ಪರಶುರಾಮ ಭಾಸಗಿ ವಿಜಯಪುರವಸತಿರಹಿತ ಕುಟುಂಬಗಳಿಗೆ ಸರ್ಕಾರದ ವಿವಿಧ ಯೋಜನೆ ಗಳಡಿ ಮನೆ ಹಾಕಿಸಿಕೊಡುವುದಾಗಿ ಬಡವರಿಂದ ಹಣ ಎತ್ತುತ್ತಿರುವ ಪ್ರಕರಣಗಳು ಗ್ರಾಮೀಣ ಭಾಗಗಳಲ್ಲಿ ಸದ್ದು ಮಾಡುತ್ತಿವೆ. ಸರ್ಕಾರದಿಂದ ಹಂಚಿಕೆಯಾಗುವ ಮನೆಗಳನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಮನೆ ಹಂಚಿಕೆ ಮಾಡುವುದಾಗಿ ನಂಬಿಸಲಾಗುತ್ತಿದ್ದು, ಮುಂಚಿತವಾಗಿ ಹಣ ಕೂಡ ಪಡೆಯಲಾಗುತ್ತಿದೆ. ಕೆಲವರು ದಲ್ಲಾಳಿಗಳಿಗೆ ಹಣ ಕೊಟ್ಟು ಮುಂದೇನು? ಎಂಬ ಸಂದಿಗ್ಧತೆಯಲ್ಲಿದ್ದರೆ ಇನ್ನೂ ಕೆಲವರು ಅಧಿಕಾರಿಗಳು, ರಾಜಕಾರಣಿಗಳನ್ನು ಸಂರ್ಪಸಿ ‘ನಿಜಕ್ಕೂ ಮನೆ ಬರುತ್ತವಾ? ಬರದಿದ್ದರೆ ಹೇಗೆ? ನಮ್ಮ ರೊಕ್ಕಕ್ಕೆ ಗ್ಯಾರಂಟಿ ಏನು?’ ಎಂಬಿತ್ಯಾದಿ ಚರ್ಚೆಯಲ್ಲಿ ತೊಡಗಿದ್ದಾರೆ.ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ 18,92,756 ವಸತಿರಹಿತರು ಹಾಗೂ 7,13, 950 ನಿವೇಶನರಹಿತರಿದ್ದಾರೆ. ಕಳೆದ 2020-21 ರಿಂದ 2022-23ರವರೆಗೆ ಹಂಚಿಕೆ ಮಾಡಲಾದ 6,35,412 ಮನೆಗಳ ಪೈಕಿ 4,07, 923 ಮನೆಗಳಿಗೆ ಮಂಜೂರಾತಿ ನೀಡಲಾಗಿದೆ. ಈ ಹಿಂದಿನ ಶ್ರೇಣಿಯಲ್ಲಿ ಪ್ರಗತಿಯಲ್ಲಿದ್ದ ಮನೆಗಳು ಒಳಗೊಂಡಂತೆ 2023-24ನೇ ವರ್ಷದಲ್ಲಿ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ ಹಮ್ಮಿಕೊಳ್ಳಲಾಗಿದೆ. 2023 ನ.28ಕ್ಕೆ ಒಟ್ಟು 1,12,891 ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈಗಲೋ ಆಗಲೋ ಮನೆಗಳಿಗೆ ಮಂಜೂರಾತಿ ಸಿಗಲಿದೆ ಎಂಬ ಲೆಕ್ಕಾಚಾರ ಇಟ್ಟುಕೊಂಡು ಗ್ರಾಪಂ ಸದಸ್ಯರು, ಅಧ್ಯಕ್ಷರು ಹಣ ಸಂಗ್ರಹಿಸುತ್ತಿದ್ದಾರೆ.
ಶಾಸಕರಿಗೆ ತಲೆನೋವು: ಶಾಸಕರ ಲೆಟರ್ ಸಿಕ್ಕರೆ ಮನೆಗಳನ್ನು ಹಾಕಿಸಿಕೊಂಡು ಬರುವುದಾಗಿ ದಲ್ಲಾಳಿಗಳು ಹೇಳುತ್ತಿರುವ ಕಾರಣ ಗ್ರಾಪಂ ಸದಸ್ಯರು ಹಾಗೂ ಅಧ್ಯಕ್ಷ-ಉಪಾಧ್ಯಕ್ಷರು ತಮ್ಮ ತಮ್ಮ ಶಾಸಕರಿಗೆ ದುಂಬಾಲು ಬೀಳುತ್ತಿದ್ದಾರೆ. ಎಷ್ಟೇ ಸಮಜಾಯಿಷಿ ನೀಡಿದರೂ ಶಾಸಕರಿಗೂ ಇದು ತಲೆನೋವಾಗಿದೆ. ಶಾಸಕರ ಪತ್ರ ಪಡೆದು ದಲ್ಲಾಳಿಗಳ ಮೂಲಕ ಬೆಂಗಳೂರಿಗೆ ತೆರಳಿ ನಿಗಮದಿಂದಲೇ ಮನೆಗಳನ್ನು ಹಾಕಿಸಿಕೊಂಡು ಬರುವುದಾಗಿ ಸ್ಥಳೀಯ ಜನಪ್ರತಿನಿಧಿಗಳು ಜನರನ್ನು ನಂಬಿಸುತ್ತಿದ್ದಾರೆ. ಈ ಹಿಂದೆ ಅದೇ ರೀತಿ ಕೆಲವು ಮನೆಗಳನ್ನು ಹೆಚ್ಚುವರಿಯಾಗಿ ಹಾಕಿಕೊಂಡು ಬಂದಿರುವುದಾಗಿ ಕೆಲವರು ಉದಾಹರಣೆಸಹಿತ ಮನದಟ್ಟು ಮಾಡುತ್ತಿದ್ದಾರೆ.
