ಬೆಂಗಳೂರು:ಆಂಧ್ರಪ್ರದೇಶ, ತೆಲಂಗಾಣದಲ್ಲಿ ಭಾರಿ ಮಳೆ ಸುರಿಯುತ್ತಿದ್ದರೆ ಕರ್ನಾಟಕದಲ್ಲಿ ಕ್ಷೀಣವಾಗಿದೆ. ಶಿವಮೊಗ್ಗದ ಆಗುಂಬೆ,ಕೊಡಗಿನ ಗೋಣಕೊಪ್ಪ, ಕಲಬುರಗಿಯ ಆಳಂದ, ಯಾದಗಿರಿ,ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಸೋಮವಾರ ವರ್ಷಧಾರೆಯಾಗಿದೆ. ಬೆಂಗಳೂರು ಸೇರಿದ ಕೆಲ ಜಿಲ್ಲೆಗಳ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಯಿತು.
ಉತ್ತರ ಕನ್ನಡ, ಬೀದರ್​, ಕಲಬುರಗಿ, ರಾಯಚೂರು,ವಿಜಯಪುರ ಮತ್ತು ಯಾದಗಿರಿಯಲ್ಲಿ ಸೆ.30ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್​ ಕೊಟ್ಟಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಸೆ.5ರಿಂದ ಮುಂದಿನ ಮೂರು ದಿನ ಯೆಲ್ಲೋ ಅರ್ಲಟ್​ ಇರಲಿದೆ. ಉಳಿದ ಜಿಲ್ಲೆಗಳಲ್ಲಿ ಮಳೆ ಕಡಿಮೆ ಇರಲಿದೆ.
ಸೆ. 7ರಿಂದ 11ರವೆರೆಗೆ ಸಂಘನಿಕೇತನದಲ್ಲಿ ಶ್ರೀ ಗಣೇಶೋತ್ಸವಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, ಸದ್ಯ ಹವಾಮಾನ ಸ್ಥಿತಿ ಗಮನಿಸಿದರೆ ಕರಾವಳಿ ಹೊರತುಪಡಿಸಿ, ಮಲೆನಾಡು, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸೆ.4 ರಿಂದ ಮಳೆ ಕ್ಷೀಣವಾಗಲಿದೆ. ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯ ಪ್ರಕಾರ ಪ್ರಸಕ್ತ ತಿಂಗಳಲ್ಲಿ ದೇಶಾದ್ಯಂತ ವಾಡಿಕೆಗಿಂತ ತುಸು ಅಧಿಕ ಮಳೆಯಾಗಬಹುದು. ಕರ್ನಾಟಕದಲ್ಲೂ ವಾಡಿಕೆಯಷ್ಟೇ ಸುರಿಯಲಿದೆ.ಫೆಸಿಫಿಕ್​ ಸಾಗರದಲ್ಲಿ ಸಮುದ್ರದ ಮೇಲ್ಮೆ ತಾಪಮಾನವೂ ಸರಾಸರಿಗಿಂತ ತಂಪಾಗಿರುತ್ತದೆ. ಮಾನ್ಸೂನ್​ ಋತುವಿನ ಅಂತ್ಯದಲ್ಲಿ “ಲಾ ನಿನಾ’ ಇನ್ನಷ್ಟು ಸಕ್ರಿಯವಾಗಲಿದ್ದು, ಹೆಚ್ಚು ಮಳೆ ತರಲಿದೆ. ಅ.1ರಿಂದ ಡಿ.31ರವರೆಗೆ ಈಶಾನ್ಯ ಮಾನ್ಸೂನ್​ನಲ್ಲಿ ವಾಡಿಕೆಯಷ್ಟೇ ಮಳೆಯಾಗಲಿದೆ ಎಂದು ಶ್ರೀನಿವಾಸರೆಡ್ಡಿ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
