ಬೆಂಗಳೂರು:ಭಾವನಾತ್ಮಕ ವಿಷಯಗಳ ಮೇಲಾಟದಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಸಾಧನೆಗಳು ಪ್ರಾಮುಖ್ಯತೆ ಕಳೆದುಕೊಳ್ಳಲಿದೆ ಎಂದು ಅರಿತ ಬಿಜೆಪಿ, ಅಭಿವೃದ್ಧಿ ಹಾಗೂ ರಚನಾತ್ಮಕ ವಿಚಾರಗಳನ್ನು ಚರ್ಚೆಯ ಮುನ್ನೆಲೆಗೆ ತರಲು ಕಸರತ್ತು ನಡೆಸಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದ ನಂತರ ಸಾಧಿಸಿದ ಪ್ರಗತಿ, ಇಲಾಖಾವಾರು ಯೋಜನೆಗಳು ಅನುಷ್ಠಾನ ಮತ್ತು ಕೇಂದ್ರದ ನೆರವಿನ ವಿವರವುಳ್ಳ ‘ರಿಪೋರ್ಟ್ ಕಾರ್ಡ್’ ಜನರ ಮುಂದಿಡಲು ವರಿಷ್ಠರು ಸೂಚನೆ ನೀಡಿದ್ದಾರೆ. ಪಕ್ಷದ ಸಂಸ್ಥಾಪನಾ ದಿನ (ಏ.6)ದಿಂದ ಮಾಹಿತಿ ಅಭಿಯಾನ ಶುರುವಾಗಿದ್ದು, ಏ.20ರವರೆಗೆ ನಡೆಯಲಿದೆ. ರಾಜ್ಯ, ಜಿಲ್ಲಾ ಮತ್ತು ಮಂಡಲ ಮಟ್ಟದಲ್ಲಿ ಕಾರ್ಯಕರ್ತರ ಜತೆಗೆ ಜನ-ಸಾಮಾನ್ಯರಿಗೆ ಮಾಹಿತಿ ನೀಡಲಾಗುತ್ತದೆ. ಹೊಸಪೇಟೆಯಲ್ಲಿ ಏ.16 ಮತ್ತು 17ರಂದು ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ನಿಗದಿಯಾಗಿದ್ದು, ಆ ದಿನಗಳಂದು ಮಾತ್ರ ಪ್ರಚಾರ ಅಭಿಯಾನ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ. ರಾಜ್ಯಮಟ್ಟದಲ್ಲಿ ಆಯಾ ಸಚಿವರು ಇಲಾಖಾವಾರು ಸಾಧಿಸಿದ ಪ್ರಗತಿ ಹಾಗೂ ಕೇಂದ್ರ ನೀಡಿದ ನೆರವಿನ ಅಂಕಿ-ಅಂಶಗಳನ್ನು ವಿವರಿಸಲಾರಂಭಿಸಿದ್ದಾರೆ. ಜಿಲ್ಲಾ ಮತ್ತು ಮಂಡಲ ಮಟ್ಟದಲ್ಲಿ ಆಯಾ ಹಂತದ ಪದಾಧಿಕಾರಿಗಳು ಹೇಳಿಕೆ, ಮಾಧ್ಯಮಗೋಷ್ಠಿ ಮುಂತಾದವುಗಳ ಮೂಲಕ ಪ್ರಚಾರ ನಡೆಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ತಪ್ಪು ಸಂದೇಶದ ದಿಗಿಲು:ಭಾವನಾತ್ಮಕ ವಿಚಾರಗಳಿಗೆ ಹೆಚ್ಚು ಒತ್ತು ಕೊಟ್ಟಷ್ಟು, ಮತೀಯ ವಿವಾದಗಳು ಭುಗಿಲೆದ್ದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಸರ್ಕಾರಕ್ಕೆ ಎದುರಾದೀತು. ಶಾಂತಿ, ಸಾಮರಸ್ಯಕ್ಕೆ ಹೆಸರಾಗಿರುವ ರಾಜ್ಯದ ಬಗ್ಗೆ ತಪು್ಪ ಸಂದೇಶ ರವಾನೆಯಾಗಲಿದೆ ಎಂಬ ದಿಗಿಲು ಪಕ್ಷದ ರಾಜ್ಯ ಮುಂಚೂಣಿ ನಾಯಕರನ್ನು ಕಾಡಲಾರಂಭಿಸಿದೆ. ಹಿಜಾಬ್, ಆಜಾನ್, ಜಾತ್ರೆಗೆ ಮುಸ್ಲಿಂ ವ್ಯಾಪಾರಿಗಳ ನಿರ್ಬಂಧ, ಹಲಾಲ್ ಕಟ್, ಆಟೋ, ಬಾಡಿಗೆ ವಾಹನ, ಮಾವು ವ್ಯಾಪಾರ ನಿರ್ಬಂಧ ಸೇರಿ ಸರಣಿ ವಿವಾದಗಳು ಸರ್ಕಾರಕ್ಕೆ ತಲೆಬಿಸಿ ತಂದೊಡ್ಡಿದೆ. ಇದು ಹೀಗೆಯೇ ಮುಂದುವರಿದರೆ ಇಲ್ಲದ ಸಮಸ್ಯೆ ಮೈಮೇಲೆ ಎಳೆದುಕೊಳ್ಳಬೇಕಾದೀತು ಎಂದು ಪಕ್ಷದ ಹಿರಿಯ ಮುಖಂಡರು ಆತಂಕ ವ್ಯಕ್ತಪಡಿಸಿದ್ದು, ನಿಷ್ಠುರ ನಿಲುವು ತಳೆಯಬೇಕಾದ ಅಗತ್ಯವಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಾವಧಿಯಲ್ಲೂ ಕಹಿ ಘಟನೆಗಳು ಸಂಭವಿಸಿದ್ದರತ್ತ ಪಕ್ಷದ ಹಿರಿಯ ಮುಖಂಡರು ಗಮನಸೆಳೆದಿದ್ದಾರೆ. ಪ್ರಚೋದನಾತ್ಮಕ ಹೇಳಿಕೆಗಳು, ಕೋಮು ಸೌಹಾರ್ದತೆ ಕೆದಕುವ ಪ್ರಯತ್ನಗಳ ವಿರುದ್ಧ ಯಾವುದೇ ಬೇಧವಿಲ್ಲದೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕೆಂಬ ಒತ್ತಡ ಹೆಚ್ಚತೊಡಗಿದೆ ಎಂದು ಮೂಲಗಳು ಹೇಳಿವೆ.
ಪ್ರತ್ಯಸ್ತ್ರ:ಹಲವು ಸಂಘಟನೆಗಳು ಕೆದಕಿದ ವಿವಾದಗಳು, ಹೇಳಿಕೆಗಳನ್ನು ಬಳಸಿಕೊಂಡು ಬಿಜೆಪಿ ಹಣಿಯಲು ಪ್ರತಿಪಕ್ಷಗಳು ಮುಂದಾಗಿವೆ. ಅಭಿವೃದ್ಧಿಯಲ್ಲಿ ವಿಫಲವಾಗಿರುವ ಕಾರಣ ಕೋಮು ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿದ್ದು, ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಇಳಿದಿವೆ. ಪ್ರತಿಪಕ್ಷಗಳ ಈ ಅಸ್ತ್ರಕ್ಕೆ ಪ್ರತಿಯಾಗಿ ಬಿಜೆಪಿ ಜನರ ವಿಶ್ವಾಸ ಗಳಿಸುವ ಪ್ರತ್ಯಸ್ತ್ರ ಹೂಡಿದ್ದು, ರಾಜ್ಯ ನಾಯಕರ ನೇತೃತ್ವದ ಮೂರು ತಂಡಗಳು ವಿಭಾಗವಾರು ಪ್ರವಾಸಕ್ಕೆ ಸಜ್ಜಾಗಿವೆ.
ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಶಾಲು ಧರಿಸಿ ರಾಮನವಮಿ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ, ಇದು ಪರಿವರ್ತನೆಯ ಸಂಕೇತ. ಶ್ರೀರಾಮಚಂದ್ರನೇ ಈ ಜಗತ್ತನ್ನು ನಡೆಸ್ತಿರೋದು. ಪರಿವರ್ತನೆ ಆದ್ರೆ ಎಲ್ಲರಿಗೂ ಒಳ್ಳೆಯದು. ಕಾಂಗ್ರೆಸ್​ನವರು ಶ್ರೀರಾಮನಿಂದಲೇ ಪರಿವರ್ತನೆ ಆಗಿದ್ದಾರೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ತುಮಕೂರು:ತೈಲ ಬೆಲೆ ಇಳಿಕೆ ಮಾಡಲು ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ, ಕಳೆದ ಬಾರಿ 7 ರೂ. ತೆರಿಗೆ ಇಳಿಕೆ ಮಾಡಲಾಗಿದೆ, ಭವಿಷ್ಯದಲ್ಲಿ ದರ ಇಳಿಕೆ ಬಗ್ಗೆ ಚಿಂತಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳ ವಾಗುತ್ತಿದ್ದು, ಜನರಿಗೆ ಜೀವನ ಹೊರೆಯಾಗಬಾರದು ಎಂಬ ಉದ್ದೇಶದಿಂದ ಭವಿಷ್ಯದ ದಿನಗಳಲ್ಲಿ ದರ ಇಳಿಕೆಗೆ ಸರ್ಕಾರ ಕ್ರಮಕೊಳ್ಳಬಹುದು ಎಂದರು.
ಹೊಸಪೇಟೆ:ಬಜೆಟ್​ನಲ್ಲಿ ಘೊಷಿಸಿದ ಎಲ್ಲ ಯೋಜನೆಗಳಿಗೆ ಅನುದಾನ ನೀಡಿ, ರಿಪೋರ್ಟ್ ಕಾರ್ಡ್ ತೆಗೆದುಕೊಂಡು ನಿಮ್ಮ ಮುಂದೆ ಬರುವೆ. ನಮಗೆ ಮತ ನೀಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ಭಾನುವಾರ ಶ್ರೀ ಸೀತಾರಾಮ ಕಲ್ಯಾಣೋತ್ಸವ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್​ನವರ ಯಾವ ಭಾಗ್ಯಗಳೂ ಜನರಿಗೆ ಮುಟ್ಟಲಿಲ್ಲ. ಇದೊಂದು ದೌರ್ಭಾಗ್ಯ. ಅದಕ್ಕಾಗಿ ಮತದಾರರು 2018ರಲ್ಲಿ ಅವರನ್ನು ಮನೆಗೆ ಕಳುಹಿಸಿದರು ಎಂದರು.
ರಾಜಕೀಯ ಜೀವನ ಪುನರಾರಂಭ:ರಾಜಕೀಯ ಜೀವನ ಮತ್ತೊಮ್ಮೆ ಆರಂಭಿಸುವುದಾಗಿ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಘೊಷಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗಿ, 150 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಗೆಲ್ಲುವಂತೆ ಮಾಡಲಾಗುವುದು. ಇದಕ್ಕಾಗಿ ಮರಳಿ ರಾಜಕೀಯಕ್ಕೆ ಬರುವೆ ಎಂದರು. ‘ಜನಾರ್ದನ ರೆಡ್ಡಿ ಮರಳಿ ರಾಜಕಾರಣಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ, ಅವರನ್ನು ಮತ್ತೆ ಬಿಜೆಪಿಯಲ್ಲಿ ಸಕ್ರಿಯಗೊಳಿಸುವ ಸಂಬಂಧ ಈವರೆಗೆ ಯಾವುದೇ ಚಿಂತನೆ ನಡೆದಿಲ್ಲ’ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಬೇಸಿಗೆಯಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿದ್ರೆ ಬ್ಲಾಸ್ಟ್​ ಆಗುತ್ತಾ?

ಸ್ವಾಮೀಜಿ ಕಾರು ಅಪಘಾತ, ಚಾಲಕ ಸ್ಥಳದಲ್ಲೇ ಸಾವು; ಶ್ರೀಗಳು ಆಸ್ಪತ್ರೆಗೆ ದಾಖಲು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 7 =
Remember me
