ಬೆಂಗಳೂರು:ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನಜೀವನವನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಶುರುವಾಗಿರುವ ವಿನಾಯಿತಿ ಸರಣಿ ನೆರವಾಗಿದೆ. ಕರೊನಾತಂಕದ ನಡುವೆ ಆದ್ಯತೆಗೆ ಅನುಸಾರವಾಗಿ ನಿರ್ಬಂಧಗಳ ಗಂಟುಗಳನ್ನು ಬಿಚ್ಚುತ್ತಿರುವುದು ಜನ-ಸಾಮಾನ್ಯರಿಗೆ ಸಮಾಧಾನ ಕೊಂಚ ತಂದಿದೆ. ಲಾಕ್​ಡೌನ್​ನಿಂದಾಗಿ ಸಮರೋಪಾದಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗಿದೆ. ಪ್ರತಿದಿನ ಪ್ರಕರಣಗಳ ಸಂಖ್ಯೆ ಸೇರ್ಪಡೆಗೆ ಆತಂಕ ಅನಗತ್ಯ. ಇದು, ತಪಾಸಣೆ, ಪರೀಕ್ಷೆ ಹಾಗೂ ಪತ್ತೆ ಸಾಮರ್ಥ್ಯ ವೃದ್ಧಿಗೆ ಸಾಕ್ಷಿಯಾಗಿದೆ.
ಆಡಳಿತಯಂತ್ರ ಚುರುಕು, ಆರ್ಥಿಕತೆ ಚೇತರಿಕೆ:ಮುಂಚೂಣಿ ಕರೊನಾ ಯೋಧರ ಹೆಗಲಿಗೆ ಎಲ್ಲ ಭಾರ ಬಿದ್ದಿದೆ. ದೀರ್ಘಾವಧಿಗೆ ಮುಂದುವರಿದರೆ ಸೇವಾ ನಿರತ ಸೇನಾನಿಗಳಲ್ಲಿ ಸುಸ್ತು, ಬೇಸರ ಹುಟ್ಟಿಕೊಳ್ಳುತ್ತದೆ. ಅಲ್ಲದೆ, ಇನ್ನುಳಿದ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೆಲಸವಿಲ್ಲದೆ ಜಡಗಟ್ಟಿದ ಮನಸ್ಥಿತಿ ಏರ್ಪಡುತ್ತದೆ. ಆಡಳಿತ ಯಂತ್ರದ ಕಾರ್ಯಭಾರ ಸಮತೋಲನಗೊಳಿಸಿ ಚುರುಕು ಮೂಡಿಸುವುದಕ್ಕೂ ವಿನಾಯಿತಿ ಆಸರೆಯಾಗಲಿದೆ. ತುರ್ತು ಕೆಲಸಗಳ ಜತೆಗೆ ಅಗತ್ಯವಾದ ಅಭಿವೃದ್ಧಿ ಕಾಮಗಾರಿಗಳು ಮತ್ತು ಕಾರ್ಯಕ್ರಮಗಳು ಅನುಷ್ಠಾನಕ್ಕೆ ಅನುಕೂಲವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಜ್ಯದ ಬೊಕ್ಕಸಕ್ಕೆ ಆದಾಯ ಹರಿವಿನ ಪ್ರಮಾಣ ಒಂದೇ ಬಾರಿಗೆ ಹೆಚ್ಚುವುದಿಲ್ಲ. ಆದರೂ ಶೂನ್ಯ ಸ್ಥಿತಿಯಿಂದ ಮೇಲೇಳಲು ಊರುಗೋಲಾಗುತ್ತದೆ.  ಕೇಂದ್ರದ ಪಾಲು ಯಾವಾಗ ? ಎಷ್ಟು ? ಸಿಗುತ್ತದೆ ಎಂದು ಸದ್ಯಕ್ಕೆ ಹೇಳಲಾಗದು. ಹೀಗಾಗಿ ನೇರ ಆದಾಯೋತ್ಪನ್ನದ ಮೂಲಗಳಲ್ಲಿ ಸುಧಾರಣೆಯಾಗಿ ಸಂಬಳ, ಇನ್ನಿತರ ನಿರ್ವಹಣಾ ವೆಚ್ಚಗಳನ್ನು ಸರಿದೂಗಿಸುವ ಲೆಕ್ಕಾಚಾರವಿದೆ.