ಹೇಗೆ ನಡೆಯುತ್ತಿದೆ ವ್ಯವಹಾರ?: ಪ್ರತಿಯೊಬ್ಬ ಫಲಾನುಭವಿಯಿಂದ 20-25 ಸಾವಿರ ರೂ. ಪಡೆದು ಹೆಸರು ಬರೆದುಕೊಳ್ಳಲಾಗುತ್ತಿದೆ. ಕೆಲವರು ಮುಂಗಡ ಅರ್ಧ ಹಣ ಕೊಟ್ಟರೆ ಇನ್ನೂ ಕೆಲವರು ಮೊದಲು ಮನೆ ಮಾಡಿಸಿಕೊಂಡು ಬನ್ನಿ ಕೇಳಿದ್ದಕ್ಕಿಂತಲೂ ಹೆಚ್ಚಿನ ಹಣ ನೀಡುವುದಾಗಿ ಹೇಳುತ್ತಿದ್ದಾರೆ. ಹೀಗಾಗಿ ಕೆಲವು ಸದಸ್ಯರು ಹಾಗೂ ದಲ್ಲಾಳಿಗಳು ತಾವೇ ದೊಡ್ಡ ಮೊತ್ತ ಸಂಗ್ರಹಿಸಿ ಮನೆ ಮಂಜೂರು ಮಾಡಿಸಿದ ಬಳಿಕ ಫಲಾನುಭವಿಗಳಿಂದ ಹಣ ಪಡೆಯುವ ಯೋಚನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಗ್ರಾಪಂಗೆ ಮಂಜೂರಾದ ಮನೆಗಳು ನೇರವಾಗಿ ಫಲಾನುಭವಿಗಳಿಗೆ ಹಂಚಿಕೆಯಾಗುವುದಿಲ್ಲ. ಬದಲಾಗಿ, ಗ್ರಾಮಸಭೆಯಲ್ಲಿ ಆಯ್ಕೆ ಮಾಡಬೇಕಾಗುತ್ತದೆ. ಈ ಬಗ್ಗೆಯೂ ರಂಗೋಲಿ ಕೆಳಗೆ ನುಸುಳುವ ಯೋಜನೆ ರೂಪಿಸಿರುವ ದಲ್ಲಾಳಿಗಳು ನಿಗದಿತ ಗುರಿಗಿಂತ ಹೆಚ್ಚಿಗೆ ಮಂಜೂರಾಗುವ ಮನೆಗಳು ತಾವು ತಂದಿದ್ದು ಆಗಿರುತ್ತವೆ. ಅವುಗಳನ್ನು ಗ್ರಾಮ ಸಭೆಯಲ್ಲಿಯೇ ದುಡ್ಡು ಕೊಟ್ಟವರಿಗೆ ಹಂಚಿಕೆ ಮಾಡುವ ಬಗ್ಗೆ ಮುಂಚಿತವಾಗಿಯೇ ಮಾತುಕತೆ, ಕರಾರು-ಒಪ್ಪಂದಗಳಿಗೆ ಇಳಿದಿದ್ದಾರೆ. ಹಾಗೊಂದು ವೇಳೆ ಹಣ ಕೊಡದೇ ಹೋದರೆ ಮನೆ ಕೇಳುವಂತಿಲ್ಲ, ಮನೆ ಬರದೆ ಹೋದರೆ ಮೋಸ ತಪ್ಪಿದ್ದಲ್ಲ. ಹೀಗಾಗಿ ಸಂದಿಗ್ಧತೆಯಲ್ಲಿ ಬಡವರಿದ್ದರೆ ದಲ್ಲಾಳಿಗಳು ಎದೆ ಮೇಲೆ ನಿಂತು ಹಣ ಕೇಳುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿ ಇಂಥ ಹಾವಳಿ ಹೆಚ್ಚಾಗುತ್ತಿದ್ದು, ಸಾಕಷ್ಟು ಜನ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ಕೆಲವು ಕಡೆ ಹಾಲಿ-ಮಾಜಿ ಶಾಸಕರ ಪತ್ರ ತೋರಿಸಿ ಹಣ ಪಡೆಯುತ್ತಿರುವ ದೂರು ಬಂದಿವೆ. ಜನರು ಮೋಸಕ್ಕೆ ಬಲಿಯಾಗಬಾರದು. ಶಾಸಕರ ಗಮನಕ್ಕೆ ಬಾರದೆ ಬೆಂಗಳೂರಿನಿಂದ ಹೇಗೆ ಮನೆ ಹಂಚಿಕೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಸಂಬಂಧ ಪಟ್ಟವರೊಂದಿಗೆ ರ್ಚಚಿಸಲಾಗುವುದು.
| ಸುನೀಲಗೌಡ ಪಾಟೀಲ ವಿಪ ಸದಸ್ಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
