ಬೆಂಗಳೂರು:ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಉಷ್ಣ ಅಲೆ ಮುಂದುವರಿದಿದೆ. ಮೊದಲ ಬಾರಿ ಕಲಬುರಗಿ, ರಾಯಚೂರಿನಲ್ಲಿ ಬುಧವಾರ ತಲಾ 46.7 ಡಿ.ಸೆ.ಉಷ್ಣಾಂಶ ದಾಖಲಾಗಿದ್ದು, ಈ ಮೂಲಕ ಹಿಂದಿನ ಎಲ್ಲ ದಾಖಲೆ ಮುರಿದಿವೆ. 2019ರಲ್ಲಿ ರಾಜ್ಯದಲ್ಲೇ ಕಲಬುರಗಿಯಲ್ಲಿ ಅತಿ ಹೆಚ್ಚು ಅಂದರೆ 46.6 ಡಿ.ಸೆ.ಉಷ್ಣಾಂಶ ವರದಿಯಾಗಿತ್ತು. ಈವರೆಗೆ ದಾಖಲಾದ ಅತ್ಯಾಧಿಕ ತಾಪಮಾನ ಇದಾಗಿತ್ತು.
ಬುಧವಾರ 28 ಜಿಲ್ಲೆಗಳಲ್ಲಿ ಉಷ್ಣಾಂಶ 40ರ ಗಡಿ ದಾಟಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ 45-46ರ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿದೆ. ಕಳೆದ ವಾರ ವಾಡಿಕೆಗಿಂತ 2-3 ಡಿ.ಸೆ. ಹೆಚ್ಚು ಉಷ್ಣಾಂಶ ದಾಖಲಾಗುತ್ತಿತ್ತು. ಆದರೆ, ಪ್ರಸ್ತುತ ದಿನಗಳಲ್ಲಿ ವಾಡಿಕೆಗಿಂತ 5-6 ಡಿ.ಸೆ. ಹೆಚ್ಚು ಉಷ್ಣಾಂಶ ಕಂಡುಬರುತ್ತಿದೆ. ಇದರಿಂದಾಗಿ ರಣಬಿಸಿಲಿಗೆ ಜನರು ತತ್ತರಿಸುವಂತಾಗಿದೆ. ಅದೇರೀತಿ, ದಕ್ಷಿಣ ಕರ್ನಾಟಕ,ಕರಾವಳಿ ಭಾಗದ ಬಹುತೇಕ ಜಿಲ್ಲೆಗಳಲ್ಲೂ ಉಷ್ಣಾಂಶ 40ರ ಗಡಿ ಮುಟ್ಟಿದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ಕಲಬುರಗಿ, ವಿಜಯಪುರ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಮತ್ತು ಯಾದಗಿರಿಯಲ್ಲಿ ಮೇ 2ರಿಂದ ಮೇ 6ರವರೆಗೆ ತೀವ್ರ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್​ ಅರ್ಲಟ್​ ಘೋಷಿಸಿದೆ. ಹೀಗಾಗಿ, ಬಿಸಿಲಿನ ಪ್ರಖರತೆ ಇರುವ ಸಂದರ್ಭದಲ್ಲಿ ಶಾಖ ಹೊಡೆತಕ್ಕೆ ತುತ್ತಾಗಿ ಸಾವು ಸಂಭವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಆರೋಗ್ಯ ಬಗ್ಗೆ ಕಾಳಜಿ ವಹಿಸುವಂತೆ ಇಲಾಖೆ ಸಲಹೆ ಕೊಟ್ಟಿದೆ.