ನಿಯಂತ್ರಿತ ಹಾಗೂ ತೀವ್ರ ಬಾಧಿತ ಕ್ಷೇತ್ರ ಹೊರತುಪಡಿಸಿ ವಿವಿಧ ಕ್ಷೇತ್ರಗಳಿಗೆ ನೀಡಿದ ವಿನಾಯಿತಿ ಪರಿಸ್ಥಿತಿ ಅವಲೋಕಿಸಿ ಅಗತ್ಯ ಕ್ರಮವಹಿಸಲು ಅವಕಾಶ ಮಾಡಿಕೊಡಲಿದೆ. ಭೌತಿಕ ಅಂತರ, ಮಾಸ್ಕ್ ಕಡ್ಡಾಯ ಇತ್ಯಾದಿ ಅಗತ್ಯ ಸುರಕ್ಷತಾ ಕ್ರಮಗಳ ಪಾಲನೆ ಮೇಲೆ ನಿಗಾವಹಿಸಲು ಸಾಧ್ಯವಾಗಲಿದೆ. ಮೇ 3ರ ಬಳಿಕ ಲಾಕ್ ಡೌನ್ ಮುಗಿದರೂ ಕೈಗೊಳ್ಳಬೇಕಾದ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳ ಕುರಿತಾಗಿ ಸರ್ಕಾರಕ್ಕೆ ಸ್ಪಷ್ಟ ಹಿಮ್ಮಾಹಿತಿ (ಫೀಡ್​ಬ್ಯಾಕ್) ಸಿಗುತ್ತದೆ ಎಂದು ಹೆಸರು ಹೇಳಲಿಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಹಂತ ಹಂತವಾಗಿ ನಿರ್ಬಂಧಗಳಿಗೆ ಸಡಿಲಿಕೆ ನೀಡುತ್ತಿರುವುದು ಒಳ್ಳೆಯ ಕ್ರಮ. ಆರೋಗ್ಯ ಸವಲತ್ತುಗಳ ಸುಧಾರಣೆ ಸೇರಿದಂತೆ ಅಗತ್ಯ ಪರಿಹಾರ ಕ್ರಮಗಳಿಗೆ ಲಾಕ್ ಡೌನ್ ಸಾಕಷ್ಟು ಕಾಲಾವಕಾಶ ನೀಡಿದೆ. ಜನ-ಸಾಮಾನ್ಯರ ಬದುಕಿಗೆ ಚೈತನ್ಯ, ದುಡಿಮೆ ಹಾಗೂ ಅಧಿಕಾರಿಗಳು, ಸಿಬ್ಬಂದಿಯ ಇಚ್ಚಾಶಕ್ತಿಗೆ ಬಲ ತುಂಬುವುದು ಮುಖ್ಯವಾಗಿದೆ.
| ಎಂ.ಮದನ್ ಗೋಪಾಲ್,ನಿವೃತ್ತ ಐಎಎಸ್ ಅಧಿಕಾರಿ.
ಸಮುದಾಯದಲ್ಲಿ ಸಾಂಕ್ರಾಮಿಕ ರೋಗ ನಿರೋಧಕ ಶಕ್ತಿ ವೃದ್ಧಿಯಾಗಲು 3-4 ತಿಂಗಳು ಬೇಕು. ನಿರ್ಬಂಧ ದಿಂದ ಹೊರಗೆ ಬಂದ ಬಳಿಕ ಸಾಮಾಜಿಕ ದೂರ ಅಂತರ, ಮಾಸ್ಕ್, ಶುಚಿತ್ವ ಇತ್ಯಾದಿ ಮುನ್ನೆಚರಿಕೆ ಕ್ರಮಗಳು ಇನ್ನಷ್ಟು ಬಿಗಿಗೊಳಿಸಬೇಕು.
| ಡಾ.ಸಿ.ಎನ್. ಮಂಜುನಾಥ್ಹೃದ್ರೋಗ ತಜ್ಞ
ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ, ಕಡಿಮೆಯಾಗುತ್ತಾ?: ವಿಜಯವಾಣಿ ಫೋನ್​ಇನ್​ನಲ್ಲಿ ಆರೋಗ್ಯ ಇಲಾಖೆ ಜಂಟಿ ನಿರ್ದೇಶಕರ ಉಪಯುಕ್ತ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
