ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ಈ ಸಲದ ಬಜೆಟ್​ನಲ್ಲಿ ಹೆಚ್ಚಿನಂಶ ಹೊಸದು ಇಲ್ಲದಿದ್ದರೂ ಇರುವ ಕೆಲವು ಅಂಶಗಳು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಾಮುಖ್ಯ ನೀಡಿವೆ. ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳಿಗೆ ಸಂಭ್ರಮ ಶನಿವಾರ ಎಂಬ ಪರಿಕಲ್ಪನೆ ಉತ್ತಮವಾಗಿದೆ.
ಇಷ್ಟು ದಿನ ಕೇವಲ ಖಾಸಗಿ ಶಾಲಾ ಮಕ್ಕಳು ಈ ರೀತಿ ಸಂಭ್ರಮಿಸುತ್ತಿದ್ದರು. ಇನ್ನು ಮುಂದೆ ತಿಂಗಳಲ್ಲಿ ಎರಡು ಶನಿವಾರ ಬ್ಯಾಗ್ ರಹಿತವಾಗಿ ಶಾಲೆಗೆ ಹೋಗಿ ಸರ್ಕಾರಿ ಶಾಲೆ ಮಕ್ಕಳು ಕೂಡ ಹೆಚ್ಚು ಚಟುವಟಿಕೆಯಲ್ಲಿ ತೊಡಗಬಹುದು. ಯಡಿಯೂರಪ್ಪ ಅವರೇ ಜಾರಿಗೆ ತಂದಿದ್ದ, ಮಕ್ಕಳಿಗೆ ಬೈಸಿಕಲ್ ನೀಡುವ ಯೋಜನೆಯನ್ನು ಮುಂದುವರಿಸಿರುವುದು ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಲಿದೆ. ಆದರೆ, ಗುಣಮಟ್ಟ ಕಾಯ್ದುಕೊಳ್ಳುವುದು ಅಗತ್ಯ. ಇನ್ನೂ ಶಿಕ್ಷಕರ ಸಮಸ್ಯೆಗಳು ಸಾಕಷ್ಟು ಇರುವುದರಿಂದ ಏಕಕಾಲದಲ್ಲಿ ಪರಿಹಾರ ಕಲ್ಪಿಸುವುದು, ಅದಕ್ಕಿಂತ ಮೊದಲಾಗಿ ಆಲಿಸುವುದು ಕಷ್ಟ. ಇದಕ್ಕಾಗಿ ‘ಶಿಕ್ಷಕ ಮಿತ್ರ’ ಎಂಬ ಮೊಬೈಲ್ ಆಪ್ ರೂಪಿಸಿರುವುದು ಸ್ವಾಗತಾರ್ಹ.
ಈ ವರ್ಷ ಪ್ರಾಥಮಿಕ ಶಿಕ್ಷಣದಲ್ಲಿ ಹೊಸದಾಗಿ ಮತ್ತಷ್ಟು ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಅನುಮತಿ ನೀಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ -ಠಿ; 700 ಕೋಟಿ ನಬಾರ್ಡ್ ಮೂಲಕ ಬಿಡುಗಡೆ ಮಾಡಿಸಲು ಮುಂದಾಗಿರುವುದು ಶಾಲೆಯಲ್ಲಿ ಮೂಲಸೌಕರ್ಯ ಕಲ್ಪಿಸಲು ಸಹಾಯ ಮಾಡಲಿದೆೆ. ಎಲ್ಲರಿಗೂ ಉನ್ನತ ಶಿಕ್ಷಣ ದೊರೆಯಬೇಕೆಂದು
ಇಂಟ್ರ್ಯಾಕ್ಟಿವ್​ ಆನ್​ಲೈನ್ ಕೋರ್ಸ್​ಗಳನ್ನು ಜಾರಿಗೆ ತರಲು ಮುಂದಾಗಿರುವುದು ಕೂಡ ಉತ್ತಮ ಬೆಳವಣಿಗೆ. ಆ ಮೂಲಕ ವಿದ್ಯಾರ್ಥಿಗಳು ಆನ್​ಲೈನ್​ನಲ್ಲೇ ವ್ಯಾಸಂಗ ಮಾಡಿ ಪ್ರಮಾಣಪತ್ರ ಪಡೆಯಬಹುದು. ಆದರೆ, ಉದ್ಯೋಗ ಅವಕಾಶಗಳಿಗೆ ಪೂರಕವಾದಂತಹ ಪಠ್ಯಕ್ರಮ ರೂಪಿಸಬೇಕಾಗಿದೆ. ಅಲ್ಲದೆ, ಸರ್ಕಾರಿ ಪದವಿ ಕಾಲೇಜಿನಲ್ಲಿ ಬೋಧನೆ ಮಾಡುತ್ತಿರುವ ಬೋಧಕರಿಗೆ ಪ್ರತ್ಯೇಕವಾಗಿ ಕೌಶಲ್ಯದ ಶಿಕ್ಷಣ ಕುರಿತು ತರಬೇತಿ ನೀಡುವ ಕೆಲಸ ಮಾಡಬೇಕಾಗಿತ್ತು.
ಈ ರೀತಿ ತರಬೇತಿ ನೀಡಿದರೆ ಅಂತಹ ಬೋಧಕರು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಅನುಕೂಲವಾಗುತ್ತದೆ. ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಇನ್ನೂ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಬಹುದಿತ್ತು. ಸರ್ಕಾರದಿಂದಲೇ ಉದ್ಯೋಗ ಮೇಳಗಳನ್ನು ಆಯೋಜಿಸಿ ಬಡ ಮಕ್ಕಳಿಗೆ ಉದ್ಯೋಗಾವಕಾಶ ಕಲ್ಪಿಸುವ ಸೌಲಭ್ಯ ಮಾಡಬೇಕು.
| ಜ್ಯೋತಿ ವಿಜಯ್ ಶಿಕ್ಷಣ ತಜ್ಞೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 3 =
Remember me
