ಬೆಂಗಳೂರು:ರಾಜ್ಯದಲ್ಲಿ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆ ಪಡೆದು ಮಾಡಿರುವ ವರ್ಗಾವಣೆ ಪಟ್ಟಿಗೆ ಅಬಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ನಿರೀಕ್ಷಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸೆ.6ರಂದು 41 ಅಬಕಾರಿ ನಿರೀಕ್ಷಕರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಪ್ರಿ ಮೆಚ್ಯೂರ್ ( ಅವಧಿ ಪೂರ್ವ ಮುನ್ನ) ವರ್ಗಾವಣೆ ಕಾರಣ ಕೊಟ್ಟು 20ಕ್ಕೂ ಅಧಿಕ ಅಬಕಾರಿ ನಿರೀಕ್ಷಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಹುದ್ದೆಯಲ್ಲಿ ಮುಂದುವರಿದಿದ್ದಾರೆ.
ಗ್ರೂಪ್ ‘ಸಿ’ಅಡಿ ಬರುವ ಅಬಕಾರಿ ನಿರೀಕ್ಷರು, ಬೇರೆ ಕಡೆಗೆ ವರ್ಗಾವಣೆಯಾದರೆ ಸರ್ಕಾರದ ನಿಯಮದಂತೆ ಆ ಹುದ್ದೆಯಲ್ಲಿ ನಾಲ್ಕು ವರ್ಷ ಕಾಲ ಕಾರ್ಯನಿರ್ವಹಿಸಬಹುದು. ಆದರೆ, ಹಿಂದೆ ವರ್ಗಾವಣೆಗೊಂಡ ಈಗ 2-3 ವರ್ಷ ಕಳೆಯುವಷ್ಟರಲ್ಲೇ ಹಲವು ಅಬಕಾರಿ ನಿರೀಕ್ಷಕರನ್ನು ವರ್ಗಾವಣೆ ಮಾಡಲಾಗಿತ್ತು. ಹೀಗಾಗಿ, ಅವಧಿ ಪೂರ್ವ ಮುನ್ನ ವರ್ಗಾವಣೆ ಕಾರಣ ಕೊಟ್ಟು ಕೆಲವರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಬೇಡಿಕೆ ಇರುವ ಸ್ಥಳಗಳಿಗೆ ಅಧಿಕಾರಿಗಳಿಂದ ಹೆಚ್ಚು ಕಮಿಷನ್ ಪಡೆದು ವರ್ಗಾವಣೆ ಮಾಡಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ.
ಗ್ರೂಪ್ ‘ ಎ’ ಅಡಿ ಬರುವ ಅಬಕಾರಿ ಉಪ ಆಯುಕ್ತರು ಒಂದು ಸ್ಥಳಕ್ಕೆ ವರ್ಗಾವಣೆಗೊಂಡರೆ ಅದೇ ಸ್ಥಳದಲ್ಲಿ 2 ವರ್ಷ ಕಾಲ ಕಾರ್ಯನಿರ್ವಹಿಸಬಹುದು. ಹೀಗಿದ್ದರೂ, ಕೆಲವರನ್ನು ಅವಧಿ ಪೂರ್ವ ಮುನ್ನವೇ ಅಬಕಾರಿ ಉಪ ಆಯುಕ್ತರನ್ನು ಏಕಾಏಕಿ ಎತ್ತಂಗಡಿ ಮಾಡಲಾಗಿತ್ತು. ಕೆಲವರು ಕೋರ್ಟ್‌ನಿಂದ ತಡೆಯಾಜ್ಞೆ ತಂದು ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಅಲ್ಲದೆ, 9 ಮಂದಿ ಅಬಕಾರಿ ಅಧೀಕ್ಷಕರಿಂದ ಅಬಕಾರಿ ಉಪ ಆಯುಕ್ತರಾಗಿ ಬಡ್ತಿ ನೀಡಿ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದೆ. ಆದರೆ, ಹಾಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಉಪ ಆಯುಕ್ತರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ, ಮುಂಬಡ್ತಿ ಸಿಕ್ಕಿರೂ ಅಲ್ಲಿಯೂ ಇರಲಾರದೆ, ಇಲ್ಲಿಯೂ ಇರಲಾರದೆ ಅತಂತ್ರ ಸ್ಥಿತಿಯಲ್ಲಿ ಕೆಲ ಅಧಿಕಾರಿಗಳು ಸಿಲುಕುವಂತಾಗಿದೆ.
ಇದನ್ನೂ ಓದಿ:ಗುಣಮಟ್ಟ ಆರೋಗ್ಯ ಸೇವೆಗೆ ತಂತ್ರಜ್ಞಾನ ಸಹಕಾರಿ: ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ
ಬೇಡಿಕೆ ಇರುವ ಸ್ಥಳಗಳ ನಿಯುಕ್ತಿಗಾಗಿ ಅಧಿಕಾರಿಗಳಿಂದ ಕೋಟ್ಯಂತರ ರೂ. ಪಡೆಯಲಾಗಿದೆ. ಹಣ ನೀಡದ ಕೆಲವರಿಗೆ ಡಿಸ್ಟಿಲರಿ, ಬ್ರಿವರಿ, ವೈನರಿ, ಮೈಕ್ರೋಬ್ರಿವರಿಯಲ್ಲಿರುವ ಹುದ್ದೆಗಳನ್ನು ತೋರಿಸಲಾಗಿದೆ.ಹೀಗಾಗಿ, ಪೊಲೀಸ್ ಇಲಾಖೆಯಂತೆ ಅಬಕಾರಿ ಇಲಾಖೆಯಲ್ಲಿಯೂ ಅಸಮರ್ಪಕವಾಗಿ ವರ್ಗಾವಣೆ ದಂಧೆ ನಡೆದಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + 13 =
Remember me
