ಬೆಂಗಳೂರು:ಕರೊನಾ ಕಾರಣಕ್ಕೆ ಅನೇಕ ವೆಚ್ಚಗಳಿಗೆ ತಡೆ ಹಾಕಿ ಅನುದಾನಗಳನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿರುವ ಸರ್ಕಾರ ಅಚ್ಚರಿ ರೀತಿಯಲ್ಲಿ ಅತಿಥಿಗಳ ಓಡಾಟಕ್ಕೆ 36 ಐಷಾರಾಮಿ ವಾಹನಗಳನ್ನು ಕೊಂಡಿದ್ದು ಇದಕ್ಕಾಗಿ 8.11 ಕೋಟಿ ರೂ. ವೆಚ್ಚ ಮಾಡಿದೆ. ಕರೊನಾದಂತಹ ಸಂದರ್ಭದಲ್ಲಿ ಕಳೆದೊಂದು ವರ್ಷದಿಂದೀಚೆಗೆ ಸಂಕಷ್ಟಮಯ ಸನ್ನಿವೇಶ ಇರುವಾಗ ಈ ವಾಹನ ಖರೀದಿಸುವ ಜರೂರುತ್ತು ಏನಿದೆ ಎಂಬ ಪ್ರಶ್ನೆಗೆ ಅಧಿಕಾರಿಗಳಲ್ಲಿ ಉತ್ತರವಿಲ್ಲ. 36 ಹೊಸ ವಾಹನಗಳ ಪೈಕಿ 35 ಇನ್ನೋವಾ ಕ್ರಿಸ್ಟಾ ಆಗಿದ್ದು, ಒಂದು ವೋಲ್ವೋ ಸೇರಿದೆ.
ಯಾರಿಗೆ ಈ ವಾಹನ: ಇಷ್ಟೊಂದು ದುಬಾರಿ ವಾಹನ ಯಾರ ಬಳಕೆಗೆ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರವೇ ಬರುತ್ತದೆ. ರಾಜ್ಯಕ್ಕೆ ಬರುವ ಅತಿಥಿಗಳು, ಕೇಂದ್ರದಿಂದ ಬರುವ ಅಧಿಕಾರಿಗಳು, ರಾಜತಾಂತ್ರಿಕರು ಹಾಗೂ ವಿಶೇಷ ಸಂದರ್ಭಕ್ಕೆ ಬಳಸಿಕೊಳ್ಳಲಾಗುತ್ತದೆಯಂತೆ. ಇನ್ನೊವಾ ಕ್ರಿಸ್ಟಾ ಬೆಂಗಳೂರಲ್ಲಿ ವಿಮೆ, ರೋಡ್​ ಟ್ಯಾಕ್ಸ್​ ಸೇರಿ ಆನ್​ ರೋಡ್​ ಪೆಸ್​ ಸರಾಸರಿ 15.98 ಲಕ್ಷ ರೂ.ನಿಂದ 24.32 ಲಕ್ಷ ರೂ.ವರೆಗೆ ಇದ್ದು, 16 ಬೇರೆ ಬೇರೆ ಶ್ರೇಣಿಯವು ಇವೆ. ಇದೀಗ ಸರ್ಕಾರ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಖರೀದಿಸುವಾಗ ದರ ಕಡಿತ ಆಗಬೇಕಿತ್ತು. ದರದ ಬಗ್ಗೆಯೂ ಸಾಕಷ್ಟು ಅನುಮಾನಗಳಿವೆ.
ಐರಾವತ ಬಳಸಲ್ಲವೇಕೆ?:ಸಮಾಜ ಕಲ್ಯಾಣ ಇಲಾಖೆಯಿಂದ ಐರಾವತ ಯೋಜನೆಯಡಿ ಪರಿಶಿಷ್ಟರಿಗೆ ನೀಡುವ ಹೊಸ ವಾಹನಗಳನ್ನು ಮ್ಯಾಪಿಂಗ್​ ಮಾಡಿ ಈ ಅತಿಥಿ ಸತ್ಕಾರಕ್ಕೆ ಬಾಡಿಗೆ ಮೇಲೆ ಅಗತ್ಯವಿದ್ದಾಗಷ್ಟೇ ಪಡೆದುಕೊಳ್ಳಲು ಅವಕಾಶವಿದೆ. ಹೀಗೆ ಮಾಡಿದರೆ ಲಾನುಭವಿಗೆ ಅನುಕೂಲಮಾಡಿಕೊಟ್ಟಂತಾಗುತ್ತದೆ. ಜತೆಗೆ ಪ್ರತಿ ವರ್ಷವೂ ಹೊಸ ವಾಹನಗಳನ್ನು ನೀಡುವುದರಿಂದ ಬಳಕೆಗೆ ಹೊಸ ವಾಹನವನ್ನೇ ಪಡೆಯಲು ಅವಕಾಶವಿದೆ. ಒಂದೆರಡು ದಿನದ ಮಟ್ಟಿಗೆ ರಾಜ್ಯಕ್ಕೆ ಆಗಮಿಸುವ ಅತಿಥಿಗಳಿಗೆ 21 ಲಕ್ಷ ರೂ.ನ ಇನ್ನೋವಾ ಕ್ರಿಸ್ಟಾ, ವೋಲ್ವೋ ಕಾರೇ ಏಕೆ ಬೇಕೆಂಬ ಪ್ರಶ್ನೆಗೆ ಅಧಿಕಾರಿಗಳು ಉತ್ತರ ನೀಡುವ ಗೋಜಿಗೆ ಹೋಗಲ್ಲ.
| ಮರಿಲಿಂಗಗೌಡ ಮಾಲೀ ಪಾಟೀಲ್​ ಸಾಮಾಜಿಕ ಕಾರ್ಯಕರ್ತ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − one =
Remember me