ವರ್ಷದಿಂದ ವರ್ಷಕ್ಕೆ ತಾಪಮಾನ ಏರಿಕೆವರ್ಷದಿಂದ ವರ್ಷಕ್ಕೆ ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ತಾಪಮಾನ ಹೆಚ್ಚಳವಾಗುತ್ತಿದೆ. 2017ರಲ್ಲಿ 23 ಜಿಲ್ಲೆ, 2018ರಲ್ಲಿ 21 ಜಿಲ್ಲೆ, 2019ರಲ್ಲಿ 27 ಜಿಲ್ಲೆ, 2020ರಲ್ಲಿ 27 ಜಿಲ್ಲೆ, 2021ರಲ್ಲಿ 20 ಜಿಲ್ಲೆ ಹಾಗೂ 2022ರಲ್ಲಿ 17 ಜಿಲ್ಲೆಗಳಲ್ಲಿ 40ರಿಂದ 45 ಡಿ.ಸೆ.ವರೆಗೆ ಉಷ್ಣಾಂಶ ದಾಖಲಾಗಿತ್ತು. ರಾಜ್ಯದ ಶೇ.90 ರಷ್ಟು ಪ್ರದೇಶಗಳು ಬಿಸಿಲಿನ ತಾಪಕ್ಕೆ ನಲುಗಿವೆ. ಹವಾಮಾನ ಅಸಮತೋಲನದಿಂದ ಹೊತ್ತಲ್ಲದ ಹೊತ್ತಲ್ಲಿ ಎಡಬಿಡದೆ ಸುರಿಯುವ ಅಕಾಲಿಕ ಮಳೆ, ಇದಕ್ಕಿದ್ದಂತೆ ಮಳೆ ಕುಂಠಿತ, ಭೀಕರ ಬರಗಾಲ, ರಣ ಬಿಸಿಲು,ಮೈನಡುಗಿಸುವ ಚಳಿ, ಮಳೆ ದಿನಗಳ ಅವಧಿ ಬದಲಾವಣೆ ಹಾಗೂ ಬೇಸಿಗೆ ಅವಧಿಯ ದಿನಗಳು ಏರಿಕೆಯಾಗುತ್ತಿದೆ. ಗರಿಷ್ಠ ತಾಪಮಾನದಲ್ಲಿ 40 ಡಿ.ಸೆ.ಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಶಾಖ ಅಲೆ ಎಂದು ಕರೆಯಲಾಗುತ್ತಿದೆ. ಆರು ವರ್ಷಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗುತ್ತಿದೆ.
‘ಹೀರಾಮಂಡಿ’: ಹೊಸ ಸರಣಿ ನೆಟ್‌ಫ್ಲಿಕ್ಸ್ ನಲ್ಲಿ ರಿಲೀಸ್
ಮಾನವ ಪ್ರಭಾವ ಹೆಚ್ಚಳಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ರಾಜ್ಯದಲ್ಲಿ ಹವಾಮಾನ ಬದಲಾವಣೆಯಾಗುತ್ತಿರುವ ಕುರಿತು ಅಧ್ಯಯನ ನಡೆಸಿತ್ತು. 1960ರಿಂದ 1990ರವರೆಗೆ ಹಾಗೂ 1997ರಿಂದ 2017ರವರೆಗೆ ಹವಾಮಾನದಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂಬುದರ ಬಗ್ಗೆ 2 ಭಾಗಗಳಾಗಿ ವಿಗಂಡಿಸಿ ಅಧ್ಯಯನ ನಡೆಸಲಾಗಿತ್ತು. ಮೊದಲ 30 ವರ್ಷಗಳಲ್ಲಿ ಹವಾಮಾನ ಹೇಗಿತ್ತು. ನಂತರ, 30 ವರ್ಷಗಳಲ್ಲಿ ಹವಾಮಾನಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂಬ ಬಗ್ಗೆ ನಡೆಸಿದ್ದ ಅಧ್ಯಯನದಲ್ಲಿ ವಾಡಿಕೆಗಿಂತ ಬಿಸಿಲು, ಮಳೆ, ಚಳಿ, ಗರಿಷ್ಠ ಮತ್ತು ಕನಿಷ್ಠ ತಾಪಮಾನದ ಉಷ್ಣಾಂಶ ಹೆಚ್ಚಳವಾಗಿರುವುದು ತಿಳಿದುಬಂದಿತ್ತು. ಕೆಲ ವರ್ಷಗಳಲ್ಲಿ ಸರಾಸರಿ 2 ಡಿ.