ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಯಾಗಿ, ಆ ಮೂಲಕ ನಿರುದ್ಯೋಗ ನಿವಾರಣೆಯಾಗುವ ಸಾಧ್ಯತೆಗಳ ಆಶಾಭಾವನೆಯನ್ನು ಬಿ.ಎಸ್. ಯಡಿಯೂರಪ್ಪ ಅವರ ಬಜೆಟ್ ಮೂಡಿಸಿದೆ. ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಹೊಸ ನೀತಿ ಬರುವುದರಿಂದ ಕೈಗಾರಿಕೆಗಳಿಗೆ ಇನ್ನಷ್ಟು ನೆರವು ಸರ್ಕಾರದ ಕಡೆಯಿಂದ ಸಿಗುತ್ತದೆ.
ಮುಖ್ಯಮಂತ್ರಿ ಅವರ ದಾವೋಸ್ ಪ್ರವಾಸ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಹೂಡಿಕೆಯನ್ನು ಉತ್ತೇಜಿಸಲು ಭೂಮಿ ಖರೀದಿಗೆ ಇದ್ದ ತೊಡಕು ನಿವಾರಣೆಗೆ ಕಾಯ್ದೆ ತಿದ್ದುಪಡಿಯನ್ನು ಬಜೆಟ್​ನಲ್ಲಿ ಘೋಷಿಸಿದ್ದಾರೆ. ಹೆಚ್ಚಿನ ಬಂಡವಾಳ ಹೂಡಿಕೆಗೆ ಇದರಿಂದ ಅನುಕೂಲವಾಗುವುದರಲ್ಲಿ ಅನುಮಾನವಿಲ್ಲ. ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ಉತ್ಪನ್ನ ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ ಮಾಡಲಾಗುತ್ತಿದೆ.
ಶಿವಮೊಗ್ಗದಲ್ಲಿ ಹೆಲ್ತ್ ಅಂಡ್ ವೆಲ್​ನೆಸ್ ಕ್ಲಸ್ಟರ್ ಹಾಗೂ ಧಾರವಾಡದಲ್ಲಿ ಹೋಮ್ ಅಂಡ್ ಪರ್ಸನಲ್ ಕೇರ್ ಕನ್ಸ್ಯೂಮರ್ ಗೂಡ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ ಅಭಿವೃದ್ಧಿಯಾಗುತ್ತಿವೆ. ಆ 2 ಜಿಲ್ಲೆಗಳೇ ಅಲ್ಲದೇ ಸುತ್ತಮುತ್ತಲ ಜಿಲ್ಲೆಗಳ ಅಭಿವೃದ್ಧಿ ಹಾಗೂ ಆ ಭಾಗದಲ್ಲಿ ಹೂಡಿಕೆ ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ.
ಇಂದಿನ ದಿನಕ್ಕೆ ವಿದ್ಯುತ್ ವಾಹನಗಳನ್ನು ಹೆಚ್ಚಿಸುವ ಅಗತ್ಯವಿದೆ. ಅದನ್ನು ಮನಗಂಡು ಮುಖ್ಯಮಂತ್ರಿ ಅವರು ಈ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಕೈಗಾರಿಕೆಗಳ ಸ್ಥಾಪನೆಗೆ ಎರಡು ಮತ್ತು ಮೂರನೇ ಹಂತದ ನಗರ ಮತ್ತು ಪಟ್ಟಣಗಳನ್ನು ಗಮನದಲ್ಲಿಟ್ಟುಕೊಂಡಿದ್ದಾರೆ.
ರಾಮನಗರ ತಾಲೂಕಿನ ಹಾರೋಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹರಳೂರು-ಮುದ್ದೇನಹಳ್ಳಿ, ಶಿಗ್ಗಾಂವಿ, ಕಾರ್ಕಳ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರಗಳನ್ನು ಗುರುತಿಸಿರುವುದು ಯಡಿಯೂರಪ್ಪ ಅವರ ಅಭಿವೃದ್ಧಿಪರ ದೂರದೃಷ್ಟಿಗೆ ಉದಾಹರಣೆಯಾಗಿದೆ. ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳ ಸ್ಥಾಪನೆಗೆ ಹೊಸ ತಂತ್ರಜ್ಞಾನ, ತೆಂಗಿನನಾರು ಉತ್ಪನ್ನಗಳಿಗೆ ಮಾರುಕಟ್ಟೆ, ತೆಂಗು ಆಧಾರಿತ ಕೈಗಾರಿಕೆ ಸ್ಥಾಪನೆ ಮಾಡುವುದು, ಜವಳಿ ಪಾರ್ಕ್, ನೇಕಾರರ ನೆರವಿಗೂ ಕೆಲ ಯೋಜನೆ ಮಾಡಿರುವುದು, ಪ್ರಿಯದರ್ಶಿನಿ ಬ್ರಾ್ಯಂಡ್ ಒದಗಿಸುವುದು, ಹೊಸ ನಿಕ್ಷೇಪಗಳನ್ನು ಗುರುತಿಸುವುದು ಸ್ವಾಗತಾರ್ಹ ಪ್ರಯತ್ನಗಳಾಗಿವೆ.
ಹೊಸ ಕೈಗಾರಿಕಾ ನೀತಿಯಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲು ಹೂಡಿಕೆಗೆ ಹೆಚ್ಚಿನ ನೆರವಾಗಬೇಕಾಗುತ್ತದೆ. ಆ ಕೆಲಸವನ್ನು ಬಜೆಟ್​ನಲ್ಲಿ ಮಾಡಿದ್ದಾರೆ. ಹೂಡಿಕೆದಾರರು ಬರಬೇಕಾದರೆ ಅವರಿಗೆ ಸಕಾಲದಲ್ಲಿ ಎಲ್ಲ ಅನುಮತಿಗಳು ಸಿಗಬೇಕಾಗುತ್ತದೆ. ಅದಕ್ಕಾಗಿ ಸಕಾಲವನ್ನು ವಿಸ್ತರಿಸುವ ನಿರ್ಧಾರ ಸ್ವಾಗತಾರ್ಹ. ಒಟ್ಟಾರೆ ಕೈಗಾರಿಕೆ ಕ್ಷೇತ್ರದ ಬೆಳವಣಿಗೆಗೆ ಬಜೆಟ್ ಎಲ್ಲ ರೀತಿಯಲ್ಲಿಯೂ ನೆರವಾಗಿದೆ.
| ಕೆ. ರತ್ನಪ್ರಭಾ ಅಧ್ಯಕ್ಷರು, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 7 =
Remember me
