ಬೆಂಗಳೂರು: ವಿವಿಧ ಕ್ಷೇತ್ರಗಳು ಹಾಗೂ ಜನರ ಬೇಡಿಕೆಗಳಿಗೆ ಸ್ಪಂದಿಸಿ, ಲಾಕ್​ಡೌನ್ ನಿರ್ಬಂಧಗಳಿಂದ ವಿನಾಯಿತಿ ನೀಡುವುದನ್ನು ಗುರುವಾರವೂ ಮುಂದುವರಿಸಿರುವ ಸರ್ಕಾರ ಕೃಷಿಕರು, ವಿದ್ಯಾರ್ಥಿಗಳು ಸೇರಿದಂತೆ ಹಲವರಿಗೆ ಉಪಯೋಗವಾಗುವಂತಹ ಹಲವು ಘೋಷಣೆ ಹೊರಡಿಸಿದೆ. ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಈ ಕುರಿತು ಆದೇಶ ಹೊರಡಿಸಿದ್ದಾರೆ.
ನಗರ ಪ್ರದೇಶದ ದಾಲ್ ಮಿಲ್, ಪ್ಲೋರ್ ಮಿಲ್, ಬ್ರೆಡ್ ಫ್ಯಾಕ್ಟರಿ, ಹಾಲು ಸಂಸ್ಕರಣೆ ಘಟಕ ಇತ್ಯಾದಿ ಆಹಾರ ಸಂಸ್ಕರಣೆ, ಅಡಕೆ, ತೆಂಗು, ಸಾಂಬಾರು ದಿನಸಿ ಮುಂತಾದ ತೋಟಗಾರಿಕೆ ಬೆಳೆಗಳ ಕೊಯ್ಲು, ಸಂಸ್ಕರಣೆ ಹಾಗೂ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಕ್ರೋಡೀಕೃತ ಮಾರ್ಗಸೂಚಿ ಪರಿಷ್ಕರಿಸಿ ಈ ವಿನಾಯಿತಿ ನೀಡಿದ್ದಾರೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸುರಕ್ಷತಾ ಸಾಧನಗಳ ಬಳಕೆ, ಸೀಮಿತ ಸ್ಥಳಗಳಲ್ಲಿ ಲಭ್ಯ ಕಾರ್ವಿುಕರು,ಸೀಮಿತ ಸಿಬ್ಬಂದಿಗೆ ಅವಕಾಶ ಮುಂತಾದ ನಿಯಮಗಳನ್ನು ಪಾಲಿಸುವುದು ಕಡ್ಡಾಯವೆಂದು ಬಿಬಿಎಂಪಿ ಆಯುಕ್ತರು ಹಾಗೂ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಯಾವುದಕ್ಕೆಲ್ಲ ವಿನಾಯಿತಿ
ಮರಗಳು ಹೊರತಾದ ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಣೆ, ಕೊಯ್ಲು ಹಾಗೂ ಸಂಸ್ಕರಿಸಲು ಪರಿಶಿಷ್ಟ ಪಂಗಡ ಹಾಗೂ ಅರಣ್ಯ ಪ್ರದೇಶದ ಇತರ ಅರಣ್ಯ ವಾಸಿಗಳಿಗೆ ಪರವಾನಗಿ, ಬೀಜಗಳು ಹಾಗೂ ತೋಟಗಾರಿಕೆ ಉತ್ಪನ್ನಗಳ ಪ್ಯಾಕ್ ಹೌಸ್, ತಪಾಸಣೆ, ಸಂಸ್ಕರಣೆಗೆ ಆಮದು/ರಫ್ತು ಸೌಲಭ್ಯ
ನಾಟಿ ಸಾಮಗ್ರಿ, ಜೇನುಗೂಡು, ಜೇನುತುಪ್ಪ, ಜೇನಿನ ಉತ್ಪನ್ನಗಳ ಅಂತಾರಾಜ್ಯ, ರಾಜ್ಯದೊಳಗೆ ಸಾಗಣೆ, ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆ ಗಳಿಗೆ ಸಂಬಂಧಿಸಿದ ಸಂಶೋಧನೆ, ಬಿದಿರು, ಅಡಕೆ, ತೆಂಗು, ಸಾಂಬಾರು ದಿನಸಿ ಬೆಳೆಗಳ ಕೊಯ್ಲು, ಸಂಸ್ಕರಣೆ ಮತ್ತು ಮಾರಾಟಕ್ಕೆ ಅವಕಾಶ, ಪಠ್ಯ ಪುಸ್ತಕದ ಅಂಗಡಿಗಳು, ಎಲೆಕ್ಟ್ರಿಕ್ ಫ್ಯಾನ್ ಅಂಗಡಿಗಳು ತೆರೆಯಬಹುದು
ಐಸ್ಕ್ರೀಮ್ ಒಣಹಣ್ಣುಗಳು, ಜ್ಯೂಸ್ ಪಾರ್ಸೆಲ್ ಕೊಂಡೊಯ್ಯಬಹುದು, ಬ್ಯಾಂಕೇತರ ಗೃಹ ಸೇರಿ ಹಣಕಾಸು ಸಂಸ್ಥೆಗಳು, ಕಿರು ಹಣಕಾಸು ಸಂಸ್ಥೆಗಳು, ಪತ್ತಿನ ಸಹಕಾರ ಸಂಘಗಳು, ಪ್ರಿಪೇಡ್ ಮೊಬೈಲ್ ರೀಚಾರ್ಜ್ ಅಂಗಡಿಗಳು ಬಾಗಿಲು ತೆರೆಯಬಹುದು
ನೀರು, ನೈರ್ಮಲ್ಯೀಕರಣ, ವಿದ್ಯುತ್ ಪ್ರಸರಣ ಕಾಮಗಾರಿಗಳು, ದೂರ ಸಂಪರ್ಕ ಜಾಲದ ಆಪ್ಟಿಕಲ್ ಫೈಬರ್ ಕೇಬಲ್ ಹಾಕುವ ಕಾಮಗಾರಿಗೆ ಅಸ್ತು
ಕೊವಿಡ್​​ನಿಂದಾದ ನಷ್ಟದ ಮೊತ್ತದ ಬಿಲ್​​ನ್ನು ಚೀನಾಕ್ಕೆ ಕಳಿಸಿದೆಯಾ ಜರ್ಮನಿ? ಮಾಧ್ಯಮವೊಂದರ ವರದಿಯ ಹೆಡ್​ಲೈನ್ ಎಡವಟ್ಟು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 2 =
Remember me
