| ಬಿ.ವಿ. ಗೋಪಾಲರೆಡ್ಡಿ, ಅಧ್ಯಕ್ಷ, ಎಫ್​ಕೆಸಿಸಿಐಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಈ ಸಾಲಿನ ಮುಂಗಡಪತ್ರವು ಇತ್ತೀಚಿನ ಕೆಲವು ವರ್ಷಗಳಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಎಂಎಸ್​ಎಂಇಗಳಿಗೆ ಆದ್ಯತೆ ನೀಡಿದೆ. ರಾಜ್ಯದಲ್ಲಿ ಕೈಗಾರಿಕೆ ವಲಯ ಬೆಳೆಯಲು, ಉದ್ಯೋಗಗಳ ಸೃಷ್ಟಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಯಾವುದೇ ತೆರಿಗೆಯನ್ನು ಹಾಕದಿರುವುದು ಕೈಗಾರಿಕಾ ವಲಯಕ್ಕೆ ಅನುಕೂಲವಾಗಿದೆ. ಇದು ಉತ್ತಮ ನಡೆ.
ಯುವಜನರ ಔದ್ಯೋಗಿಕ ಕೌಶಲ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿರುವುದು ಉದ್ಯಮ ವಲಯ ಎದುರಿಸುತ್ತಿರುವ ಬಹುದೊಡ್ಡ ಕೊರತೆಯನ್ನು ನಿವಾರಿಸುತ್ತದೆ ಎಂಬ ವಿಶ್ವಾಸವಿದೆ. ಬೆಂಗಳೂರಿನಲ್ಲಿ ಸೆಮಿ ಕಂಡಕ್ಟರ್ ವಲಯ ಅಭಿವೃದ್ಧಿಗೆ ಉತ್ತೇಜನ ನೀಡಲು ಟೆಕ್ನಾಲಜಿ ಇನೋವೇಷನ್ ಪಾರ್ಕ್ ಮಾಡುವುದು ನಿಜಕ್ಕೂ ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾಗುತ್ತದೆ. ಉದ್ಯಮ ಆರಂಭಿಸಲು ಯಾವ ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸುತ್ತಾರೋ ಅದೇ ಪೋರ್ಟಲ್​ನಲ್ಲಿ ಪರವಾನಗಿ ನೀಡುವುದು, ಕೆಜಿಎಫ್​ನ ಬಿಇಎಂಎಲ್ ಜಾಗದಲ್ಲಿ ಕೈಗಾರಿಕಾ ಟೌನ್​ಶಿಫ್ ಮೂಲಕ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ರೂಪಿಸುವುದು, ವಿಜಯಪುರದಲ್ಲಿ ಉತ್ಪಾದನಾ ಕ್ಲಸ್ಟರ್ ಸ್ಥಾಪನೆ, ದಕ್ಷಿಣ ಕನ್ನಡದಲ್ಲಿ ರಫ್ತು ಕ್ಲಸ್ಟರ್ ನಿರ್ಮಾಣ ಹಾಗೂ ಕೃಷಿ ಸಂಸ್ಕರಣಾ ಕೈಗಾರಿಕೆಗಳನ್ನು ಆರಂಭಿಸುವುದು, ಎರಡು ಎಕರೆಯ ತನಕ ಕೃಷಿ ಭೂಮಿ ಪರಿವರ್ತನೆಗೆ ಅವಕಾಶ ನೀಡಿರುವುದು, ಏರೋಸ್ಪೇಸ್​ಗೆ ಆದ್ಯತೆ ಕೊಟ್ಟಿರುವುದು ಹೀಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸ್ಪರ್ಧೆ ಎದುರಿಸಲು ರಾಜ್ಯದ ಉದ್ಯಮಗಳನ್ನು ಸಜ್ಜಗೊಳಿಸಲು ಮುಂದಾಗಿರುವುದು ಸ್ವಾಗತಾರ್ಹ ನಡೆಯಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕಾ ವಸಾಹತುಗಳನ್ನು ಹಂತಹಂತವಾಗಿ ನಿರ್ವಿುಸುವುದಾಗಿ ರಾಜ್ಯ ಸರ್ಕಾರ ಮುಂಗಡ ಪತ್ರದಲ್ಲಿ ಹೇಳಿರುವುದು ಉದ್ಯೋಗಗಳ ಸೃಷ್ಟಿಗೆ ಅನುಕೂಲ ಮಾಡಿಕೊಡುತ್ತದೆ. ಗುಡಿ ಕೈಗಾರಿಕೆಗಳನ್ನು ಸಹ ಮುಖ್ಯಮಂತ್ರಿ ಅವರು ಮರೆತಿಲ್ಲ, ಆಕಾರಣದಿಂದಲೇ ಕೈಮಗ್ಗಕ್ಕೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ. ಇದು ಕೂಡ ಸ್ವಾಗತಾರ್ಹ ನಡೆ.
