ಬೆಂಗಳೂರು:ಮಹತ್ವಾಕಾಂಕ್ಷಿ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಎಕ್ಸ್‌ಪ್ರೆಸ್ ಕಾರಿಡಾರ್ ಹೆದ್ದಾರಿ ನಿರ್ಮಾಣಕ್ಕೆ ಅಡ್ಡಿಪಡಿಸಿರುವ ಭೂಮಾಲೀಕರಿಗೆ ತಿಳಿಹೇಳಿ, ತೆರವುಗೊಳಿಸಲು ಪೊಲೀಸ್ ಅಧಿಕಾರಿಗೆ ನಗರಾಭಿವೃದ್ಧಿ ಖಾತೆ ಹೊಂದಿರುವ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಸೂಚಿಸಿದರು.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿ ಪ್ರಗತಿ ಪರಿಶೀಲನೆ ವೇಳೆ ಕೋಲಾರ ಜಿಲ್ಲೆಯಲ್ಲಿ ಹೆದ್ದಾರಿ ವ್ಯಾಪ್ತಿಯಲ್ಲಿ 56 ಕಿ.ಮೀ. ಹಾದು ಹೋಗಲಿದೆ. ಮೂರು ಸ್ಥಳಗಳಲ್ಲಿ ಕಾಮಗಾರಿ ವಿಳಂಬವಾಗಿರುವುದನ್ನು ಸೋಮವಾರ ಗಮನಿಸಿದರು.
ಸ್ವಾಧೀನಕ್ಕೆ ಜಮೀನಿನ ಮಾಲೀಕರು ಅಡ್ಡಿಪಡಿಸುತ್ತಿರುವ ಕಾರಣ ಕಾಮಗಾರಿ ವಿಳಂಬವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಮಾಹಿತಿ ನೀಡಿದರು. ಸಭೆಯಲ್ಲೇ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬೈರತಿ ಸುರೇಶ್ ಕರೆ ಮಾಡಿ ಹೆದ್ದಾರಿ ನಿರ್ಮಾಣಕ್ಕೆ ಜಮೀನಿನ ಮಾಲೀಕರು ಅಡ್ಡಿಪಡಿಸುತ್ತಿದ್ದಾರೆ. ಅಂತಹ ಭೂಮಾಲೀಕರಿಗೆ ಅರಿವು ಮೂಡಿಸಿ ತೆರವುಗೊಳಿಸಲು ತಿಳಿಸಿದರು.
ಪೊಲೀಸ್ ಇಲಾಖೆ ನೆರವು ಪಡೆದು ಅಡಚಣೆ ನಿವಾರಿಸಿಕೊಳ್ಳಬೇಕು. ಕಾಮಗಾರಿ ವೇಗ ಹೆಚ್ಚಿಸಲು ಆದ್ಯತೆ ನೀಡಿ, ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಯೋಜನಾ ನಿರ್ದೇಶಕರಿಗೆ ಸಲಹೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ 75ರ ನಿರ್ವಹಣೆ ಕಾಮಗಾರಿ ಸಮರ್ಪಕವಾಗಿ ನಿರ್ವಹಿಸಿ, ಲೋಪದೋಷಗಳು ಕಂಡುಬಂದರೆ ಕೂಡಲೇ ಸರಿಪಡಿಸಿ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಬೈರತಿ ಸುರೇಶ್ ಸೂಚಿಸಿದರು.
– ಬೆಂಗಳೂರು-ಚೆನ್ನೈ ಎಕ್ಸೆಪ್ರೆಸ್ ಕಾರಿಡಾರ್ ಹೆದ್ದಾರಿಯು ಕರ್ನಾಟಕ ವ್ಯಾಪ್ತಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕೊಳತ್ತೂರಿನಿಂದ ಪ್ರಾರಂಭ– ಒಟ್ಟಾರೆ 285 ಕಿ.ಮೀ. ಉದ್ದದ ಹೆದ್ದಾರಿ. ಕರ್ನಾಟಕ- 77.23 ಕಿ.ಮೀ., ಆಂಧ್ರಪ್ರದೇಶ- 91 ಕಿ.ಮೀ. ಹಾಗೂ ತಮಿಳುನಾಡು ವ್ಯಾಪ್ತಿಯಲ್ಲಿ 116.60 ಕಿ.ಮೀ. ಒಳಗೊಂಡಿದೆ.– ಯೋಜನಾ ಅಂದಾಜು ವೆಚ್ಚ 40 ಸಾವಿರ ಕೋಟಿ ರೂ.,ಗಳು. ಕೇಂದ್ರ ಸರ್ಕಾರದ ಪಾಲು ಶೇ.40. ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ನಿರ್ಮಾಣ.– ಕೋಲಾರ ಜಿಲ್ಲೆಯ ಮಾಲೂರು, ಬಂಗಾರಪೇಟೆ, ಕೆಜಿಎ್ ಹಾಗೂ ಬೇತಮಂಗಲ ಮೂಲಕ ಈ ಹೆದ್ದಾರಿ ಸಾಗಲಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eight − six =
Remember me
