ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಕೃಷಿ ವಲಯಕ್ಕೆ ಘೋಷಣೆ ಮಾಡಿದ್ದ ಎಲ್ಲ ಯೋಜನೆಗಳನ್ನು ರಾಜ್ಯದಲ್ಲಿ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಯವ್ಯಯದಲ್ಲಿ ಘೋಷಿಸಿದ್ದಾರೆ.
ರೈತರನ್ನು ಕೇವಲ ಸಾಲಮುಕ್ತರನ್ನಾಗಿ ಮಾಡದೆ ಸಬಲೀಕರಣ ಮಾಡುವುದರತ್ತ ಆದ್ಯತೆ ನೀಡಲಾಗಿದೆ. ಅದಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ನೀಡುವ ಕಡೆ ಬಜೆಟ್​ನಲ್ಲಿ ಆದ್ಯತೆ ಸಿಕ್ಕಿದೆ. ಒಂದು ಲಕ್ಷ ಹೆಕ್ಟೇರ್ ಭೂಮಿಯನ್ನು ನೀರಾವರಿ ವ್ಯಾಪ್ತಿಗೆ ತರುವ ಪ್ರಯತ್ನ ಮಾಡುವುದಾಗಿ ಹೇಳಿರುವುದು ಸ್ವಾಗತಾರ್ಹ ಸಂಗತಿ. ಪ್ರವಾಹದಂಥ ಸಂದರ್ಭದಲ್ಲಿ ಕೃಷಿ ಕ್ಷೇತ್ರಕ್ಕೆ ಆಗುವ ಹಾನಿಯನ್ನು ಈ ಮೂಲಕ ತಪ್ಪಿಸಬಹುದಾಗಿದೆ.
ಎತ್ತಿನಹೊಳೆ, ಮಹದಾಯಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಒದಗಿಸಿರುವುದು ಒಳ್ಳೆಯ ಕಾರ್ಯ. ಇದರಿಂದ ಈ ಯೋಜನೆಗಳು ತ್ವರಿತಗತಿಯಲ್ಲಿ ಅನುಷ್ಠಾನವಾಗಲು ಸಹಕಾರಿಯಾಗುತ್ತದೆ. ಕೃಷಿಯಿಂದ ತೋಟಗಾರಿಕೆಗೆ ಬದಲಾವಣೆ ಮಾಡಿಕೊಳ್ಳುವ ರೈತರಿಗೆ 10 ಸಾವಿರ ರೂ. ಪ್ರೋತ್ಸಾಹಧನ ನೀಡುವುದರಿಂದ ಅಭಿವೃದ್ಧಿ ಸಾಧಿಸಲು ಅನುಕೂಲವಾಗುತ್ತದೆ. ರೈತರಿಗೂ ಇದರಿಂದ ನೆರವಾಗುತ್ತದೆ.
ಕೆರೆಗಳನ್ನು ತುಂಬಿಸುವುದು ಕೃಷಿ ಕ್ಷೇತ್ರದ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಯೋಗ್ಯ ಕಾರ್ಯಕ್ರಮ. ಬಿತ್ತನೆ ಬೀಜಗಳಿಗೆ ಟ್ರೀಟ್​ವೆುಂಟ್ ಮಾಡುವುದಾಗಿ ಹೇಳಿದ್ದಾರೆ. ಹವಾಮಾನ ಆಧಾರಿತ ಬೆಳೆ ಪದ್ಧತಿ ಜಾರಿಗೆ ತರುವುದರಿಂದ ಬೆಲೆ ಕುಸಿತವಾಗದಂತೆ ತಡೆಯಲು ಅನುಕೂಲವಾಗುತ್ತದೆ. ಈ ಕ್ರಮ ಅನುಸರಿಸುವುದರಿಂದ ಬೇಡಿಕೆ ಹಾಗೂ ಉತ್ಪಾದನೆ ನಡುವೆ ಸಮತೋಲನ ಸಾಧಿಸಬಹುದು.
ರೈತರಿಗೂ ತಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತದೆ. ಆಹಾರ ಭದ್ರತೆಗೂ ಇದು ಅನುಕೂಲವಾಗಿದೆ. ಕೃಷಿಯಲ್ಲಿ ಆಗುವ ನಷ್ಟ ತಪ್ಪಿಸುವ ಕಡೆಗೂ ಗಮನ ನೀಡಲಾಗಿದೆ. ತೋಟಗಾರಿಕೆ ಹಾಗೂ ರೇಷ್ಮೆಗೆ ನೀಡಿರುವ ಆದ್ಯತೆಯನ್ನು ಗಮನಿಸಿದಾಗ ಕೃಷಿ ಬಗ್ಗೆ ಕೊಟ್ಟಿರುವ ಆದ್ಯತೆ ದೂರದೃಷ್ಟಿಯ ಕ್ರಮವೂ ಹೌದು ಎನಿಸುತ್ತದೆ.
ಕೃಷಿ ಕ್ಷೇತ್ರಕ್ಕೆ ನೀಡಿರುವ ಆದ್ಯತೆಯಿಂದ ಗ್ರಾಮೀಣ ಭಾಗದ ಅಭಿವೃದ್ಧಿ ಸಾಧಿಸಬಹುದಾಗಿದೆ. ನಗರೀಕರಣವಾಗುತ್ತಿರುವ ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ನಷ್ಟ ತಪ್ಪಿಸುವ ಇಂತಹ ಯೋಜನೆಗಳಿಂದ ಮತ್ತೆ ವ್ಯವಸಾಯದ ಕಡೆ ಒಲವು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. ಆಗ ಗ್ರಾಮೀಣ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ ಹಳ್ಳಿಗಳಲ್ಲಿ ಬದಲಾವಣೆಗಳನ್ನು ಕಾಣಲು ಸಾಧ್ಯವಾಗುತ್ತದೆ. ಗ್ರಾಮೀಣ ವಲಯಕ್ಕೆ ಮನೆ ಮನೆಗೆ ನೀರು, 20 ಸಾವಿರ ಕಿ.ಮೀ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಇವೆಲ್ಲವೂ ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿವೆ.
| ಡಾ. ಎಂ.ಬಿ. ರಾಜೇಗೌಡ ಕೃಷಿ ವಿಜ್ಞಾನಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 9 =
Remember me
