ಬೆಂಗಳೂರು: ಫೇಸ್​ಬುಕ್​ನಲ್ಲಿ ಪರಿಚಯವಾಗಿದ್ದ ಯುವತಿ, ದುಬಾರಿ ಬೆಲೆಯ ಉಡುಗೊರೆ ಕಳುಹಿಸುವ ಆಮಿಷವೊಡ್ಡಿ ವಕೀಲೆಯಿಂದ 5.2 ಲಕ್ಷ ರೂ. ಪಡೆದು ವಂಚಿಸಿದ್ದಾಳೆ. ಮಲ್ಲೇಶ್ವರ ನಿವಾಸಿ ವಂಚನೆಗೊಳಗಾದ ವಕೀಲೆ. ವಂಚಕರಾದ ನ್ಯಾನ್ಸಿ ಮತ್ತು ಎಡ್ವಿನ್ ಆಂಡ್ರ್ಯೂ ಎಂಬುವರ ವಿರುದ್ಧ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ತೆ ಜತೆ ಕೆಲ ತಿಂಗಳ ಹಿಂದೆ ಎಡ್ವಿನ್ ಆಂಡ್ರ್ಯೂ ಎಂಬ ಯುವತಿ ಸ್ನೇಹ ಬೆಳೆಸಿದ್ದಳು. ಆಕೆ ನಿತ್ಯ ಚಾಟಿಂಗ್ ಮಾಡುತ್ತಿದ್ದಳು. ಆಕೆಯನ್ನು ನಂಬಿ ತನ್ನ ಪುತ್ರಿಯ ಹುಟ್ಟುಹಬ್ಬ ಇರುವ ವಿಚಾರವನ್ನು ಹೇಳಿಕೊಂಡಿದ್ದರು. ಆಗ, ಎಡ್ವಿನ್ ತಾನು ಉಡುಗೊರೆ ಕಳುಹಿಸುವುದಾಗಿ ತಿಳಿಸಿದ್ದಳು. ಜೂ. 8ರಂದು ಕರೆ ಮಾಡಿದ್ದ ಮತ್ತೋರ್ವ ಯುವತಿ, ತಾನು ದೆಹಲಿ ಕಸ್ಟಮ್ಸ್ ಕಚೇರಿಯ ಸಿಬ್ಬಂದಿ ನ್ಯಾನ್ಸಿ ಎಂದು ಪರಿಚಯಿಸಿಕೊಂಡಿದ್ದಳು. ನಿಮ್ಮ ಹೆಸರಿಗೆ ಪಾರ್ಸೆಲ್ ಬಂದಿದೆ. ಅದನ್ನು ಬಿಡಿಸಿಕೊಳ್ಳಿ ಎಂದು ಹೇಳಿದ್ದಳು. ಉಡುಗೊರೆ ವಿಚಾರವನ್ನು ಖಚಿತಪಡಿಸಿಕೊಳ್ಳಲು ಎಡ್ವಿನ್​ಗೆ ವಕೀಲೆ ಕರೆ ಮಾಡಿದಾಗ ತಾನೇ ಉಡುಗೊರೆ ಕಳುಹಿಸಿದ್ದು ಎಂದು ಹೇಳಿದ್ದಳು. ದುಬಾರಿ ಗಿಫ್ಟ್ ಆದಾಗಿದ್ದು, ಪಾರ್ಸೆಲ್ ಶುಲ್ಕ ಪಾವತಿಸಿ ಬಿಡಿಸಿಕೊಳ್ಳುವಂತೆ ಸೂಚಿಸಿದ್ದಳು.
ಇದನ್ನೂ ಓದಿ:ನಾಳೆಗೂ ಇಂದೇ ದಂಡ ವಸೂಲಿ ಮಾಡುತ್ತಿರುವ ಕೊಪ್ಪ ಎಸ್​ಐ ಅಯ್ಯನಗೌಡ
ಕೆಲ ನಿಮಿಷಗಳ ಬಳಿಕ ಮತ್ತೆ ಕರೆ ಮಾಡಿದ್ದ ನ್ಯಾನ್ಸಿ, ಪಾರ್ಸೆಲ್ ಶುಲ್ಕಕ್ಕೆಂದು ಹೇಳಿ 5.2 ಲಕ್ಷ ರೂ.ಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾಳೆ. ಆದರೆ, ಗಿಫ್ಟ್ ಕಳುಹಿಸಿಲ್ಲ. ಈ ಕುರಿತು ವಿಚಾರಿಸಲು ಎಡ್ವಿನ್ ಮತ್ತು ನ್ಯಾನ್ಸಿಗೆ ಫೋನ್ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ಗಿಫ್ಟ್ ಹೆಸರಿನಲ್ಲಿ ವಂಚಿಸಿರುವುದು ಗೊತ್ತಾಗಿ ವಕೀಲೆ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಐಒಸಿಎಲ್ ಸಹಾಯವಾಣಿ ಹೆಸರಿನಲ್ಲಿ 6.75 ಲಕ್ಷ ರೂಪಾಯಿ ದೋಚಿದ್ರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − five =
Remember me
