| ಗಂಗಾಧರ್ ಬೈರಾಪಟ್ಟಣರಾಮನಗರ
ರಾಜ್ಯ ಅಬಕಾರಿ ಇಲಾಖೆ ನೂತನವಾಗಿ ಪರಿಚಯಿಸಿರುವ ಸಾಫ್ಟ್​ವೇರ್ ಕೈಕೊಟ್ಟ ಪರಿಣಾಮ ಕಳೆದ 5 ದಿನಗಳಿಂದ ವೈನ್​ಶಾಪ್ ಮಾಲೀಕರು ಫಜೀತಿಗೀಡಾಗಿದ್ದಾರೆ. ವೈನ್​ಶಾಪ್ ಅಥವಾ ಬಾರ್​ಗೆ ಬೇಕಾದ ಮದ್ಯವನ್ನು ತಾವೇ ಆನ್​ಲೈನ್ ಮೂಲಕ ದಾಸ್ತಾನು ಬುಕ್ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟ ಇಲಾಖೆ ಇದಕ್ಕೆ www.excisepayment.kar.nic.in ತಂತ್ರಾಂಶ ಅಭಿವೃದ್ಧಿಪಡಿಸಿ ಏ.1ರಿಂದ ಜಾರಿಗೆ ತಂದಿತ್ತು. ಆದರೆ ತಂತ್ರಾಂಶ ಕೈಕೊಟ್ಟಿದ್ದರಿಂದಾಗಿ ಮಾಲೀಕರು ‘ಎಣ್ಣೆ’ಗಾಗಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುವಂತಾಗಿದೆ.
ಸಮಸ್ಯೆ ಏನು?:ರಾಜ್ಯದ ಎಲ್ಲ ಬಾರ್​ಗಳಿಗೂ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ (ಕೆಎಸ್​ಬಿಸಿಎಲ್)ದ ಮೂಲಕವೇ ಮದ್ಯ ಪೂರೈಕೆಯಾಗುತ್ತದೆ. ಈ ಮೊದಲು ಬಾರ್​ನವರು ಅಗತ್ಯವಿರುವ ಮದ್ಯವನ್ನು ಫೋನ್ ಮೂಲಕ ಆರ್ಡರ್ ಮಾಡಿ, ಬ್ಯಾಂಕ್​ನಲ್ಲಿ ಹಣ ಪಾವತಿಸಿದ ತಕ್ಷಣ ಪೂರೈಕೆಯಾಗುತ್ತಿತ್ತು.
ಬಾರ್ ಮಾಲೀಕರು ಕುಳಿತಲ್ಲಿಯೇ ಮದ್ಯ ಆರ್ಡರ್ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ಕೆಎಸ್​ಬಿಎಸಿಎಲ್ ತಂತ್ರಾಂಶವನ್ನು ಜಾರಿಗೆ ತಂದಿದೆ. ಇದಕ್ಕಾಗಿ ಪರವಾನಗಿ ಹೊಂದಿರುವ ಪ್ರತಿ ವೈನ್ ಶಾಪ್ ಮತ್ತು ಬಾರ್ ಮಾಲೀಕರಿಗೆ ಯೂಸರ್ ನೇಮ್ ಮತ್ತು ಪಾಸ್​ವರ್ಡ್ ಸಹ ನೀಡಲಾಗಿದೆ.
ಇದರ ಮೂಲಕ ರಾತ್ರಿ 9 ಗಂಟೆಯಿಂದ ಬೆಳಗ್ಗೆ 9 ಗಂಟೆಯೊಳಗೆ ಬಾರ್​ಗಳು ಮದ್ಯ ಆರ್ಡರ್ ಮಾಡಬೇಕು. ಬಳಿಕ ಹಣ ಪಾವತಿಸಿ, ಮದ್ಯ ಪಡೆದುಕೊಳ್ಳಬೇಕು. ಆದರೆ, ತಂತ್ರಾಂಶ ಕೈಕೊಟ್ಟ ಕಾರಣದಿಂದಾಗಿ ಇಡೀ ರಾಜ್ಯದಲ್ಲಿ ಪ್ರತಿದಿನ 5-6 ಬೇಡಿಕೆ (ಇಂಡೆಂಟ್)ಗಳು ಮಾತ್ರ ದೊರೆಯುತ್ತಿವೆ. ಬೇಡಿಕೆ ದೊರೆತರೂ ಸಾಗಾಟಕ್ಕೆ ಪರವಾನಗಿ ದೊರೆಯದ ಕಾರಣದಿಂದಾಗಿ ಮದ್ಯ ತುಂಬಿದ ಲಾರಿಗಳು ಕೆಎಸ್​ಬಿಸಿಎಲ್​ನ ದಾಸ್ತಾನು ಮಳಿಗೆ ಬಳಿಯೇ ಪರಿವಾನಗಿಗಾಗಿ ಕಾಯುತ್ತಾ ಕುಳಿತುಕೊಳ್ಳುವಂತಾಗಿದೆ.
