ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಮಂಡಿಸಿದ ಬಜೆಟ್​ನಲ್ಲಿ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ ಫಲಾನುಭವಿಗಳಿಗೆ ರಾಜ್ಯ ಸರ್ಕಾರ 4 ಸಾವಿರ ರೂ. ಹೆಚ್ಚುವರಿ ಹಣ ನೀಡಲು 2,600 ಕೋಟಿ ರೂ. ಮೀಸಲಿಟ್ಟಿರುವುದು ಉತ್ತಮ ಯೋಜನೆಯಾಗಿದೆ. ಅದರಿಂದ ರೈತರಿಗೆ ವಾರ್ಷಿಕ 10 ಸಾವಿರ ರೂ. ದೊರೆಯುವುದು ಖಚಿತವಾದಂತಾಗಿದೆ. ಉಳಿದಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ರಾಜ್ಯದ ಜನರ ಮೇಲೆ ಪರಿಣಾಮ ಬೀರಲಿದೆ. ಈಗಾಗಲೆ ಬಸ್ ಪ್ರಯಾಣ ದರ, ಹಾಲಿನ ದರ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಇದೀಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಮತ್ತಷ್ಟು ಹೊರೆ ಹೊರಬೇಕಾಗಲಿದೆ.
ರಾಜ್ಯದಲ್ಲಿ ಆರ್ಥಿಕ ಸುಭದ್ರ ಜಿಲ್ಲೆಗಳ ಸಂಖ್ಯೆ ಕಡಿಮೆಯಿದೆ. ಅದು ಬ್ಯಾಂಕ್ ಸಾಲ ಮತ್ತು ಠೇವಣಿಯಿಂದ ಅಳೆಯಬಹುದಾಗಿದೆ. 2016-17ರಲ್ಲಿ ರಾಜ್ಯದ ಬ್ಯಾಂಕ್​ಗಳು 6.15 ಲಕ್ಷ ಕೋಟಿ ರೂ. ಸಾಲ ನೀಡಿದ್ದವು. ಅದರಲ್ಲಿ ಬೆಂಗಳೂರಿನ ಪಾಲು 3.88 ಲಕ್ಷ ಕೋಟಿ ರೂ., ದಕ್ಷಿಣಕನ್ನಡ ಜಿಲ್ಲೆ 2.4 ಲಕ್ಷ ಕೋಟಿ ರೂ., ಬೆಳಗಾವಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ತಲಾ 1.8 ಲಕ್ಷ ಕೋಟಿ ರೂ. ಬಿಡುಗಡೆಯಾಗಿದೆ. ಅದನ್ನು ಗಮನಿಸಿದರೆ ಆ ಜಿಲ್ಲೆಗಳು ಸುಭದ್ರ ಸಶಕ್ತ ಜಿಲ್ಲೆಗಳೆಂದು ಗುರುತಿಸಬಹುದು. ಚಾಮರಾಜನಗರ, ಬೀದರ್, ಕೊಡಗು, ಯಾದಗಿರಿ, ಚಿಕ್ಕಬಳ್ಳಾಪುರ, ಗದಗ, ಕೊಪ್ಪಳ, ರಾಮನಗರ, ಕೋಲಾರ ಸೇರಿ 11 ಜಿಲ್ಲೆಗಳು ಆರ್ಥಿಕವಾಗಿ ದುರ್ಬಲವಾಗಿವೆ. ಅಲ್ಲಿನ ಬ್ಯಾಂಕ್​ಗಳು ನೀಡಿರುವ ಸಾಲದ ಮೊತ್ತ ಪ್ರತಿ ಜಿಲ್ಲೆಗೆ 2,361 ಕೋಟಿ ರೂ.ನಿಂದ 4,900 ಕೋಟಿ ರೂ. ಮಾತ್ರ.
