ಬೆಂಗಳೂರು:ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ತರುವಲ್ಲಿ ಶ್ರಮಿಸುತ್ತಿರುವ ಅಬಕಾರಿ ಪೇದೆಗಳಿಗೆ, ಮುಖ್ಯ ಪೇದೆ ಹುದ್ದೆಗೆ ಬಡ್ತಿ ದೊರೆತರೂ ಆಡಳಿತಾತ್ಮಕ ಸೌಲಭ್ಯ ಸಿಕ್ಕಿಲ್ಲ.
ಅಬಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 711 ಅಬಕಾರಿ ಪೇದೆಗಳಿಗೆ, ಅಬಕಾರಿ ಪೇದೆ ಹುದ್ದೆಯಿಂದ ಅಬಕಾರಿ ಮುಖ್ಯ ಪೇದೆ ಹುದ್ದೆಗೆ ಪದೋನ್ನತಿ ನೀಡಿ ಸ್ಥಳಗಳಿಗೆ ನಿಯುಕ್ತಿಗೊಳಿಸಿ ಫೆ.3ರಂದು ಆದೇಶ ಹೊರಡಿಸಲಾಗಿತ್ತು. ಆದರೆ, ಮುಂಬಡ್ತಿ ಕೊಟ್ಟು ಮೂರು ತಿಂಗಳು ಕಳೆದರೂ ಅಬಕಾರಿ ಮುಖ್ಯ ಪೇದೆ ಹುದ್ದೆಗೆ ಸಿಗಬೇಕಿದ್ದ ಆಡಳಿತಾತ್ಮಕ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕಚೇರಿ ಮುಖ್ಯಸ್ಥರು, ಯಾವುದೇ ಸೌಲಭ್ಯ ನೀಡದೆ ಅಬಕಾರಿ ಪೇದೆಗಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇದರಿಂದಾಗಿ ಬಡ್ತಿ ಖುಷಿಯಲ್ಲಿದ್ದ ಅಬಕಾರಿ ಪೇದೆಗಳಿಗೆ ನಿರಾಸೆಯಾಗುವಂತಾಗಿದೆ. ಅಬಕಾರಿ ಮುಖ್ಯ ಪೇದೆಗಳಿಗೆ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಅಬಕಾರಿ ಅಪರಾಧ ತಡೆಯುವುದು, ಜಾರಿ ಮತ್ತು ತನಿಖೆ ಕಾರ್ಯಚಟುವಟಿಕೆ ಚುರುಕುಗೊಳಿಸುವುದು, ಅಬಕಾರಿ ಚಟುವಟಿಕೆ ಮತ್ತು ಅಪರಾಧ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ ಅಧೀನ ಸಿಬ್ಬಂದಿಗೆ ಆದೇಶಿಸುವ ಅಧಿಕಾರ ಹೊಂದಿದ್ದಾರೆ.ಪ್ರತಿ ನಿತ್ಯ ಕಾರ್ಯವ್ಯಾಪ್ತಿಯಲ್ಲಿ ಅಬಕಾರಿ ಚಟುವಟಿಕೆ, ಅಪರಾಧ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ ಅದನ್ನು ಅಬಕಾರಿ ನಿರೀಕ್ಷಕರು, ಉಪ ಆಯುಕ್ತರಿಗೆ ಪ್ಯಾಕ್ಸ್​ ಅಥವಾ ದೂರವಾಣಿ ಮೂಲಕ ಒದಗಿಸಬೇಕು. ಆದರೆ, ಕಚೇರಿ ಮುಖ್ಯಸ್ಥರು ಬಡ್ತಿ ಹೊಂದಿದ್ದ ಅಬಕಾರಿ ಪೇದೆಗಳಿಗೆ ಆಡಳಿತಾತ್ಮಕ ಅಧಿಕಾರವನ್ನೇ ಕೊಟ್ಟಿಲ್ಲ.
