| ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆಬಳ್ಳಾರಿ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಯಾರೇ ಸ್ಪರ್ಧಿಸಿದರೂ ಗೆಲುವು ನಿಶ್ಚಿತ ಎಂಬ ಇತಿಹಾಸ ದಾಖಲಾಗಿತ್ತು. ಹೀಗಾಗಿಯೇ 1999ರಲ್ಲಿ ಸೋನಿಯಾ ಗಾಂಧಿ ಸ್ಪರ್ಧಿಸಿ ಗೆದ್ದಿದ್ದರು. ಆದರೆ, ಅದೇ ಕೊನೇ. ಅಲ್ಲಿಂದ 2018ರ ಒಂದು ಉಪಚುನಾವಣೆ ಬಿಟ್ಟರೆ ಈವರೆಗೂ ಕಾಂಗ್ರೆಸ್ ಗೆದ್ದೇ ಇಲ್ಲ. ಈ ಸಲ ಕ್ಷೇತ್ರವನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಸಂಡೂರು ಶಾಸಕ ಈ.ತುಕಾರಾಮ್ ಅವರನ್ನು ಕಣಕ್ಕಿಳಿಸಿದೆ. ಇತ್ತ ಹಾಲಿ ಸಂಸದ ದೇವೇಂದ್ರಪ್ಪ ಬದಲಿಗೆ ಮಾಜಿ ಸಚಿವ ಬಿ.ಶ್ರೀರಾಮುಲು ಬಿಜೆಪಿ ಹುರಿಯಾಳಾಗಿದ್ದು, ಕ್ಷೇತ್ರ ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆ.
ಎರಡೂ ಪಕ್ಷಗಳ ನಾಯಕರು 2023ರ ವಿಧಾನಸಭಾ ಚುನಾವಣಾ ಫಲಿತಾಂಶದ ಆಧಾರದ ಮೇಲೆ ಪ್ರಚಾರ ತಂತ್ರ ರೂಪಿಸಿದ್ದಾರೆ. ಬಳ್ಳಾರಿ ನಗರ-ಗ್ರಾಮೀಣ, ಕಂಪ್ಲಿ, ಸಂಡೂರು, ಕೂಡ್ಲಿಗಿ, ವಿಜಯನಗರ ಕ್ಷೇತ್ರಗಳು ಬಿಜೆಪಿಗೆ ಸವಾಲಾಗಿವೆ. ಹೂವಿನಹಡಗಲಿ ಹಾಗೂ ಹಗರಿಬೊಮ್ಮನಹಳ್ಳಿ ಕಾಂಗ್ರೆಸ್​ಗೆ ಸವಾಲಾಗಿವೆ. ಯಾವುದೇ ಕಾರಣಕ್ಕೂ ಈ ಸಲ ಕ್ಷೇತ್ರ ಕೈತಪ್ಪಬಾರದು ಎಂದು ಕಾಂಗ್ರೆಸ್ ನಾಯಕರು ಪಣತೊಟ್ಟಿದ್ದಾರೆ. ಬಳ್ಳಾರಿ ಕ್ಷೇತ್ರ ಗೆಲ್ಲುವ ಮೂಲಕ ಸೋನಿಯಾ ಗಾಂಧಿಗೆ ಉಡುಗೊರೆ ನೀಡುವುದಾಗಿ ಸಚಿವ ಬಿ.ನಾಗೇಂದ್ರ ಶಪಥ ಮಾಡಿದ್ದಾರೆ. ಇತ್ತ ಶ್ರೀರಾಮುಲು ಸೇರಿ ಘಟನಾನುಘಟಿ ನಾಯಕರು ಬಳ್ಳಾರಿಯಲ್ಲಿ ಮತ್ತೊಮ್ಮೆ ಬಿಜೆಪಿ, ಮತ್ತೊಮ್ಮೆ ಮೋದಿ ಎಂಬ ಮಂತ್ರ ಜಪಿಸುತ್ತಿದ್ದಾರೆ. ಪ್ರಧಾನಿ ಮೋದಿ ಸಾಧನೆ ಮುಂದಿಟ್ಟಿರುವ ಶ್ರೀರಾಮುಲು, ಜನಪರ ಯೋಜನೆಗಳ ಜಾಗೃತಿ ಮೂಡಿಸುತ್ತಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಈಗಾಗಲೇ ಶೇ.75 ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ.
ಸೋನಿಯಾ ಗೆಲ್ಲಿಸಿದ್ದ ಕ್ಷೇತ್ರ:1951ರಿಂದ 2004ರವರೆಗೆ ಬಳ್ಳಾರಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. 1999ರಲ್ಲಿ ಸೋನಿಯಾ ಗಾಂಧಿ ಹಾಗೂ ಬಿಜೆಪಿ ನಾಯಕಿ ಸುಷ್ಮಾಸ್ವರಾಜ್ ಸ್ಪರ್ಧಿಸಿದ್ದರು. ಸುಷ್ಮಾ ಸ್ವರಾಜ್ ವಿರುದ್ಧ ಗೆಲುವು ಕಂಡಿದ್ದ ಸೋನಿಯಾ, ಅಮೇಥಿಯಲ್ಲೂ ಗೆದ್ದಿದ್ದರಿಂದ ಇಲ್ಲಿಗೆ ರಾಜೀನಾಮೆ ನೀಡಿದ್ದರು. 2004ರಲ್ಲಿ ಬಿಜೆಪಿಯಿಂದ ಕರುಣಾಕರ ರೆಡ್ಡಿ ಗೆಲ್ಲುವ ಮೂಲಕ ಕೈ ಕೋಟೆ ಛಿದ್ರಗೊಂಡಿತು. ಅಂದಿನಿಂದ ಒಂದು ಉಪ ಚುನಾವಣೆಯಲ್ಲಿ (2018 ಉಗ್ರಪ್ಪ) ಮಾತ್ರ ಕಾಂಗ್ರೆಸ್ ಗೆದ್ದಿದೆ. ಒಟ್ಟಾರೆ 15 ಸಲ ಕಾಂಗ್ರೆಸ್, ನಾಲ್ಕು ಬಾರಿ ಬಿಜೆಪಿ ಗೆಲುವು ಕಂಡಿದೆ.
