ಬೆಂಗಳೂರು:ಸಾರ್ವಜನಿಕರ ಆಕ್ರೋಶಕ್ಕೆ ಬೆಚ್ಚಿಬಿದ್ದು ಕೇಂದ್ರದ ರಸ್ತೆ ಸಂಚಾರ ನಿಯಮಗಳ ಉಲ್ಲಂಘನೆಗೆ ಭಾರಿ ದಂಡದ ಮೊತ್ತವನ್ನು ರಾಜ್ಯ ಸರ್ಕಾರ ಕಡಿತಗೊಳಿಸಿತ್ತು. ಇದೀಗ ಪರಿಷ್ಕೃತ ಶುಲ್ಕ ಕೈಬಿಟ್ಟು ಕೇಂದ್ರದ ಕಾಯ್ದೆ ಯಥಾವತ್ ಜಾರಿಗೆ ಉತ್ಸುಕತೆ ತೋರಿದೆ. ಸಾರಿಗೆ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಈ ಸುಳಿವನ್ನು ನೀಡಿದ್ದು, ಬಜೆಟ್ ಅಧಿವೇಶನದ ಬಳಿಕ ದಂಡ ಶುಲ್ಕ ಪರಿಷ್ಕರಣೆ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಜನರಲ್ಲಿ ತಿಳಿವಳಿಕೆ ಮೂಡಿಸುವ ಸಲುವಾಗಿ ರಸ್ತೆ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದಂಡ ಪ್ರಮಾಣ ಇಳಿಸಲಾಗಿತ್ತು. ದಂಡ ಪ್ರಯೋಗ ಹೆಚ್ಚಾದಂತೆ ನಿಯಮ ಉಲ್ಲಂಘನೆ ಪ್ರಕರಣಗಳು ತಗ್ಗುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಕಾಯ್ದೆ ಪ್ರಕಾರ ದಂಡ ಜಾರಿ ಬಗ್ಗೆ ಯೋಚಿಸಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರ ಸಂಚಾರ ನಿಯಮಗಳ ಉಲ್ಲಂಘನೆ ತಡೆಗೆ ದುಬಾರಿ ದಂಡವೇ ಸೂಕ್ತ ಎಂದು ಭಾವಿಸಿ ಕಾನೂನು ರೂಪಿಸಿತ್ತು. ಆದರೆ, ದೇಶಾದ್ಯಂತ ಇದಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳು ಈ ಕಾನೂನನ್ನು ಒಪ್ಪದೇ ಪರಿಷ್ಕೃತ ದಂಡ ರೂಪದ ಆದೇಶಗಳನ್ನು ಹೊರಡಿಸಿಕೊಂಡಿತು. ಕರ್ನಾಟಕದಲ್ಲಿ ಸಹ ಒಂದಷ್ಟು ಆಕ್ರೋಶ ವ್ಯಕ್ತವಾಯಿತು. ಜತೆಗೆ ಉಪ ಚುನಾವಣೆ ಎದುರಿಗಿದ್ದ ಕಾರಣ ವ್ಯತಿರಿಕ್ತ ಪರಿಣಾಮ ಬೀರಬಹುದೆಂದೆಣಿಸಿ ರಾಜ್ಯ ಸರ್ಕಾರ ಇತರೆ ರಾಜ್ಯಗಳ ದಾರಿಯನ್ನೇ ಅನುಸರಿಸಿತು. ಇದೇ ವೇಳೆ ತನ್ನ ತೀರ್ವನಕ್ಕೆ ಎಲ್ಲಾ ರಾಜ್ಯಗಳು ಹೋಗಲಿ ಬಿಜೆಪಿ ಸರ್ಕಾರ ಇರುವ ರಾಜ್ಯಗಳಿಂದಾದರೂ ಸೂಕ್ತ ಬೆಂಬಲ ಸಿಗುತ್ತದೆಂದು ನಿರೀಕ್ಷಿಸಿದ್ದ ಕೇಂದ್ರಕ್ಕೆ ಕರ್ನಾಟಕದ ನಡೆ ಕೂಡ ಕಸಿವಿಸಿ ಉಂಟುಮಾಡಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + seventeen =
Remember me
