ಬೆಂಗಳೂರು:ಕಬ್ಬಿಣದ ಸಿಲಿಂಡರ್​ಗಳ ಸ್ಪೋಟದಿಂದ ಉಂಟಾಗುವ ಅನಾಹುತ ತಡೆಗಟ್ಟಲು ‘ಗೋ ಗ್ಯಾಸ್’ ಕಂಪನಿ ಎಲೈಟ್ ಕಾಂಪೋಸಿಟ್ ಸಂಯೋಜಿತ ತಂತ್ರಜ್ಞಾನದಿಂದ ಸ್ಫೋಟ ನಿರೋಧಕ ಸಿಲಿಂಡರ್ ಪರಿಚಯಿಸಿದೆ. ಜತೆಗೆ ಗ್ರಾಹಕರು ಸರಳವಾಗಿ ಹಾಗೂ ತ್ವರಿತವಾಗಿ ಗ್ಯಾಸ್ ಸಂಪರ್ಕ ಪಡೆಯಲು ಅವಕಾಶ ಕಲ್ಪಿಸಿದೆ. ಸಾಮಾನ್ಯ ಸಿಲಿಂಡರ್​ಗೆ ಹೋಲಿಸಿದರೆ ಗೋಗ್ಯಾಸ್ ಸಿಲಿಂಡರ್ ತೂಕದಲ್ಲಿ ಅರ್ಧದಷ್ಟು ಕಡಿಮೆ ಇದೆ. ಜತೆಗೆ ಹೆಚ್ಚು ಬಾಳಿಕೆ ಬರುತ್ತದೆ. ವೃದ್ಧರೂ ಕೂಡ ಸುಲಭವಾಗಿ ಇದನ್ನು ಸಾಗಿಸಬಹುದು. ಸಿಲಿಂಡರ್ ಪಾರದರ್ಶಕವಾಗಿರುವುದರಿಂದ ಎಷ್ಟು ಪ್ರಮಾಣದ ಅನಿಲ ಇದೆ ಎಂಬುದನ್ನು ತಿಳಿದುಕೊಳ್ಳಬಹುದು.
ಸುಲಭ ಸಂಪರ್ಕ:ಪ್ರತಿ ತಿಂಗಳು 1 ಕೋಟಿ ಜನ ವಿವಿಧ ಕಾರಣಗಳಿಗಾಗಿ ವಾಸಸ್ಥಳ ಬದಲಿಸುತ್ತಾರೆ. ಅವರೆಲ್ಲರಿಗೂ ಅನುಕೂಲವಾಗುವಂತೆ ಎಲೈಟ್ ಗೋಗ್ಯಾಸ್ ತ್ವರಿತ ಎಲ್​ಪಿಜಿ ಸಂಪರ್ಕಗಳನ್ನು ಸುಲಭವಾಗಿ ಒದಗಿಸುತ್ತದೆ. ವರ್ಗಾವಣೆ ಸಂದರ್ಭದಲ್ಲಿ ಇತರ ನಗರಗಳಲ್ಲಿಯೂ ಸುಲಭವಾಗಿ ಸಂಪರ್ಕ ಪಡೆಯಲು ಅವಕಾಶ ನೀಡುತ್ತಿದೆ. ನವ ವಿವಾಹಿತರಿಗೆ ಉಡುಗೊರೆಯಾಗಿಯೂ ಇದನ್ನು ಕೊಡಬಹುದಾಗಿದೆ.
22 ರಾಜ್ಯಗಳಲ್ಲಿ ಸೇವೆ:ದೇಶದ 22 ರಾಜ್ಯಗಳಲ್ಲಿ 1,200ಕ್ಕೂ ಹೆಚ್ಚು ವಿತರಕರು ಮತ್ತು ವ್ಯಾಪಾರಿಗಳು ಗ್ರಾಹಕರ ಸೇವೆಗೆ ಲಭ್ಯವಿದ್ದಾರೆ. ಸಿಲಿಂಡರ್ ಮರುಪೂರಣ ಮತ್ತು ಪೂರೈಕೆ ಮಾಡಲು 58 ಬಾಟ್ಲಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಂದು ರಾಜ್ಯದಲ್ಲಿನ ಸಂಪರ್ಕವನ್ನು ಮತ್ತೊಂದು ರಾಜ್ಯದಲ್ಲೂ ಪಡೆದುಕೊಳ್ಳುವ ಸೌಲಭ್ಯವಿದೆ. ಗೋಗ್ಯಾಸ್ ಖಾಸಗಿ ಎಲ್​ಪಿಜಿ ಕಂಪನಿಯಾಗಿ ರುವುದರಿಂದ, ಸರ್ಕಾರಿ ಕಂಪನಿಗಳಂತೆ ಸಬ್ಸಿಡಿ ಸಿಗುವುದಿಲ್ಲ.
4,499 ರೂ.ಗೆ ಗ್ಯಾಸ್ ಕಿಟ್ – 650 ರೂ. ಎಲ್ಪಿಜಿ ಶುಲ್ಕ
ಗ್ಯಾಸ್ ಸಂಪರ್ಕಕ್ಕೆ ಹತ್ತಿರದ ಗೋ ಗ್ಯಾಸ್ ವ್ಯಾಪಾರಿಗಳಿಗೆ ಗುರುತಿನ ಚೀಟಿ, ವಿಳಾಸದ ಮಾಹಿತಿ ಜತೆಗೆ 4,499 ರೂ. ಪಾವತಿಸಿದರೆ 10 ಕೆ.ಜಿ. ಸ್ಫೋಟ ನಿರೋಧಕ ಗ್ಯಾಸ್ ಸಿಲಿಂಡರ್, ಗ್ಲಾಸ್ ಟಾಪ್​ನ 3 ಬರ್ನರ್ ಗ್ಯಾಸ್ ಸ್ಟೌ, ರೆಗ್ಯುಲೇಟರ್, ಪೈಪುಗಳನ್ನು ನೀಡಲಾಗುತ್ತದೆ. ಜತೆಗೆ ಎಲ್​ಪಿಜಿ ಶುಲ್ಕವಾಗಿ ಹೆಚ್ಚುವರಿ 650 ರೂ. ಪಾವತಿಸುವುದು ಕಡ್ಡಾಯವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − seven =
Remember me
