ಹತ್ತು ವರ್ಷಗಳ ನಂತರ ಮತ್ತೆ ರಾಜಧಾನಿ ಬೆಂಗಳೂರು ಬಾಂಬ್ ಸ್ಪೋಟಕ್ಕೆ ಬೆಚ್ಚಿಬಿದ್ದಿದೆ. ಶುಕ್ರವಾರ ಮಧ್ಯಾಹ್ನ ವೈಟ್​ಫೀಲ್ಡ್ ಸಮೀಪದ ಕುಂದಲಹಳ್ಳಿಯಲ್ಲಿರುವ ‘ದಿ ರಾಮೇಶ್ವರಂ ಕೆಫೆ’ಯಲ್ಲಿ ಬಾಂಬ್ ಸಿಡಿದಿದ್ದು, ಹತ್ತು ಜನರು ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ವಿಧಾನಸೌಧದಲ್ಲಿ ಇತ್ತೀಚೆಗಷ್ಟೇ ಪಾಕಿಸ್ತಾನ ಪರ ಘೊಷಣೆ ಕೂಗಿದರೆನ್ನಲಾದ ಆರೋಪ ತನಿಖಾ ಹಂತದಲ್ಲಿರುವಾಗಲೇ, ಜನನಿಬಿಡ ಹೊಟೇಲೊಂದರಲ್ಲಿ ಸುಧಾರಿತ ಸ್ಪೋಟಕ ಉಪಕರಣ (ಐಇಡಿ) ಬಳಸಿ ಸ್ಪೋಟಿಸಿರುವ ಘಟನೆ ಖಂಡನೀಯ. ಆಡಳಿತ ಯಂತ್ರ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಇಂತಹ ಘಟನೆಗಳು ನಡೆಯುತ್ತಿವೆ ಎಂದರೆ ವಿಧ್ವಂಸಕಾರಿ ಶಕ್ತಿಗಳು ಇನ್ನೂ ಸಕ್ರಿಯವಾಗಿವೆ, ದುಷ್ಕೃತ್ಯಕ್ಕೆ ಹವಣಿಸುತ್ತಿವೆ ಎಂಬುದು ಇದರ ಅರ್ಥ. 2014ರ ಡಿಸೆಂಬರ್ 28ರಂದು ಚರ್ಚ್ ಸ್ಟ್ರೀಟ್​ನಲ್ಲಿ ಉಗ್ರರು ಇದೇ ಮಾದರಿಯ ಕೃತ್ಯ ಎಸಗಿದ್ದರು.
ಕುಂದಲಹಳ್ಳಿಯ ಸ್ಪೋಟದ ಸ್ಥಳದಲ್ಲಿ ಬ್ಯಾಟರಿ, ನಟ್-ಬೋಲ್ಟ್, ಗಾಜು, ಕಬ್ಬಿಣದ ಪುಡಿ ಮುಂತಾದ ವಸ್ತುಗಳು ಪತ್ತೆಯಾಗಿವೆ. ಇದಲ್ಲದೆ, ಟೈಮರ್ ಸಹ ಸಿಕ್ಕಿದ್ದು, ಇದೊಂದು ಸುಧಾರಿತ ಸ್ಪೋಟಕ ಉಪಕರಣ ಬಳಸಿ ಸಿಡಿಸಿದ ಬಾಂಬ್ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಘಟನೆಯಿಂದ ಸ್ವಾಭಾವಿಕವಾಗಿಯೇ ಜನರಲ್ಲಿ ಆತಂಕ ಮನೆಮಾಡಿದೆ. ‘ಸ್ಪೋಟ ಪ್ರಕರಣದ ಕುರಿತು ಪೊಲೀಸರು ಸ್ಥಳವನ್ನು ಪರಿಶೀಲಿಸಿ ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಸ್ಪೋಟಕ ಭಾರಿ ಪ್ರಮಾಣದಲ್ಲಿ ನಡೆದಿಲ್ಲವಾದರೂ ಹಲವರಿಗೆ ಗಾಯಗಳಾಗಿವೆ. ಯಾರೇ ಈ ಕೃತ್ಯವೆಸಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳು ಪುನರಾರಂಭವಾಗಿರುವುದು ಗಂಭೀರ ವಿಷಯ. ಹಾಗಾಗಿ, ಆಂತರಿಕ ಭದ್ರತೆಯ ವಿಷಯವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು. ಇಂಥ ಸೂಕ್ಷ್ಮ ವಿಷಯವನ್ನಾದರೂ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಬಳಸಿಕೊಳ್ಳದೆ, ಜನರ ಸುರಕ್ಷತೆಯತ್ತ ಗಮನ ನೀಡಬೇಕು. ಮುಂಬರುವ ದಿನಗಳಲ್ಲಿ ಚುನಾವಣೆ ನಡೆಯಲಿದ್ದು, ಗ್ರಾಮೀಣ ಭಾಗಗಳಲ್ಲಿ ಜಾತ್ರೆಗಳು ನಡೆಯಲಿವೆ. ಆದ್ದರಿಂದ ಇನ್ನಷ್ಟು ಕಟ್ಟೆಚ್ಚರ ವಹಿಸುವ ಅಗತ್ಯವಂತೂ ಇದೆ. ಮುಖ್ಯವಾಗಿ, ಭಯೋತ್ಪಾದನೆ ಬಗ್ಗೆ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಅನುಸರಿಸುವ, ಉಗ್ರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಶಕ್ತಿಗಳನ್ನು ಸದೆಬಡಿಯುವ ಅವಶ್ಯಕತೆ ಇದೆ. ಬಾಂಬ್ ಸ್ಫೋಟ ಘಟನೆಯ ತನಿಖೆಯಲ್ಲಿ ರಾಜಕೀಯ ಹಸ್ತಕ್ಷೇಪ ಇರಕೂಡದು. ತಪ್ಪಿತಸ್ಥರು ಯಾರೇ ಆಗಿದ್ದರೂ; ಅವರ ವಿರುದ್ಧ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂಥ ಕೃತ್ಯಗಳು ಮರುಕಳಿಸದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ, ಭದ್ರತಾ ವ್ಯವಸ್ಥೆ, ಗುಪ್ತಚರ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆಯೂ ಗಮನ ನೀಡಬೇಕು.
ರೈಲ್ವೆ ನಿಲ್ದಾಣ, ಬಸ್ ನಿಲ್ದಾಣದಂತಹ ಸ್ಥಳಗಳಲ್ಲಿ ಮಾತ್ರವಲ್ಲ, ಹೋಟೆಲ್- ಮಾರುಕಟ್ಟೆಯಂತಹ ಸ್ಥಳಗಳಲ್ಲಿ ಕೂಡ ಜನರು ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನು ಮತ್ತಷ್ಟು ಎಚ್ಚರಿಕೆಯಿಂದ ಮತ್ತು ಕಾಳಜಿಯಿಂದ ಗಮನಿಸಬೇಕಾದ ಅನಿವಾರ್ಯತೆಯನ್ನು ಶುಕ್ರವಾರದ ಘಟನೆ ಸೃಷ್ಟಿಸಿದೆ.
ಜಾರ್ಖಂಡ್‌ನಲ್ಲಿ ಪ್ರಧಾನಿ ಮೋದಿ, 35 ಸಾವಿರ ಕೋಟಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 5 =
Remember me
