ಬೆಂಗಳೂರು:ನ.1 ರಂದು ಎಲ್ಲೆಡೆ ಜನರು ಕನ್ನಡ ರಾಜ್ಯೋತ್ಸವದ ಸಮಾರಂಭಗಳಲ್ಲಿ ನಿರತರಾಗಿದ್ದರೆ, ಅಬಕಾರಿ ಇಲಾಖೆಯ ಕೆಲವು ಅಧಿಕಾರಿಗಳು ಮಾತ್ರ ರಾಜ್ಯೋತ್ಸವದ ಹೆಸರಿನಲ್ಲಿ ಹಣ ವಸೂಲಿಗೆ ಮಾಡಿದ ಆರೋಪ ನಗರದಲ್ಲಿ ಕೇಳಿ ಬಂದಿದೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಬಕಾರಿ ಇಲಾಖೆಯ ಕೆಲವು ಅಧಿಕಾರಿಗಳು ಬೆಂಗಳೂರಿನ ಎಲ್ಲಾ ಬಾರ್-ವೈನ್ ಸ್ಟೋರ್​​​ ಮತ್ತು ಪಬ್​​ಗಳಿಗೆ ತಾಯಿ ಭುವನೇಶ್ವರಿಯ ಫೋಟೊಗಳನ್ನು ಕಳಿಸಿದ್ದಾರೆ. ನಂತರ ಯಾರಿಗೆಲ್ಲಾ ಈ ಫೋಟೋಗಳನ್ನು ಕಳುಹಿಸಿದ್ದಾರೋ ಅವರಿಂದ ಪ್ರತಿಯೊಂದು ಫೋಟೋಕ್ಕೆ ತಲಾ 1 ಸಾವಿರದಿಂದ 5 ಸಾವಿರ ರೂಪಾಯಿವರೆಗೆ ಹಣ ನೀಡುವಂತೆ ಬೇಡಿಕೆ ಇಟ್ಟು, ಹಣ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಅಧಿಕಾರಿಗಳು ಅಂಗಡಿಯವರಿಗೆ ಕೈಯಲ್ಲಿ ಕನ್ನಡ ಬಾವುಟ ಹಿಡಿದ ತಾಯಿ ಭುವನೇಶ್ವರಿಯ ಫೋಟೋವನ್ನು ನೀಡಲು ಹೋಗಿ, ಬೇರೆಯದ್ದೇ ಫೋಟೋ ನೀಡಿ ಯಡವಟ್ಟು ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಕನ್ನಡಮ್ಮನ ಕೈಯಲ್ಲಿ ಕನ್ನಡ ಬಾವುಟದ ಬದಲಿಗೆ ಬೇರೊಂದು ಬಾವುಟ ಕಂಡುಬಂದಿದೆ. ಈ ಬಾವುಟದಲ್ಲಿ ಕೆಂಪು-ಹಳದಿ ಬಣ್ಣವಿಲ್ಲ. ಬದಲಿಗೆ ಬೇರೆ ಬಣ್ಣದ ಬಾವುಟವಿದೆ. ಜತೆಗೆ ಅದರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಚಿಹ್ನೆ ಕೂಡ ಇದೆ. ಹಾಗಾಗಿ ಇದರ ವಿರುದ್ಧ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಕನ್ನಡ ಸಂಘಟನೆಯ ಕಾರ್ಯಕರ್ತರು ತಾಯಿ ಭುವನೇಶ್ವರಿ ಹೆಸರಲ್ಲಿ ವಸೂಲಿಗೆ ನಿಂತ ಅಬಕಾರಿ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ.
ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರು ‘ಇದಕ್ಕೂ ನಮ್ಮ ಸಾಹಿತ್ಯ ಪರಿಷತ್ತಿಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಪೊಲೀಸ್​​​​ ಕಮಿಷನರ್​​ಗೆ ದೂರು ಕೊಡುತ್ತೇನೆ’ ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