ಸೆ. ಉಷ್ಣಾಂಶ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಮೂನ್ಸೂಚನೆ ನೀಡಿತ್ತು. ಹವಾಮಾನದ ಮೇಲೆ ಮಾನವ ಚಟುವಟಿಕೆಗಳ ಪ್ರಭಾವ, ಹಸಿರುಮನೆ ಅನಿಲ ಹೊರಸೂಸುವಿಕೆ ಹೆಚ್ಚಳವಾಗುತ್ತಿರುವ ಬಗ್ಗೆ ಎಚ್ಚರಿಕೆ ನೀಡಿತ್ತು. ಈಗಿನ ಹವಾಮಾನ ಬದಲಾವಣೆಯನ್ನು ಜಾಗತಿಕ ತಾಪಮಾನ ಏರಿಕೆ ವ್ಯಾಪ್ತಿಯಲ್ಲಿ ಪರಿಗಣಿಸಿದ್ದು, ಐಸ್​, ಹಿಮನದಿಗಳ ಕರಗುವಿಕೆ, ಸಮುದ್ರ ಮಟ್ಟ ಹೆಚ್ಚಳ, ಬರ, ಉಷ್ಣತೆ, ಬಿಸಿಗಾಳಿ, ಮಳೆಗಾಲ ಅವಧಿ ಬದಲಾವಣೆ ಸೇರಿ ಇತರೆ ಅಂಶಗಳು ಹವಾಮಾನದಲ್ಲಿ ಬದಲಾವಣೆಯಾಗುತ್ತಿದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿತ್ತು.
ಬೆಂಗಳೂರಿನಲ್ಲಿಯೂ ರಣ ಬಿಸಿಲುರಾಜಧಾನಿ ಬೆಂಗಳೂರುನಲ್ಲಿಯೂ ಉತ್ತರ ಕರ್ನಾಟಕದ ಮಾದರಿ ಉರಿ ಬಿಸಿಲು ಕಾಣಿಸಿಕೊಂಡಿದೆ. ಬುಧವಾರ ಇದೇ ಮೊದಲ ಬಾರಿಗೆ ನಗರದಲ್ಲಿ 41.3 ಡಿ.ಸೆ.ತಾಪಮಾನ ದಾಖಲಾಗಿದೆ. ಈ ಮೂಲಕ ಹಿಂದಿನ ಎಲ್ಲ ದಾಖಲೆ ಮುರಿದಿದೆ. ನಗರದಲ್ಲಿ ವಾಡಿಕೆಯಂತೆ ಗರಿಷ್ಠ ತಾಪಮಾನದಲ್ಲಿ 34&35 ಡಿ.ಸೆ.ದಾಖಲಾಗಬೇಕಿತ್ತು. ವಾಡಿಕೆಗಿಂತ 7 ಡಿ.ಸೆ. ಉಷ್ಣಾಂಶ ಏರಿಕೆಯಾಗಿದೆ. 2017ರಲ್ಲಿ 39.6, 2018ರಲ್ಲಿ 38.1, 2019ರಲ್ಲಿ 39.9, 2020ರಲ್ಲಿ 38.9, 2021ರಲ್ಲಿ 38.9, 2022ರಲ್ಲಿ 39.7 ಡಿ.ಸೆ.ಉಷ್ಣಾಂಶ ದಾಖಲಾಗಿತ್ತು. ಈವರೆಗೆ ದಾಖಲಾದ ಅತ್ಯಾಧಿಕ ತಾಪಮಾನ ಇದಾಗಿತ್ತು.
ಬುಧವಾರದ ಉಷ್ಣಾಂಶ ವಿವರಜಿಲ್ಲೆ                 ಉಷ್ಣಾಂಶಕಲಬುರಗಿ            46.7ರಾಯಚೂರು         46.7ಯಾದಗಿರಿ           46.1ವಿಜಯಪುರ          45.4ಕೊಪ್ಪಳ             45ಬಳ್ಳಾರಿ             45ಗದಗ               45
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + one =
Remember me
