಗಳು ಭ್ರಷ್ಟಾಚಾರ ಮೀತಿಮೀರಿದೆ. 3 ವರ್ಷ ಕಾಲ ಒಂದೇ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿರುವ ಅಧಿಕಾರಿಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಬೇಕು. ಸನ್ನದುದಾರರ ಜತೆ ದುವರ್ತನೆ ತೋರುತ್ತಿರುವ ಕೊಪ್ಪಳ, ಕೋಲಾರ, ವಿಜಯಪುರದ ಅಬಕಾರಿ ನಿರೀಕ್ಷರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ, ದಿನದಿಂದ ದಿನಕ್ಕೆ ಇಲಾಖೆ ಆಡಳಿತದಲ್ಲಿ ಜಡತ್ವ ಹಿಡಿದಿದೆ. ಹೀಗಾಗಿ, ಪ್ರತಿಭಟನೆಯಲ್ಲಿ ಅಧಿಕಾರಿಗಳ ಲಂಚ, ವರ್ಗಾವಣೆ ದರಪಟ್ಟಿಯನ್ನು ಪ್ರದರ್ಶಿಸಲಾಗುವುದು ಎಂದರು.
ಅಬಕಾರಿ ಶುಲ್ಕ ಕಡಿಮೆಗೊಳಿಸಿ:ಚಿಲ್ಲರೆ ಮದ್ಯಮಾರಾಟದ ಮೇಲೆ ಕನಿಷ್ಠ ಶೇ.20 ಲಾಭಾಂಶ ನೀಡಬೇಕು. 2023ರ ಜು.10ರಂದು ಹೆಚ್ಚಳ ಮಾಡಿರುವ ಹೆಚ್ಚುವರಿ ಅಬಕಾರಿ ಶುಲ್ಕವನ್ನು ಇಳಿಸಬೇಕು. ಸಿಎಲ್​&2 ಮದ್ಯದಂಗಡಿಗಳಲ್ಲಿ ಮದ್ಯ ಸೇವಿಸಲು ಅವಕಾಶ ನೀಡಬೇಕು. ಎಲ್ಲ ಮದ್ಯಗಳ 60&90 ಎಂಎಲ್​ ಪ್ಯಾಕಿಂಗ್​ ರೂಪದಲ್ಲಿ ಒದಗಿಸಬೇಕು. 3-4 ದಿನ ಸರ್ಕಾರಿ ರಜೆ ಇರುವ ದಿನಗಳಂದು ಕೆಎಸ್​ಬಿಸಿಎಲ್​ನವರು ಟಿಒಡಿ ರೀತಿಯಲ್ಲಿ ಮದ್ಯ/ ಬಿಯರ್​ ಒದಗಿಸಬೇಕು. ಸನ್ನದು ನವೀಕರಣ ಪದ್ಧತಿಗೆ ರಾಜ್ಯವ್ಯಾಪಿ ಒಂದೇ ನಿಯಮವನ್ನು ಜಾರಿಗೆ ತರಬೇಕು ಎಂದು ಸಂದ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದರಾಜ್​ ಹೆಗ್ಡೆ ಹೇಳಿದ್ದಾರೆ.
ಇದೇನಾದ್ರೂ ಸಂಭವಿಸಿದ್ರೆ ಸಿಎಸ್​ಕೆಗೆ ಬರಲಿದೆ ಆನೆಬಲ! ಧೋನಿ ಪಡೆಗೆ ಸ್ಟಾರ್​ ಆಟಗಾರನ ಎಂಟ್ರಿ?
ಸಣ್ಣ ಕೆಲಸಗಳಿಗೂ ಹಣದ ಬೇಡಿಕೆಮದ್ಯದಂಗಡಿಗಳ ಪರವಾನಗಿ ನವೀಕರಣಕ್ಕೆ, ಸಿಎಲ್​-7 ಮದ್ಯದಂಗಡಿ ತೆರೆಯುವುದಕ್ಕೆ ಸೇರಿ ಇತರೆ ಕೆಲಸಗಳನ್ನು ಮಾಡಿಕೊಡುವುದಕ್ಕೆ ಇಲಾಖೆ ಅಧಿಕಾರಿಗಳು ಲಾಂತರ ರೂ. ಲಂಚ ಕೇಳುತ್ತಿದ್ದಾರೆ. ಕೆಲವೊಮ್ಮೆ ಸಣ್ಣ ಕೆಲಸಗಳಿಗೂ ಲಂಚ ನೀಡುವಂತೆ ಪೀಡಿಸುತ್ತಾರೆ. ಕೆಲ ಸಂದರ್ಭಗಳಲ್ಲಿ ಕಿರುಕುಳ ಕೊಟ್ಟು ಹೆಚ್ಚು ಲಂಚ ನೀಡುವಂತೆ ಬೇಡಿಕೆ ಈಡೇರುತ್ತಾರೆ. ಈ ಎಲ್ಲ ಕಾರಣಗಳಿಂದ ಸನ್ನದುದಾರರು ರೋಸಿ ಹೋಗಿದ್ದಾರೆ. “ಅಪಾಯದಲ್ಲಿ ಪ್ರಸ್ತುತ ಅಬಕಾರಿ ಉದ್ಯಮ’ ಕುರಿತು ಹೊರತಂದಿರುವ ಪುಸ್ತಕವನ್ನು ಸಿಎಂ, ಡಿಸಿಎಂ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಬಕಾರಿ ಆಯುಕ್ತರಿಗೆ ನೀಡಲಾಗಿದೆ. ಆದರೂ, ಈವರೆಗೆ ಏನು ಪ್ರಯೋಜನವಾಗಿಲ್ಲ ಎಂದು ಗೋವಿಂದರಾಜ್​ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.
ಅಬಕಾರಿ ಹುದ್ದೆವಾರು ವರ್ಗಾವಣೆಗೆ ಲಂಚ ನಿಗದಿ?ಹುದ್ದೆ                          ರೇಟ್​ ಫಿಕ್ಸ್​ಉಪ ಆಯುಕ್ತ                2.5ರಿಂದ 3.5 ಕೋಟಿ ರೂ.ಅಧೀಕ್ಷಕ                      25ರಿಂದ 30 ಲಕ್ಷ ರೂ.ಉಪ ಅಧೀಕ್ಷಕ                30ರಿಂದ 40 ಲಕ್ಷ ರೂ.ಅಬಕಾರಿ ನಿರೀಕ್ಷಕ             40ರಿಂದ 50 ಲಕ್ಷ ರೂ.ಉಪ ನಿರೀಕ್ಷಕ                 15ರಿಂದ 20 ಲಕ್ಷ ರೂ.ಅಬಕಾರಿ ಮುಖ್ಯ ಪೇದೆ          8ರಿಂದ 10 ಲಕ್ಷ ರೂ.ಅಬಕಾರಿ ಪೇದೆ                5ರಿಂದ 8 ಲಕ್ಷ ರೂ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
