ಮಧುಗಿರಿ:ಮದ್ಯ ಸರಬರಾಜು ಮಾಡುತ್ತಿದ್ದವರ ಸೆರೆಗೆ ಸಂಬಂಧಿಸಿದಂತೆ ಮಧುಗಿರಿ ತಾಲೂಕು ಕೊಡಿಗೇಹಳ್ಳಿ ಠಾಣೆ ಪೊಲೀಸರು ಹಾಗೂ ಆಂಧ್ರ ಪ್ರದೇಶದ ಹಿಂದುಪುರ ಅಬಕಾರಿ ಪೊಲೀಸರ ನಡುವೆ ಜಟಾಪಟಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮದ್ಯ ಸಾಗಿಸುತ್ತಿದ್ದವರನ್ನು ಆಂಧ್ರದ ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದ ದೇವರಚಿಕ್ಕನಹಳ್ಳಿ ಚೆಕ್​ಪೋಸ್ಟ್​ಗೆ ಹೋದ ಕೊಡಿಗೇಹಳ್ಳಿ ಠಾಣೆ ಪೇದೆಗಳಾದ ಜಯಪ್ರಕಾಶ್​ ಹಾಗೂ ಶ್ರೀನಿವಾಸ್​, ಆಂಧ್ರದ ಅಬಕಾರಿ ಇನ್​ಸ್ಪೆಕ್ಟರ್​ಗೆ ಹೆಲ್ಮೆಟ್​ನಿಂದ ಹಲ್ಲೆ ನಡೆಸಿದ್ದಲ್ಲದೆ, ಹಿಂದುಪುರ ಅಬಕಾರಿ ಠಾಣೆಯಲ್ಲಿ ಸಿಬ್ಬಂದಿ ಜತೆಗೆ ಅನುಚಿತವಾಗಿ ವರ್ತಿಸಿ ಪೀಠೋಪಕರಣಗಳನ್ನು ಚೆಲ್ಲಾಪಿಲ್ಲಿ ಮಾಡಿ ಪರಾರಿಯಾಗಿದ್ದಾರೆ ಎಂದು ಆಂಧ್ರದ ಒನ್​ಟೌನ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿರಿಜಾರಕಿಹೊಳಿಯ ಸಿಡಿ ಮಾಡಿದ ಕಿಂಗ್​ಪಿನ್​ 44 ಲಕ್ಷ ರೂ. ಹಿಡಿದು ಕಾರು ಖರೀದಿಗೆ ಹೋದ!
ಹಿಂದುಪುರದಲ್ಲಿ ಪುರಸಭೆ ಚುನಾವಣೆ ನಡೆಯುತ್ತಿದ್ದು, ಕರ್ನಾಟಕ ಹಾಗೂ ಆಂಧ್ರಪ್ರದೇಶ ಎರಡೂ ರಾಜ್ಯಗಳ ಅಬಕಾರಿ ಹಾಗೂ ನಾಗರಿಕ ಪೊಲೀಸರು ಗಡಿಭಾಗದಲ್ಲಿ ನಿಗಾ ಇಟ್ಟಿದ್ದಾರೆ. ಇದರ ನಡುವೆ ಎರಡು ದಿನಗಳ ಹಿಂದೆ ಕೊಡಿಗೇನಹಳ್ಳಿಯ ಬಾರ್​ವೊಂದರಿಂದ 215 ಕೇಸ್​ ಮದ್ಯವನ್ನು ಜಯಂತ್​, ಶಶಿಕುಮಾರ್​, ವಸಂತ್​ಕುಮಾರ್​ ಎಂಬುವವರು ಹಿಂದುಪುರಕ್ಕೆ ಸಾಗಿಸುವಾಗ ದೇವರಚಿಕ್ಕನಹಳ್ಳಿಯಲ್ಲಿ ಆಂಧ್ರದ ಅಬಕಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆ ರಾತ್ರಿ 12 ಗಂಟೆ ಸಮಯದಲ್ಲಿ ಸ್ಥಳಕ್ಕೆ ಹೋದ ಕೊಡಿಗೇಹಳ್ಳಿ ಠಾಣೆ ಪೇದೆಗಳಾದ ಜಯಪ್ರಕಾಶ್​ ಮತ್ತು ಶ್ರೀನಿವಾಸ್​, ಇದು ನಮ್ಮ ಗಡಿ. ನೀವು ಇಲ್ಲಿಗೆ ಹೇಗೆ ಬಂದದ್ದು? ಇದು ನಮಗೆ ಸೇರಿದ್ದು ಎಂದು ಸ್ಥಳದಲ್ಲಿದ್ದ ಅಬಕಾರಿ ಇನ್​ಸ್ಪೆಕ್ಟರ್​ ಸರೋಜಾದೇವಿ ಜತೆ ವಾಗ್ವಾದ ನಡೆಸಿದ್ದಾರೆ.
ಈ ವೇಳೆ ಮಹಿಳಾ ಇನ್​ಸ್ಪೆಕ್ಟರ್​ ತಲೆಗೆ ಹೆಲ್ಮೆಟ್​ನಿಂದ ಜಯಪ್ರಕಾಶ್​ ಹಲ್ಲೆ ಮಾಡಿದ್ದಾರೆ. ತಕ್ಷಣವೇ ಇಬ್ಬರನ್ನು ಹಿಂದುಪುರದ ಅಬಕಾರಿ ಠಾಣೆಗೆ ಕರೆದೊಯ್ಯಲಾಗಿದೆ, ಮದ್ಯದ ಅಮಲಿನಲ್ಲಿದ್ದ ಪೇದೆಗಳಿಬ್ಬರೂ ಠಾಣೆಯಲ್ಲಿದ್ದ ಪೀಠೋಪಕರಣಗಳನ್ನು ಚೆಲ್ಲಾಪಿಲ್ಲಿ ಮಾಡಿ ಅಲ್ಲಿಂದ ಎಸ್ಕೇಪ್​ ಆಗಿದ್ದಾರೆ.
ಹಿಂದುಪುರದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಮದ್ಯದಂಗಡಿಗಳು ಬಂದ್​ ಆಗಿದ್ದು, ಕೊಡಿಗೇನಹಳ್ಳಿಯಿಂದ ಹಿಂದುಪುರಕ್ಕೆ ಕೆಲವರು ಮದ್ಯ ಸರಬರಾಜು ಮಾಡುವಾಗ ಸಿಕ್ಕಿ ಬಿದ್ದಿದ್ದರು. ಘಟನೆಗೆ ಸಂಬಂಧಿಸಿದಂತೆ ನಮ್ಮ ಇಬ್ಬರು ಸಿಬ್ಬಂದಿ ತಪ್ಪು ಮಾಡಿರುವ ಬಗ್ಗೆ ಅಲ್ಲಿನ ಎಫ್​ಐಆರ್​ ತರಿಸಿಕೊಂಡು ಮೇಲಧಿಕಾರಿಗಳಿಗೆ ವರದಿ ಮಾಡಲಾಗಿದೆ.| ರಾಮಕೃಷ್ಣಯ್ಯಡಿವೈಎಸ್ಪಿ ಮಧುಗಿರಿ
ಜಾರಕಿಹೊಳಿಯ ಸಿಡಿ ಮಾಡಿದ ಕಿಂಗ್​ಪಿನ್​ 44 ಲಕ್ಷ ರೂ. ಹಿಡಿದು ಕಾರು ಖರೀದಿಗೆ ಹೋದ!

ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗನ ಶವ ಪತ್ತೆ! ಶಿವರಾತ್ರಿ ಸಡಗರಕ್ಕೆ ಕೊಳ್ಳಿ ಇಟ್ಟ ಸಾವು

ತಾಯಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಬಾಲಕಿ ಆತ್ಮಹತ್ಯೆ?

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:1 × 2 =
Remember me
