ಬೆಂಗಳೂರು:ಸೂಕ್ಷ್ಮ, ಸಣ್ಣ ಕೈಗಾರಿಕೆಗಳಿಗೆ ಕಾರ್ಮಿಕ ಕಾನೂನುಗಳಿಂದ ವಿನಾಯಿತಿ ನೀಡಬೇಕು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ( ಎಂಎಸ್​ಎಂಇ) ಕನಿಷ್ಠ ವೇತನ ನೀತಿ ಜಾರಿಗೊಳಿಸಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕಾಗಳ ಸಂಘ( ಕಾಸಿಯಾ) ಅಧ್ಯಕ್ಷ ಎಂ.ಜಿ. ರಾಜಗೋಪಾಲ್​ ಒತ್ತಾಯಿಸಿದ್ದಾರೆ.
ಎಂ.ಜಿ.ರಾಜಗೋಪಾಲ್​ ನೇತೃತ್ವದ ನಿಯೋಗ, ಸೋಮವಾರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ಬ್ಯಾಂಕಿಂಗ್​, ಹಣಕಾಸು ಹಾಗೂ ಕಾರ್ಮಿಕ ವಿಷಯ ಸೇರಿ ಎಂಎಸ್​ಎಂಇ ಎದುರಿಸುತ್ತಿರುವ ಸಮಸ್ಯೆ ಬಗೆಹರಿಸುವಂತೆ ಮನವಿ ಪತ್ರ ಸಲ್ಲಿಸಿದರು.ದೇಶದ ಎಲ್ಲ ರಾಜ್ಯಗಳಲ್ಲೂ ಕನಿಷ್ಠ ವೇತನ ನೀತಿ ಇದೆ. ಇದು ಸೂಕ್ಷ್ಮ, ಸಣ್ಣ, ಮಧ್ಯಮ,ಬೃಹತ್​ ಹಾಗೂ ಐಟಿ ಕಂಪನಿಗಳಿಗೆ ಅನ್ವಯವಾಗುತ್ತದೆ. ಬೃಹತ್​ ಕೈಗಾರಿಕೆಗಳು,ಐಟಿ ಕಂಪನಿಗಳು ಅರ್ಹತೆ ಮತ್ತು ಕೌಶಲ ಮೂಲಕ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತವೆ. ಆದರೆ ಎಂಎಸ್​ಎಂಇಗಳು ಶಾಲೆ ಬಿಟ್ಟ, ಅನರಸ್ಥರು, ಕೌಶಲ ಹೊಂದಿಲ್ಲದ ನಿರುದ್ಯೋಗಿಳಿಗೆ ಕೆಲಸ ಕೊಟ್ಟು ಸೂಕ್ತ ತರಬೇತಿಗೆ ಅವಕಾಶ ನೀಡಲಾಗುತ್ತಿದೆ. 50ಗಿಂತ ಕಡಿಮೆ ಉದ್ಯೋಗಿ ಹೊಂದಿರುವ ಸೂಕ್ಷ್ಮ, ಸಣ್ಣ ಕೈಗಾರಿಕೆಗಳಿಗೆ ಕಾರ್ಮಿಕ ಕಾನೂನುಗಳಿಂದ ವಿನಾಯಿತಿ ನೀಡಬೇಕೆಂದು ಸಚಿವರ ಬಳಿ ಮನವಿ ಮಾಡಲಾಗಿದೆ ಎಂದು ಹೇಳಿದರು.
ಸ್ವಚ್ಛತೆ ಕಾಪಾಡದ ಖಾಲಿ ನಿವೇಶನಗಳಿಗೆ ದಂಡಎಂಎಸ್​ಎಂಇಗಳನ್ನು ಆದ್ಯತೆ ಸಾಲಕ್ಕಾಗಿ ಪರಿಗಣಿಸಲಾಗಿದ್ದರೂ ಬ್ಯಾಂಕ್​ಗಳು ವಿಧಿಸುತ್ತಿರುವ ಬಡ್ಡಿ ದರ, ಮಧ್ಯಮ ಮತ್ತು ಬೃಹತ್​ ಕೈಗಾರಿಕೆಗಳಿಗೆ ನೀಡುವ ಸಾಲದ ಬಡ್ಡಿ ದರಗಿಂತ ಜಾಸ್ತಿ ಇದೆ. ಇದನ್ನು ಕಡಿಮೆ ಮಾಡಬೇಕು. ಪ್ರಸ್ತುತ ಎನ್​ಪಿಎ ಮಾಡದಂಡವು 90 ದಿನಗಳಾಗಿದ್ದು, ಇದನ್ನು 180 ದಿನಗಳಿಗೆ ಹೆಚ್ಚಿಸಬೇಕು.ನಷ್ಟದ ಭಯದಿಂದ ಬ್ಯಾಂಕ್​ಗಳು ಸಾಲ ನೀಡಲು ಹಿಂಜರಿಯುತ್ತಿವೆ. ಎಂಎಸ್​ಎಂಇ ಸಚಿವಾಲಯ ನೀಡುವ ಉದ್ಯಮ ಪ್ರಮಾಣಪತ್ರ ಪ್ರಕ್ರಿಯೆಯಲ್ಲಿ ಇರುವ ಗೊಂದಲ ನಿವಾರಿಸಬೇಕು ಎಂದು ಕಾಸಿಯಾ ಅಧ್ಯಕ್ಷರು ಮನವಿ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + three =
Remember me
