ಬೆಂಗಳೂರು:ಆರೋಗ್ಯದಿಂದಿರುವವರು ಮಾಸ್ಕ್ ಧರಿಸುವ ಅಗತ್ಯವಿಲ್ಲ, ಕೆಮ್ಮು ನೆಗಡಿ ಜ್ವರ ಇರುವವರು ಮಾತ್ರ ಮಾಸ್ಕ್ ಧರಿಸಿದರೆ ಸಾಕು ಎಂದು ಈ ಹಿಂದೆ ಆರೋಗ್ಯ ಇಲಾಖೆ ತಿಳಿಸಿತ್ತು. ಆದರೆ ಇದೀಗ ಅದು ತನ್ನ ನಿಲುವು ಬದಲಿಸಿದ್ದು, ಅಪರಿಚಿತರೊಂದಿಗೆ ವ್ಯವಹರಿಸುವಾಗ ಪ್ರತಿಯೊಬ್ಬರೂ ಮಾಸ್ಕ್ ಧರಿಸಲೇಬೇಕು ಎಂದು ಸ್ಪಷ್ಟಪಡಿಸಿದೆ.
ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಸೋಂಕು ಯಾವ ರೀತಿಯಲ್ಲಿ ಹರಡುತ್ತದೆ ಎಂಬುದು ತಿಳಿಯದ ಕಾರಣ ಅಪರಿಚಿತರೊಂದಿಗೆ ವ್ಯವಹರಿಸುವಾಗ ಮಾಸ್ಕ್ ಧರಿಸಿ ಸುರಕ್ಷಿತರಾಗಿರಬೇಕು. ವಯಸ್ಕರು ಧರಿಸುವ ಮಾಸ್ಕ್ 7ರಿಂದ 9 ಇಂಚು ಮತ್ತು ಮಕ್ಕಳು ಧರಿಸುವ ಮಾಸ್ಕ್ 5ರಿಂದ 7 ಇಂಚು ಇರಬೇಕು.
ಮನೆಯಲ್ಲೇ ಮಾಸ್ಕ್ ತಯಾರಿಸುವುದಕ್ಕೆ ಜನರು ಮುಂದಾಗಬೇಕು. ಬಳಸದೇ ಇರುವ ಬನಿಯನ್, ಟೀ ಶರ್ಟ್ ಅಥವಾ ಕರವಸದಂತಹ ಸ್ವಚ್ಛ ಹತ್ತಿ ಬಟ್ಟೆಯಿಂದ ಮಾಸ್ಕ್ ತಯಾರಿಸಿಕೊಳ್ಳಬಹುದು. ಸಿಂಥೆಟಿಕ್ ಬಟ್ಟೆಗಳನ್ನು ಅದಕ್ಕೆ ಬಳಸುವುದು ಸೂಕ್ತವಲ್ಲ.
ಮನೆಯಲ್ಲೇ ಸಿದ್ಧಪಡಿಸುವ ಮಾಸ್ಕ್‌ಗಳನ್ನು ಶುಚಿಗೊಳಿಸಿ ಮರುಬಳಕೆ ಮಾಡಬಹುದು. ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಠ 2 ಮಾಸ್ಕ್‌ಗಳನ್ನು ಹೊಂದಿರಬೇಕು. ಆದರೆ, ಬ್ಯಾಕ್ಟೀರಿಯಾ ಮತ್ತು ವೈರಸ್‌ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವೈದ್ಯಕೀಯವಾಗಿ ಪ್ರಮಾಣೀಕರಿಸಿದ ಮಾಸ್ಕ್‌ಗಳನ್ನು ಮಾತ್ರವೇ ಬಳಸಬೇಕೆಂದು ಸೂಚಿಸಿದೆ.
ಫ್ಯಾಕ್ಟರಿಯಲ್ಲಿ ಬಾಳೆಎಲೆ ಊಟ ಕಡ್ಡಾಯ; ಮಾಜಿ ಪತ್ರಕರ್ತೆಯೊಬ್ಬರ ಸಲಹೆ ಜಾರಿಗೊಳಿಸಿದ ದೇಶದ ಪ್ರಖ್ಯಾತ ವಾಹನ ತಯಾರಿಕಾ ಕಂಪನಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 4 =
Remember me
