ಬೆಂಗಳೂರು:ಅಪರಾಧ ಹಿನ್ನೆಲೆಯುಳ್ಳ ಪ್ರಿಯಕರನೊಂದಿಗೆ ಪರಾರಿಯಾದ ವಿವಾಹಿತೆಯೊಬ್ಬಳು ಪತಿಯನ್ನು ಜೈಲಿಗಟ್ಟಲು ಹೆಣೆದ ಬಲೆಯಲ್ಲಿ ತಾನೇ ಬಿದ್ದು ಪೇಚಿಗೆ ಸಿಲುಕಿದ್ದಾಳೆ.
ವೈಟ್​ಫೀಲ್ಡ್ ನಿವಾಸಿಯಾಗಿರುವ 32 ವರ್ಷದ ಕಾರು ಚಾಲಕನೊಬ್ಬ 26 ವರ್ಷದ ಯುವತಿಯನ್ನು 8 ವರ್ಷಗಳ ಹಿಂದೆ ವಿವಾಹವಾಗಿದ್ದ. ದಂಪತಿಗೆ 5 ವರ್ಷದ ಮಗುವಿದ್ದು, ಆರಂಭದಲ್ಲಿ ಅನ್ಯೋನ್ಯವಾಗಿದ್ದರು. 3 ದಿನಗಳ ಹಿಂದೆ ನಗರದ ಪರಿಹಾರ್ ಕೌಟುಂಬಿಕ ಸಲಹಾ ಕೇಂದ್ರಕ್ಕೆ ಚಾಲಕನ ಪತ್ನಿ ಕರೆ ಮಾಡಿ, ‘ನನಗೆ ಪತಿ ಹಿಂಸೆ ಕೊಡುತ್ತಿದ್ದಾನೆ. ನಾನು ಈ ಹಿಂದೆ ಚೀಟಿ ವ್ಯವಹಾರ ಮಾಡಿಕೊಂಡಿದ್ದೆ. ಅದನ್ನು ವಿರೋಧಿಸಿ ನನ್ನನ್ನು ಮನೆಯಿಂದ ಪತಿ ಹೊರಹಾಕಿದ್ದಾನೆ’ ಎಂದು ದೂರು ನೀಡಿದ್ದಳು. ಆಕೆಯನ್ನು ಸಮಾಧಾನಪಡಿಸಿದ ಪರಿಹಾರ್ ಕೇಂದ್ರದ ಹಿರಿಯ ಆಪ್ತ ಸಮಾಲೋಚಕಿ ಅಪರ್ಣಾ ಪೂರ್ಣೆಶ್, ಆಕೆಯ ಪತಿಯ ನಂಬರ್ ಪಡೆದು ವಿಚಾರಿಸಿದಾಗ ಮಹಿಳೆಯ ನಿಜ ಬಣ್ಣ ಬಯಲಾಗಿದೆ.
ಪ್ರಿಯಕರನೊಂದಿಗೆ ಸಂಸಾರ: ಕೆಲ ತಿಂಗಳ ಹಿಂದೆ ಇದೇ ಮಹಿಳೆ ಕುಟುಂಬದ ಸ್ನೇಹಿತರ ಜತೆ ಬೇರೆ ರಾಜ್ಯಕ್ಕೆ ಪ್ರವಾಸ ಹೋಗಿದ್ದಳು. ಇವರ ಜತೆ ಪ್ರವಾಸಕ್ಕೆ ಬಂದಿದ್ದ 27 ವರ್ಷದ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಪ್ರವಾಸ ಮುಗಿಸಿ ಬಂದ ಬಳಿಕ ಆತ ಮಹಿಳೆಗೆ ಪ್ರತಿದಿನ ಸಂದೇಶ ಕಳುಹಿಸುತ್ತಿದ್ದ. ಅದಕ್ಕೆ ಮಹಿಳೆಯೂ ಪ್ರತಿಕ್ರಿಯಿಸುತ್ತಿದ್ದಳು. ಕ್ರಮೇಣ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. 10 ದಿನದ ಹಿಂದೆ ಮನೆ ಬಿಟ್ಟು ತೆರಳಿದ್ದ ಮಹಿಳೆ, ಪ್ರಿಯಕರನ ಜತೆ ವಾಸಿಸುತ್ತಿದ್ದಳು. ಆಕೆ ನಾಪತ್ತೆಯಾಗಿರುವುದರಿಂದ ಆತಂಕಗೊಂಡ ಪತಿ ಹಾಗೂ ಮಹಿಳೆಯ ತವರು ಮನೆಯವರು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ಅತ್ತಿಬೆಲೆಯಲ್ಲಿ ಬೇರೆ ವ್ಯಕ್ತಿ ಜತೆ ಸಂಸಾರ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು. ಆಕೆಯನ್ನು ತವರು ಮನೆಯವರು ಮನೆಗೆ ಕರೆತಂದು ಬುದ್ಧಿವಾದ ಹೇಳಿದ್ದರು ಎಂದು ಅಪರ್ಣಾ ಪೂರ್ಣೆಶ್​ಗೆ ಪತಿ ವಿವರ ನೀಡಿದ್ದ.
ಗಂಡನ ವಿರುದ್ಧ ಕಥೆ ಕಟ್ಟಿದಳು
ಪತಿಯನ್ನು ಜೈಲಿಗಟ್ಟಬೇಕು ಎಂದು ಸಂಚು ರೂಪಿಸಿ ಪರಿಹಾರ್ ಕೇಂದ್ರಕ್ಕೆ ಕರೆ ಮಾಡಿ ಪತಿ ವಿರುದ್ಧ ಕಟ್ಟುಕತೆ ಕಟ್ಟಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ಹಿರಿಯ ಆಪ್ತ ಸಮಾಲೋಚಕಿ ಅಪರ್ಣಾ ಪೂರ್ಣೆಶ್ ತಿಳಿಸಿದ್ದಾರೆ. ಇದೀಗ ಪತಿಯೊಂದಿಗೆ ಸಂಸಾರ ನಡೆಸಲು ಆಕೆ ಒಪ್ಪಿದರೂ ಪತಿ ಸಮ್ಮತಿಸುತ್ತಿಲ್ಲ. ಪರಿಹಾರ್ ಕೇಂದ್ರದ ಸಿಬ್ಬಂದಿ ಪ್ರಕರಣ ಇತ್ಯರ್ಥಪಡಿಸಲು ಮುಂದಾಗಿದ್ದಾರೆ.
ಪಾಲಕರು ಬಲವಂತ ಮಾಡಿ ಮಕ್ಕಳ ಮದುವೆ ಮಾಡಿದರೆ ಕಾನೂನು ಏನು ಹೇಳುತ್ತದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 3 =
Remember me