ಪ್ರವಾಸೋದ್ಯಮಕ್ಕೂ ಮುಂಗಡಪತ್ರದಲ್ಲಿ ಉತ್ತಮ ನೆರವನ್ನು ನೀಡುವುದಾಗಿ ಪ್ರಕಟಿಸಿದಾರೆ. ಈ ಕ್ರಮದಿಂದಾಗಿ ಉದ್ಯಮ ವಲಯ ಬೆಳೆಯಲು ಅನುಕೂಲವಾಗಲಿದೆ. ಬೆಂಗಳೂರಿನಲ್ಲಿ ಮೆಟ್ರೋ ವಿಸ್ತರಣೆ ಮಾಡುವ ನಿರ್ಧಾರ, ರಿಂಗ್​ರಸ್ತೆ ನಿರ್ವಣಕ್ಕೆ ಹೆಜ್ಜೆ ಇಟ್ಟಿರುವುದು ಕೂಡ ಒಳ್ಳೆಯ ಕ್ರಮವಾಗಿದೆ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಆದ್ಯತೆ ನೀಡುವುದರಿಂದ ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ. ಉದ್ಯಮವಲಯಕ್ಕೆ ವಿದ್ಯುತ್ ಕಡಿತ ಮಾಡುವಂತೆ ಮಾಡಿಕೊಂಡಿದ್ದ ಮನವಿಗೆ ಸಿದ್ದರಾಮಯ್ಯ ಅವರು ಸ್ಪಂದಿಸಿಲ್ಲ. ಬಜೆಟ್ ಅಧಿವೇಶನ ನಡೆಯುವ ಸಂದರ್ಭದಲ್ಲಿಯೇ ಮತ್ತೊಮ್ಮೆ ಭೇಟಿ ಮಾಡಿ ಮನವಿ ಮಾಡುತ್ತೇವೆ. ಬಜೆಟ್ ಮೇಲೆ ಉತ್ತರ ನೀಡುವ ಸಂದರ್ಭದಲ್ಲಿ ಘೋಷಣೆ ಮಾಡುವಂತೆ ಒತ್ತಾಯ ಮಾಡುತ್ತೇವೆ.
ಇದು ಕೇವಲ ಎಂಟು ತಿಂಗಳ ಬಜೆಟ್ ಆಗಿದೆ. ಹಣಕಾಸು ಪರಿಸ್ಥಿತಿಯ ಇತಿಮಿತಿಯ ನಡುವೆಯೇ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ರಾಜ್ಯದಲ್ಲಿ ತೆರಿಗೆ ಸಂಗ್ರಹ ಉತ್ತಮವಾಗಿರುವುದರಿಂದ ಹೊರೆ ಇಲ್ಲದೇ ಬೆಳವಣಿಗೆ ಆಧಾರಿತ ಬಜೆಟ್ ರೂಪಿಸಲು ಸಾಧ್ಯವಾಗಿದೆ. ಉದ್ಯಮ ವಲಯಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಿದರೆ ಉದ್ಯೋಗದ ಅವಕಾಶಗಳು ಕೂಡ ಇನ್ನಷ್ಟು ಹೆಚ್ಚಾಗುತ್ತವೆ. ಸಿಎಂ ಅವರು ಆ ನಿಟ್ಟಿನಲ್ಲಿ ಗಮನ ಹರಿಸಲಿ.
‘ಮೆದುಳು ತಿನ್ನುವ ಅಮೀಬಾ’ ಹತ್ತನೇ ತರಗತಿ ವಿದ್ಯಾರ್ಥಿಯ ಜೀವ ತೆಗೆಯಿತು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 6 =
Remember me