5 ದಿನ, 370 ಕೋಟಿ ರೂ. ನಷ್ಟ:ವಾರ್ಷಿಕ 27 ಸಾವಿರ ಕೋಟಿ ರೂ. ಆದಾಯ ಹೊಂದಿರುವ ಅಬಕಾರಿ ಇಲಾಖೆಗೆ ಕಳೆದ 5 ದಿನಗಳಿಂದ ಸುಮಾರು 370 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ. ಆದರೆ, ಅಧಿಕಾರಿಗಳು ಇದನ್ನು ಅಲ್ಲಗಳೆಯುತ್ತಾರೆ. ಸದ್ಯಕ್ಕೆ ಸಾಫ್ಟ್್ಟೇರ್ ಸಮಸ್ಯೆಯಿಂದಾಗಿ ವಿತರಣೆಯಲ್ಲಿ ವಿಳಂಬವಾಗಿದೆ. ಆದರೆ, ಎಲ್ಲಿಯೂ ಮದ್ಯದ ಕೊರತೆ ಇಲ್ಲ. ಹೀಗಾಗಿ ನಷ್ಟದ ಮಾತೇ ಇಲ್ಲ ಎನ್ನುತ್ತಾರೆ. ಆದರೆ ಮಾಲೀಕರು ಹೇಳುವುದೇ ಬೇರೆ, ಬಹುತೇಕ ಬಾರ್​ಗಳಲ್ಲಿ ಮದ್ಯ ಸಿಗುತ್ತಿಲ್ಲ. ರಾಜ್ಯದ ವಿವಿಧೆಡೆ ಕೂಡ ಇದೇ ಪರಿಸ್ಥಿತಿ ಇದೆ. ಸಮಸ್ಯೆ ಬಗೆಹರಿಯದಿದ್ದರೆ, ಇನ್ನೆರಡು ದಿನದಲ್ಲಿ ರಾಜ್ಯದ ಎಲ್ಲ ಬಾರ್​ಗಳು ಬಾಗಿಲು ಮುಚ್ಚಬೇಕಾಗುತ್ತದೆ ಎಂದು ಅಳಲು ತೋಡಿಕೊಳ್ಳುತ್ತಾರೆ.
ತಂತ್ರಾಂಶ ಹೊಸದಾಗಿರುವ ಕಾರಣ ಪೂರೈಕೆಯಲ್ಲಿ ವಿಳಂಬವಾಗಿದೆ ಹೊರತು ನಷ್ಟವಾಗಿಲ್ಲ. ರಾಜ್ಯಮಟ್ಟದಲ್ಲಿ ತಂತ್ರಾಂಶದಲ್ಲಿನ ದೋಷ ಪರಿಹಾರ ಕಾರ್ಯ ನಡೆದಿದೆ.
|ನಿರ್ಮಲಾಉಪ ಆಯುಕ್ತೆ, ಅಬಕಾರಿ ಇಲಾಖೆ, ರಾಮನಗರ
ವೆಬ್ ಇಂಡೆಂಟಿಂಗ್ ಮೂಲಕ ಮದ್ಯ ಖರೀದಿಸಲು ಕೆಎಸ್​ಬಿಸಿಎಲ್ ಆದೇಶ ಮಾಡಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಹೊಸ ಪದ್ಧತಿಯಲ್ಲಿ ಮದ್ಯ ಖರೀದಿಸಲು ಸನ್ನದುದಾರರಿಗೆ ತೊಂದರೆ ಆಗುತ್ತಿದೆ. ಇದನ್ನು ಖಂಡಿಸಿ ರಾಜ್ಯದ ಎಲ್ಲ ಡಿಪೋದಲ್ಲೂ ಬುಧವಾರ ಪ್ರತಿಭಟನೆ ನಡೆಸುತ್ತೇವೆ.
|ಬಿ.ಗೋವಿಂದರಾಜ ಹೆಗ್ಡೆಮದ್ಯ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ
ಪ್ರತಿಭಟನೆಗೆ ನಿರ್ಧಾರ:ಇನ್ನೊಂದೆಡೆ, ತಮ್ಮಿಷ್ಟದ ಬ್ರಾ್ಯಂಡ್ ದೊರೆಯದೆ ಮದ್ಯಪ್ರಿಯರೂ ಕಂಗಾಲಾಗಿದ್ದಾರೆ. ಬೇಸಿಗೆಯಲ್ಲಿ ಬಿಯರ್ ವಹಿವಾಟು ಹೆಚ್ಚಿದ್ದು, ಕಳೆದ 2 ದಿನಗಳಿಂದ ಇದಕ್ಕೆ ಹೊಡೆತ ಬಿದ್ದಿದೆ. ಕಡಿಮೆ ಬೆಲೆಗೆ ಸಿಗುತ್ತಿದ್ದ ಮದ್ಯವೂ ದೊರೆಯದೆ ಬಡ ಮತ್ತು ಮಧ್ಯಮ ವರ್ಗದ ಪಾನಪ್ರಿಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಬುಧವಾರ ವೈನ್​ಶಾಪ್ ಮಾಲೀಕರು ಕೆಬಿಎಸ್​ಸಿಎಲ್ ದಾಸ್ತಾನು ಮಳಿಗೆ ಎದುರು ಪ್ರತಿಭಟನೆ ಮಾಡಲು ತೀರ್ವನಿಸಿದ್ದಾರೆ.
ಸ್ವಾಮೀಜಿಯಾಗಲಿದ್ದಾರೆ ಮಾಜಿ ಸಚಿವ ಪುಟ್ಟಸ್ವಾಮಿ! ಗಾಣಿಗ ಮಠದ ಪೀಠಾಧಿಪತಿ ಆಗಿ ಸದ್ಯದಲ್ಲೇ ಪಟ್ಟಾಭಿಷೇಕ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 2 =
Remember me
