ಬೆಂಗಳೂರು:ಲೋಕಸಭಾ ಚುನಾವಣೆ 2024ರ ಫಲಿತಾಂಶಕ್ಕೆ ಇನ್ನೇನು ಎರಡು ದಿನಗಳಷ್ಟೇ ಬಾಕಿ ಉಳಿದಿರುವ ಹೊತ್ತಲ್ಲಿ ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದಿದೆ. ಏಳು ಹಂತದಲ್ಲಿ ನಡೆದ ಚುನಾವಣೆ ಇಂದು ಮುಕ್ತಾಯಗೊಳ್ಳುತ್ತಿದ್ದಂತೆ, ಇದೀಗ ಎಕ್ಸಿಟ್ ಪೋಲ್ ಫಲಿತಾಂಶ ರಾಜಕೀಯ ಪಕ್ಷಗಳ ಗೆಲುವಿನ ಲೆಕ್ಕಾಚಾರವನ್ನು ತೆರೆದ ಪುಸ್ತಕದಂತೆ ತೋರಿಸಿದೆ. ಇನ್ನು ಫಲಿತಾಂಶಗಳ ಪ್ರಕಾರ, ಈ ಬಾರಿಯೂ ಮೋದಿ ಸರ್ಕಾರವೇ ಅಧಿಕಾರ ಹಿಡಿಯಲಿದೆ ಎಂಬುದು ಬಹುತೇಕ ಖಚಿತವಾಗಿದೆ.
ಇನ್ನು ಕರ್ನಾಟಕದ ಒಟ್ಟು 28 ಕ್ಷೇತ್ರಗಳಿಗೆ ಎರಡು ಹಂತದ ಮತದಾನ ನಡೆಸಲಾಯಿತು. ಇದೀಗ ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ, ರಾಜ್ಯದಲ್ಲಿ ಬಿಜೆಪಿ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್​ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂದು ‘ಇಂಡಿಯಾ ಟುಡೇ’ ಸಮೀಕ್ಷೆ ತಿಳಿಸಿದೆ.
ಈ ಬಾರಿಯೂ ಕರ್ನಾಟಕದಲ್ಲಿ ಕಾಂಗ್ರೆಸ್​​ ಹಿನ್ನಡೆ ಕಾಣಲಿದ್ದು, ಬಿಜೆಪಿ ಮೇಲುಗೈ ಸಾಧಿಸಲಿದೆ ಎಂಬುದು ಲೆಕ್ಕಾಚಾರ. ಈ ಚುನಾವಣೋತ್ತರ ಫಲಿತಾಂಶಗಳು ನಿಖರವಾಗಿ ಇರಬೇಕು ಎಂದೇನಿಲ್ಲ. ಇದು ಗೆಲುವಿನ ಒಂದು ಮುನ್ನೋಟವಾಗಿರಲಿದೆ. 543 ಲೋಕಸಭಾ ಕ್ಷೇತ್ರಗಳ ಅಧಿಕೃತ ಫಲಿತಾಂಶವು ಇದೇ ಜೂನ್ 4ರಂದು ಹೊರಬೀಳಲಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 + sixteen =
Remember me
