ಬೆಂಗಳೂರು:ಪಠ್ಯಪರಿಷ್ಕರಣೆ ಹಾಗೂ ಚಡ್ಡಿ ವಿವಾದಗಳು ಬಿಜೆಪಿ ಮತ್ತು ಕಾಂಗ್ರೆಸ್​ ಮಧ್ಯೆ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದ್ದು, ದಿನವೂ ಈ ವಿಚಾರಗಳಿಗೆ ಸಂಬಂಧಿಸಿದಂತೆ ಎರಡೂ ಕಡೆಯವರಿಂದ ಆರೋಪ-ಪ್ರತ್ಯಾರೋಪಗಳು ಕೇಳಿ ಬರುತ್ತವೆ. ಈ ನಡುವೆ ಇದೇ ವಿಚಾರವಾಗಿ ಕಾಂಗ್ರೆಸ್​ ನಡೆಸಿರುವ ಪ್ರತಿಭಟನೆಯೊಂದರಲ್ಲಿ ಬಿಜೆಪಿಗರ ಮುಖಗಳು ಕಂಡುಬಂದಿವೆ.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಇಂಥದ್ದೊಂದು ಪ್ರತಿಭಟನೆಯನ್ನು ರಾಜಧಾನಿಯಲ್ಲಿ ನಡೆಸಿದ್ದು, ಪಠ್ಯಪರಿಷ್ಕರಣೆ ಹಾಗೂ ಚಡ್ಡಿ ವಿಚಾರವಾಗಿ ತೀವ್ರ ಅಸಮಾಧಾನವನ್ನು ಹೊರಹಾಕಿದೆ. ಮಾತ್ರವಲ್ಲ, ಬಿಜೆಪಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸಲುವಾಗಿ ಅವರ ಮುಖಗಳನ್ನೇ ಬಳಸಿದೆ. ಅರ್ಥಾತ್ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ನಾಯಕರ ಮುಖವಾಡಗಳನ್ನು ಧರಿಸಿ ಈ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.
ಬಿಜೆಪಿಯವರು ಪಠ್ಯಪುಸ್ತಕದಲ್ಲಿರುವ ಲೋಪಗಳನ್ನು ಮರೆಮಾಚಲು ಹಾಗೂ ಶೇ. 40 ಕಮಿಷನ್ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ವಿಷಯಾಂತರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಖಂಡಿಸಿದ್ದು, ಭ್ರಷ್ಟಾಚಾರದಲ್ಲಿ ಆರ್​ಎಸ್​ಎಸ್​ ಸಂಸ್ಥೆಯ ಸಂಘಟನೆ ನಡೆಸುತ್ತಿರುವ ಬಗ್ಗೆ ಜನತೆಗೆ ಬಹಿರಂಗಪಡಿಸಬೇಕು ಇಲ್ಲದೆ ಹೋದರೆ ಬಿಜೆಪಿ ಭ್ರಷ್ಟಾಚಾರದಲ್ಲಿ ಬಂದಿರುವ ಹಣವನ್ನು ಆರೆಸ್ಸೆಸ್ ಸಂಘಟನೆಗೆ ಬಳಸುತ್ತಿರುವುದು ಸಾಬೀತಾಗುತ್ತದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಅತ್ಯಂತ ಭ್ರಷ್ಟ ಪಕ್ಷ ಎಂಬುದು ಈಗ ಸಾಬೀತಾಗಿದೆ. ಭ್ರಷ್ಟಾಚಾರಿಗಳಿಗೆ ವಿರೋಧ ಪಕ್ಷಗಳ ವಿರುದ್ಧ ಮಾತನಾಡುವ ನೈತಿಕತೆ ಉಳಿದಿಲ್ಲ ಎಂಬ ಪರಿಜ್ಞಾನವೂ ಬಿಜೆಪಿಯ ಕೆಲವು ನಾಯಕರಿಗೆ ಇಲ್ಲದಂತಾಗಿದೆ. ಪಕ್ಷದ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಶಾಸಕರು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಾರೆ ಹಾಗೂ ಆರೋಗ್ಯ ಸಚಿವರು ಅರ್ಹತೆ ಇಲ್ಲದ ವ್ಯಕ್ತಿ ಎಂದು ಆ ಪಕ್ಷದ ನಾಯಕರೇ ಬಹಿರಂಗಪಡಿಸುತ್ತಾರೆ. ಇಷ್ಟೆಲ್ಲ ಟೀಕೆಗೆ ಗುರಿಯಾದರೂ ಅಧಿಕಾರದಲ್ಲಿ ಅಂಟಿಕೊಂಡು ಕುಳಿತುಕೊಳ್ಳುವ ಬಿಜೆಪಿ ನಾಯಕರಿಗೆ ಹಾಗೂ ಮಂತ್ರಿಗಳಿಗೆ ಯಾವ ನೈತಿಕತೆ ಇದೆ, ವಿರೋಧ ಪಕ್ಷವನ್ನು ಟೀಕಿಸಲು ಅವರಿಗೆ ಯಾವ ಯೋಗ್ಯತೆ ಇದೆ ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕು. ವಿರೋಧ ಪಕ್ಷದ ನಾಯಕರಿಗೆ ಹಳೆಬಟ್ಟೆ ರವಾನೆ ಮಾಡುವ ನಾಟಕದ ಪ್ರಯತ್ನವನ್ನು ಚಲವಾದಿ ನಾರಾಯಣಸ್ವಾಮಿ ನಡೆಸಿದ್ದಾರೆ ಎಂದು ಕಿಡಿಕಾರಿರುವ ಪ್ರತಿಭಟನಾಕಾರರು, ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ನಾಯಕರು ಆರೆಸ್ಸೆಸ್ ಸಂಸ್ಥೆಗೆ ನೀಡುತ್ತಿರುವ ಹಣದ ಮೂಲವನ್ನು ಮೊದಲು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಗರಣದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರ ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ನಾಯಕರನ್ನು ಪಠ್ಯಪುಸ್ತಕದಲ್ಲಿ ಅವಮಾನಿಸುತ್ತಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್, ವಿಶ್ವಗುರು ಬಸವಣ್ಣ ರಾಷ್ಟ್ರಕವಿ ಕುವೆಂಪು ಅವರ ಮಾಹಿತಿಯನ್ನು ತೆಗೆದು ಹೆಡಗೇವಾರ್ ಸುಳ್ಳಿನ ಕಥೆಯನ್ನ ಸೇರಿಸಿ ಶಿಕ್ಷಣದಲ್ಲೂ ಕೋಮುವಾದ ಹಾಗೂ ಜಾತಿ ಬಣ್ಣ ಬಳಿಯುವ ಪ್ರಯತ್ನ ಕೀಳುಮಟ್ಟದ ನಡೆಯಾಗಿದೆ ಎಂದು ಪ್ರತಿಭಟನಾಕಾರರು ಟೀಕಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಮನೋಹರ್, ಎ.ಆನಂದ್, ಪ್ರಕಾಶ್, ಮಂಜುನಾಥ್ ಚಂದ್ರಶೇಖರ್, ಸುಪ್ರಜ ಚಿಕ್ಕಣ್ಣ, ವೆಂಕಟೇಶ್, ನವೀನ್, ಪ್ರಶಾಂತ್ ಮತ್ತಿತರರು ಭಾಗವಹಿಸಿದ್ದರು.
ಹಿರಿಯ ನಾಗರಿಕರಿಗೊಂದು ಸಂತಸದ ಸಂಗತಿ; ಮತ್ತೊಮ್ಮೆ ಆದೇಶ ಹೊರಡಿಸಿತು ಸರ್ಕಾರ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