ವೀರಶೈವ ಲಿಂಗಾಯತ, ಎಸ್ಸಿ-ಎಸ್ಟಿ ನಿರ್ಣಾಯಕರು :ಎಸ್ಟಿ ಮೀಸಲು ಕ್ಷೇತ್ರದಲ್ಲಿ 18,65,341 ಮತದಾರರಿದ್ದಾರೆ. 920022 ಪುರುಷರು, 945053 ಮಹಿಳೆಯರಿದ್ದಾರೆ. ವೀರಶೈವ, ಎಸ್ಸಿ, ಎಸ್ಟಿ ಮತದಾರರೇ ನಿರ್ಣಾಯಕರು. ಜಾತಿವಾರು ನೋಡುವುದಾದರೆ ಎಸ್ಟಿ 4.20 ಲಕ್ಷ, ಎಸ್ಸಿ 3.60 ಲಕ್ಷ, ವೀರಶೈವ ಲಿಂಗಾಯತರು 3.31, ಕುರುಬ 2.41, ಮುಸ್ಲಿಂ 2.40 ಲಕ್ಷ, ಬಲಿಜ 48 ಸಾವಿರ, ನೇಕಾರ 32, ಯಾದವ 46, ಗಂಗಾಮತಸ್ಥ 48, ಉಪ್ಪಾರ- 32 ಸಾವಿರ, ಮಡಿವಾಳ 30, ಬ್ರಾಹ್ಮಣ 24, ಕಮ್ಮಾ 30, ವೈಶ್ಯ 24 ಸಾವಿರ, ಇತರ 40 ಸಾವಿರ ಮತದಾರರು ಇದ್ದಾರೆ.
1. ವಾಲ್ಮೀಕಿ ಸಮುದಾಯದ ರಾಜ್ಯ ನಾಯಕ
2. ಕ್ಷೇತ್ರದಲ್ಲಿ ಚಿರಪರಿಚಿತ, ವಿಧಾನಸಭೆ ಸೋಲಿನ ಅನುಕಂಪ
3. ಪ್ರಧಾನಿ ನರೇಂದ್ರ ಮೋದಿ ಅಭಯ
4. ಕ್ಷೇತ್ರದಲ್ಲಿ ಆರು ಕಾಂಗ್ರೆಸ್ ಶಾಸಕರಿರುವುದು
5. ಕ್ಷೇತ್ರಕ್ಕೆ ಕೇಂದ್ರದ ಯೋಜನೆಗಳು ನಿರೀಕ್ಷೆಯಷ್ಟಿಲ್ಲ
1. ಎಲ್ಲರೊಂದಿಗೆ ಬೆರೆಯುವ ಗುಣ, ಸಾಧಾರಣ ವ್ಯಕ್ತಿತ್ವ
2. ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ಬಲ
3. ಶಾಸಕರಾಗಿ ಚಿರಪರಿಚಿತ, ರಾಜ್ಯ ಸರ್ಕಾರದ ಗ್ಯಾರಂಟಿ ಅಭಯ
4. ಕಳೆಗಟ್ಟದ ಚುನಾವಣಾ ಪ್ರಚಾರ
5. ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ವರ್ಚಸ್ಸಿಲ್ಲದಿರುವುದು
ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಲು ಜನ ಆಸೆಪಟ್ಟಿದ್ದಾರೆ. ದೇಶ ಸುಭಿಕ್ಷವಾಗಿರಲು ಬಿಜೆಪಿ ಅಧಿಕಾರಕ್ಕೆ ಬರಬೇಕು. 2004ರಿಂದ ಕಾಂಗ್ರೆಸ್​ಗೆ ಬಳ್ಳಾರಿಯಲ್ಲಿ ಸ್ಥಾನ ಇಲ್ಲದಂತಾಗಿದೆ. ಈ ಬಾರಿ ಬಹುಮತದಿಂದ ಜನ ನನಗೆ ಆಶೀರ್ವಾದ ಮಾಡಲಿದ್ದಾರೆ.
| ಬಿ.ಶ್ರೀರಾಮುಲು ಬಿಜೆಪಿ ಅಭ್ಯರ್ಥಿ
ಕಾಂಗ್ರೆಸ್ ಎಂದರೆ ನುಡಿದಂತೆ ನಡೆಯುವ ಪಕ್ಷವಾಗಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಕಷ್ಟಗಳನ್ನು ಪರಿಹರಿಸಿದೆ. ಸುಳ್ಳನ್ನೇ ಮನೆದೇವರು ಮಾಡಿಕೊಂಡಿರುವ ಬಿಜೆಪಿಗೆ ಜನ ಪಾಠ ಕಲಿಸಲಿದ್ದಾರೆ. ಈ ಬಾರಿ ಬಳ್ಳಾರಿ ಕಾಂಗ್ರೆಸ್ ಪಾಲಾಗಲಿದೆ.
| ಈ.ತುಕಾರಾಮ್ ಕಾಂಗ್ರೆಸ್ ಅಭ್ಯರ್ಥಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
