ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಮನೆ ಮುಂದೆ ಮಂಗಳವಾರ ಸಂಜೆ ಅಬಕಾರಿ ಸಚಿವ ನಾಗೇಶ್​​ರ ಬೆಂಬಲಿಗರು ಗಲಾಟೆ ಮಾಡಿದ್ದಾರೆ.
ಬುಧವಾರ ಮಧ್ಯಾಹ್ನ ಸಚಿವ ಸಂಪುಟ ವಿಸ್ತರಣೆ ಆಗಲಿದ್ದು, 7-8 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಸದ್ಯ ಖಾಲಿ ಇರುವುದು 7 ಖಾತೆ ಮಾತ್ರ. ಹಾಲಿ ಒಬ್ಬ ಸಚಿವರಿಗೆ ಕೋಕ್​ ನೀಡಲಾಗುತ್ತೆ ಎಂಬ ಮಾತೂ ಕೇಳಿಬಂದಿದೆ. ಬಿಎಸ್​ವೈ ಸಂಪುಟದಿಂದ ಔಟ್​ ಆಗೋದು ಕೋಲಾರ ಜಿಲ್ಲೆ ಉಸ್ತುವಾರಿ ಸಚಿವರೂ ಆದ ಅಬಕಾರಿ ಸಚಿವ ನಾಗೇಶ್ ಎನ್ನಲಾಗುತ್ತಿದೆ.ಇದನ್ನೂ ಓದಿರಿತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ
ಈ ಸುದ್ದಿ ಹರಡುತ್ತಿದ್ದಂತೆ ಸಿಎಂ ನಿವಾಸ ಕಾವೇರಿ ಬಳಿ ಜಮಾಯಿಸಿದ ನಾಗೇಶ್ ಬೆಂಬಲಿಗರು, ಒಳ ನುಗ್ಗಲು ಯತ್ನಿಸಿದರು. ಅವರನ್ನು ಗೇಟ್​ ಬಳಿಯೇ ಪೊಲೀಸರು ತಡೆದರು. ನಮಗೆ ಒಳ ಹೋಗಲು ಅವಕಾಶ ಮಾಡಿಕೊಡಿ ಎಂದು ಏರುಧ್ವನಿಯಲ್ಲೇ ಆಗ್ರಹಿಸಿದರು. ಈ ವೇಳೆ ಪೊಲೀಸರು ಮತ್ತು ನಾಗೇಶ್​ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ.
ಬಿ.ಎಸ್​.ಯಡಿಯೂರಪ್ಪ ಅವರು ಸಿಎಂ ಆಗುವುದಕ್ಕೆ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ನಾಗೇಶ್ ಕಾರಣ. ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇ ನಾಗೇಶ್. ಉಳಿಕೆ 17 ಶಾಸಕರ ಜತೆ ಕೈಜೋಡಿಸಿ ಸರ್ಕಾರ ಬರಲು ಕಾರಣರಾದರು. ಮೂರು ವರ್ಷ ನೀವು ಸಚಿವರಾಗಿ ಇರ್ತೀರಾ ಎಂದು ನಾಗೇಶ್​ಗೆ ಸಿಎಂ ಭರವಸೆ ಕೊಡ್ಡಿದ್ದರು. ಒಂದು ವೇಳೆ ಸಚಿವ ಸ್ಥಾನದಿಂದ ನಾಗೇಶ್​ರನ್ನ ಕೈಬಿಟ್ರೆ ಕೋಲಾರದಲ್ಲಿ ಬಿಜೆಪಿ ವಿರುದ್ಧ ಕೆಲಸ ಮಾಡ್ತೀವಿ ಎಂದು ವಿಜಯ್​ಕುಮಾರ್​ ಎಚ್ಚರಿಸಿದ್ದಾರೆ.
ಸಂಪುಟದ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಸಿಎಂ, ಹಾಲಿ ಸಚಿವರಿಗೆ ಟೆನ್ಷನ್​

ಅಣ್ಣ-ತಮ್ಮನಿಂದ ನಿರಂತರ ಅತ್ಯಾಚಾರ: ಲವ್ ಜಿಹಾದ್​ಗೆ ಸಿಲುಕಿ ನರಳಾಡುತ್ತಿದ್ದಾಳೆ ಬೆಂಗಳೂರಿನ ಯುವತಿ

ತೊಗರಿ ಒಕ್ಕಣೆ ಮಾಡುತ್ತಿದ್ದ ಮಹಿಳೆ ಮಷಿನ್​ಗೆ ಸಿಲುಕಿ ಸಾವು!

ಎಲ್ಲೇ ಬರ ಬಂದರೂ, ಯಾವ ಕೆರೆ ಬತ್ತಿದರೂ ಗೌಡರ ಕಣ್ಣಲ್ಲಿ ಮಾತ್ರ ನೀರು ಬತ್ತಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 7 =
Remember me