ಅದೇ ರೀತಿ ಬ್ಯಾಂಕ್ ಠೇವಣಿಯನ್ನು ಗಮನಿಸಿದರೆ ರಾಜ್ಯದ ಒಟ್ಟು ಠೇವಣಿ ಪ್ರಮಾಣ 8.68 ಲಕ್ಷ ಕೋಟಿ ರೂ.ಗಳಾಗಿದ್ದರೆ, ಬೆಂಗಳೂರು ನಗರ ಜಿಲ್ಲೆಯದ್ದೇ 5.57 ಲಕ್ಷ ಕೋಟಿ ರೂ.ಗಳಾಗಿದೆ. ಉಳಿದಂತೆ ದಕ್ಷಿಣ ಕನ್ನಡ, ಮೈಸೂರು, ಉಡುಪಿ, ಧಾರವಾಡ ಜಿಲ್ಲೆಗಳು ಸಿಂಹಪಾಲನ್ನು ಹೊಂದಿವೆ. ಉಳಿದ 24 ಜಿಲ್ಲೆಗಳು 1.68 ಲಕ್ಷ ಕೋಟಿ ರೂ. ಠೇವಣಿಯನ್ನು ಹೊಂದಿವೆ. ಅದರಿಂದ ರಾಜ್ಯದ 24 ಜಿಲ್ಲೆಗಳು ಆರ್ಥಿಕವಾಗಿ ದುರ್ಬಲವಾಗಿದೆ ಎಂಬುದು ದೃಢವಾಗುತ್ತದೆ. ಹೀಗಿರುವಾಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಆ ಜಿಲ್ಲೆಗಳ ಜನರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಅದು ಜನರ ಆರ್ಥಿಕತೆ ಮೇಲೂ ಪರಿಣಾಮ ಬೀರಲಿದೆ.
| ವಿದ್ಯಾಶಂಕರ್, ಹಿರಿಯ ಪತ್ರಕರ್ತರು ಹಾಗೂ ಆರ್ಥಿಕ ತಜ್ಞ
ಆರ್ಥಿಕ ಸಂಕಷ್ಟದಲ್ಲೂ ಸಮತೋಲನ ಬಜೆಟ್ ಮಂಡನೆ ಆಗಿದೆ. ಕೃಷಿ ಮತ್ತು ನೀರಾವರಿ ಯೋಜನೆಗಳಿಗೆ ಪ್ರಾಮಾಣಿಕವಾಗಿ ಅನುದಾನ ನೀಡುವಲ್ಲಿ ಬಿಎಸ್​ವೈ ಸಫಲರಾಗಿದ್ದಾರೆ. ಮಕ್ಕಳ ಬಜೆಟ್ ಮಂಡಿಸಿ -ಠಿ;36,340 ಕೋಟಿ ಅನುದಾನ ನೀಡಿರುವುದು ಅಭಿನಂದನೀಯ.
| ಡಾ. ಎಂ.ಆರ್. ವೆಂಕಟೇಶ್ ಶ್ರೀ ತ್ಯಾಗರಾಜ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷ
ರಾಜ್ಯ ಆರ್ಥಿಕ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಮಂಡಿಸಿರುವ ಬಜೆಟ್ ರಾಜ್ಯದ ಅಭಿವೃದ್ಧಿಗೆ ಔಷಧದಂತೆ ಕೆಲಸ ಮಾಡಲಿದೆ. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ವೇಗ ನೀಡಲಿದ್ದು, ಪ್ರಾದೇಶಿಕ ಸಮತೋಲನಕ್ಕೆ ಸ್ಪಷ್ಟ ದಿಕ್ಸೂಚಿ ಇದಾಗಿದೆ.
ಡಾ. ಅಶ್ವತ್ಥನಾರಾಯಣ ಡಿಸಿಎಂ
ಜ್ಯೋತಿ ಸಂಜೀವಿನಿ ಯೋಜನೆ ಮಾರ್ಪಡಿಸಿ ನಗದುರಹಿತ ಚಿಕಿತ್ಸೆ ನೀಡುವುದಾಗಿ ಘೋಷಿಸಲಾಗಿದೆ. ಇದು ಉತ್ತಮ ಯೋಜನೆ. ಆದರೆ, ನಗದು ರಹಿತ ವ್ಯವಸ್ಥೆಯನ್ನು ಒಳರೋಗಿಯಾಗಿ ಪಡೆಯುವ ಎಲ್ಲ ಚಿಕಿತ್ಸೆಗೂ ವಿಸ್ತರಿಸಬೇಕು.
| ಪಿ.ಗುರುಸ್ವಾಮಿ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − fifteen =
Remember me