ಲೋಕಸಭಾ ಚುನಾವಣೆ ನಿಮಿತ್ತ ರಜೆ ಪಡೆಯದೆ ಕೆಲಸ ಮಾಡಿದ್ದರೂ ಪ್ರಯಾಣ ಭತ್ಯೆ, ಗೌರವ ಧನ ಕೊಟ್ಟಿಲ್ಲ. ಅಂತಾರಾಜ್ಯ ಗಡಿ ಭಾಗದಲ್ಲಿ ಚೆಕ್​ಪೋಸ್ಟ್​ನಲ್ಲಿ ಕರ್ತವ್ಯ ನಿರ್ವಹಿಸಿದ ಅಬಕಾರಿ ಮುಖ್ಯ ಪೇದೆಗಳಿಗೆ ಕಚೇರಿ ಮುಖ್ಯಸ್ಥರು ಅಂಚೆ ಮತದಾನ ಮಾಡುವುದಕ್ಕೆ ಅವಕಾಶ ಕಲ್ಪಿಸಿಲ್ಲ. ಅಬಕಾರಿ ಕೈ ಪೀಡಿಯಲ್ಲಿ ಈ ಹುದ್ದೆಗೆ ತಿಳಿಸಿರುವ ಕಾರ್ಯದ ಜತೆಗೆ ಕಚೇರಿಯಲ್ಲಿನ ಆಡಳಿತಾತ್ಮಕ ಕೆಲಸ ಮಾಡಿದರೂ ಸವಲತ್ತು ಸಿಗುತ್ತಿಲ್ಲ. ಚುನಾವಣಾ ಕೆಲಸಕ್ಕಾಗಿ ಸರ್ಕಾರ, ಅಬಕಾರಿ ಇಲಾಖೆಗೆ 1,545 ಗೃಹ ರಕ್ಷಕ ಸಿಬ್ಬಂದಿ ನೀಡಿತ್ತು. ಆದರೆ, ಬಹಳಷ್ಟು ಗೃಹ ರಕ್ಷಕರನ್ನು ಚುನಾವಣಾ ಕೆಲಸಕ್ಕೆ ನೇಮಿಸಿಕೊಳ್ಳುವ ಬದಲು ಕಚೇರಿ ಕೆಲಸಕ್ಕೆ ನಿಯುಕ್ತಿ ಮಾಡಿಕೊಂಡು ಉದ್ದೇಶಪೂರ್ವಕವಾಗಿ ಅಬಕಾರಿ ಮುಖ್ಯ ಪೇದೆಗಳಿಗೆ ಚೆಕ್​ ಪೋಸ್ಟ್​ ಕೆಲಸಕ್ಕೆ ಹಾಕಲಾಗಿತ್ತು. ಕಚೇರಿ ಮುಖ್ಯಸ್ಥರು ಅಬಕಾರಿ ಪೇದೆ ಹಾಗೂ ಅಬಕಾರಿ ಮುಖ್ಯ ಪೇದೆ ಹುದ್ದೆಗಳನ್ನು ಸಮಾನವಾಗಿ ಕಾಣುತ್ತಿದ್ದಾರೆ. ಹೀಗಾಗಿ, ಈ ಮೇಲಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಸಮ ಸಮಾಜಕ್ಕೆ ಶ್ರಮಿಸಿದವರು ಬಸವಣ್ಣ, ಅಂಬೇಡ್ಕರ್​: ವಿಧಾನಪರಿಷತ್ತಿನ ಸಭಾಪತಿ ಹೇಳಿಕೆ
ವೇತನಕ್ಕೆ ಬಜೆಟ್​ ಸಮಸ್ಯೆಪ್ರತಿ ಬಾರಿಯೂ ಖಜಾನೆ 2ರ ತಂತ್ರಾಂಶ ಗೊಂದಲ, ಬಜೆಟ್​ ಬಿಡುಗಡೆ ಆಗದಿರುವುದು ಹಾಗೂ ಸರ್ವರ್​ ಸಮಸ್ಯೆಯಿಂದ ಪ್ರತಿ ತಿಂಗಳು ವೇತನ ವಿಳಂಬವಾಗುತ್ತಿದೆ. ಮೆಡಿಕಲ್​ ಅಲ್ಲೋವನ್ಸ್​ ಹೆಡ್​, ಡಿಡಿ ಅಲ್ಲೋವೆನ್ಸ್​ ಹೆಡ್​ ಸೇರಿ 4 ಹೆಡ್​ನಲ್ಲಿ ಹಣ ಬಿಡುಗಡೆಯಾಗುತ್ತದೆ. ಆದರೆ, ಈ ನಾಲ್ಕು ಹೆಡ್​ನಲ್ಲಿ ನೌಕರರಿಗೆ ವೇತನಯಾಗುವಷ್ಟು ಬಜೆಟ್​ ರಿಲೀಸ್​ ಮಾಡದೆ ಕೆಲ ಹೆಡ್​ನಲ್ಲಿ ಹಣ ಹಾಕಿ ಇನ್ನೂ ಕೆಲ ಹೆಡ್​ನಲ್ಲಿ ಖಾಲಿ ಇಡುತ್ತಿದ್ದಾರೆ. ಈ ಕ್ರಮದಿಂದ ವೇತನ ಬಿಲ್​ ಪಾಸ್​ಯಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೂ ಮಾಹಿತಿ ಇದ್ದರೂ ಕ್ರಮಕೈಗೊಳ್ಳುತ್ತಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
