ಬೆಂಗಳೂರು:ಅನೈತಿಕ ಸಂಬಂಧ (Extra marital affairs)ವನ್ನು ಸಾಬೀತು ಮಾಡಲು ಮೂರನೇ ವ್ಯಕ್ತಿಯ ಮಾಹಿತಿ (Third party information) ಯನ್ನು ಪಡೆಯುವಂತಿಲ್ಲ ಎಂದು ಹೈಕೋರ್ಟ್ (Harnataka high court)​ ಆದೇಶ ಹೊರಡಿಸಿದೆ. ಈ ಹಿಂದೆ ಕೌಟುಂಬಿಕ ನ್ಯಾಯಾಲಯ (Family Court) ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿ ಹೈಕೋರ್ಟ್ ಹೊಸ ತೀರ್ಪು ಪ್ರಕಟಿಸಿದೆ.
ಘಟನೆ ಹಿನ್ನೆಲೆ ಏನು?ಪತ್ನಿಯ ಮೇಲೆ ಅನೈತಿಕ ಸಂಬಂಧ ಶಂಕಿಸಿ ವ್ಯಕ್ತಿಯೊರ್ವ ಕೌಟುಂಬಿಕ ನ್ಯಾಯಾಲಯದಲ್ಲಿ 2018ರಲ್ಲಿ ದಾವೆ ಹೂಡಿದ್ದ. ಪತ್ನಿಯ ಜೊತೆ ಸಂಪರ್ಕದಲ್ಲಿರುವ ಮೂರನೇ ವ್ಯಕ್ತಿಯ ಮೊಬೈಲ್ ಟವರ್ ಡಂಪ್ ಮತ್ತು ಕರೆಗಳ ಮಾಹಿತಿ ತೆಗೆದುಕೊಡಲು ಮೊಬೈಲ್ ಕಂಪನಿ (Mobile Company)ಗೆ ನಿರ್ದೇಶಿಸುವಂತೆ ಅರ್ಜಿ ದಾಖಲಿಸಿದ್ದ. ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ 3ನೇ ವ್ಯಕ್ತಿಯ ಮಾಹಿತಿ ನೀಡುವಂತೆ 2019ರಲ್ಲಿ ಮೊಬೈಲ್ ಕಂಪನಿಗೆ ಸೂಚಿಸಿತ್ತು.
ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೂರನೇ ವ್ಯಕ್ತಿ ಹೈಕೋರ್ಟ್ ಮೊರೆ ಹೋಗಿದ್ದ. ಈ ತೀರ್ಪಿನಿಂದ ನನ್ನ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದ. ವಿಚಾರಣೆ ನಡೆಸಿದ ಹೈಕೋರ್ಟ್​ ಅನೈತಿಕ ಸಂಬಂಧ ಸಾಬೀತು ಮಾಡಲು 3ನೇ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆಯುಂಟು ಮಾಡುವುದು ಸರಿಯಲ್ಲ ಎಂದು ಆದೇಶ ಹೊರಡಿಸಿದೆ.
ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದು ಪಡಿಸಿದ ಹೈಕೋರ್ಟ್, ಈ ರೀತಿ ಮಾಡಿದರೆ ವ್ಯಕ್ತಿಯ ಮೂಲಭೂತ ಹಕ್ಕು ಕಸಿದಂತಾಗುತ್ತದೆ. ಅಕ್ರಮ ಸಂಬಂಧ ಸಾಬೀತಿಗಾಗಿ ಮೂರನೇ ವ್ಯಕ್ತಿಯ ಖಾಸಗಿ ಮಾಹಿತಿ ತೆಗೆಯಕೂಡದೆಂದು ಆದೇಶಿಸಿದೆ.(ದಿಗ್ವಿಜಯ ನ್ಯೂಸ್​)
ರಾಜಧಾನಿಯಲ್ಲಿ ನಕಲಿ ವೈದ್ಯನ ಅವಾಂತರ: ಜ್ವರಕ್ಕೆ ಇಂಜೆಕ್ಷನ್ ಪಡೆದ ಯುವತಿಗೆ ನಿತ್ಯವು ನರಕಯಾತನೆ

ಅಶ್ಲೀಲ ವಿಡಿಯೋ ತೋರಿಸಿ, ಅಂಗಾಂಗ ಮುಟ್ಟಿ ದೌರ್ಜನ್ಯ: ಮಂಡ್ಯದಲ್ಲಿ ಮುಖ್ಯಶಿಕ್ಷಕನ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿನಿಯರು

VIDEO| ಆಸೆಯಿಂದ ವಧುವಿನ ಕೆನ್ನೆಗೆ ಚುಂಬಿಸಲು ಹೋದ ವರನಿಗೆ ವೇದಿಕೆಯಲ್ಲೇ ಕಾದಿತ್ತು ಭಾರಿ ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − ten =
Remember me
