ಬೆಂಗಳೂರು:ಚರ್ಮವನ್ನು ಸುಂದರವಾಗಿ ಮತ್ತು ಆರೋಗ್ಯಕರವಾಗಿಡುವುದು ಬಹಳ ಮುಖ್ಯವಾಗಿದೆ. ಅನೇಕ ಜನರು ತಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಸುಂದರವಾಗಿ ಕಾಣಲು ಫೇಶಿಯಲ್ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ತ್ವಚೆಯ ರಂಧ್ರಗಳು ಶುಚಿಯಾಗುವುದಲ್ಲದೆ ತ್ವಚೆಯು ಸುಂದರವಾಗಿ ಮತ್ತು ಆರೋಗ್ಯಕರವಾಗಿ ಕಾಣುತ್ತದೆ. ಸಾಮಾನ್ಯವಾಗಿ ಟೀ, ಕಾಫಿ ಕುಡಿಯೋ ಅಭ್ಯಾಸ ಎಲ್ಲರಿಗೂ ಇರುತ್ತದೆ. ಹಾಗಾಗಿ ಮನೆಯಲ್ಲಿ ಈ ಪುಡಿಗಳು ಇದ್ದೇ ಇರುತ್ತವೆ. ಕಾಫಿ ಫೇಶಿಯಲ್ ಮಾಡಿಕೊಳ್ಳಬಹುದಾಗಿದೆ. ಸಿಂಪಲ್ ಟಿಪ್ಸ್ ನೊಂದಿಗೆ ಮನೆಯಲ್ಲೇ ಫೇಶಿಯಲ್ ಮಾಡಿಕೊಳ್ಳಲು ಈ ಸರಳ ಸಲಹೆಗಳನ್ನು ಅನುಸರಿಸಿ…

ಇದನ್ನೂ ಓದಿ:ಮೇಕೆ ಹಾಲು ಕುಡಿದರೆ ರೋಗಗಳಿಂದ ದೂರವಿರಬಹುದು….
1) ಕಾಫಿ ಪೌಡರ್​​-ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಲೇಪಿಸಿ 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಚರ್ಮವು ಸುಂದರವಾಗಿ ಹೊಳೆಯುತ್ತದೆ. ಎಣ್ಣೆಯುಕ್ತ ಮುಖಕ್ಕೆ ಈ ಪ್ಯಾಕ್ ಅನ್ನು ಅನ್ವಯಿಸಿ. ಈ ಪ್ಯಾಕ್ ನಿಮಗೆ 10 ನಿಮಿಷಗಳಲ್ಲಿ ಉತ್ತಮ ಹೊಳಪನ್ನು ನೀಡುತ್ತದೆ. ಇದನ್ನು ತಿಂಗಳಿಗೆ ಎರಡು ದಿನ ಬಳಸಿದರೆ ಮುಖದಲ್ಲಿರುವ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.
2) ತೆಂಗಿನ ಎಣ್ಣೆಯಲ್ಲಿ ಸ್ವಲ್ಪ ನೀರು ಬೆರೆಸಿ ಮುಖಕ್ಕೆ ಚೆನ್ನಾಗಿ ಹಚ್ಚಿಕೊಳ್ಳಿ. ಈಗ 1 ನಿಮಿಷ ಮಸಾಜ್ ಮಾಡಿ. ನಂತರ ಕಾಫಿ ಪೌಡರ್​​, ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಮಸಾಜ್​ ಮಾಡಿ.
ಇದನ್ನೂ ಓದಿ:ದ್ರಾಕ್ಷಿ ಹಣ್ಣು ಈ 5 ಕಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ…
3) ಫೇಸ್ ಪ್ಯಾಕ್ ಅನ್ನು ಹಗಲಿನಲ್ಲಿ ಅನ್ವಯಿಸುವುದಕ್ಕಿಂತ ರಾತ್ರಿಯಲ್ಲಿ ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಮುಖದಲ್ಲಿರುವ ಟ್ಯಾನ್ ಮತ್ತು ಕೊಳೆ ನಿವಾರಣೆಯಾಗಿ ಮುಖ ಹೊಳೆಯುತ್ತದೆ.
ಇದನ್ನೂ ಓದಿ:ಕೂದಲ ಬಣ್ಣಕ್ಕೆ ದುಬಾರಿ ವಸ್ತುಗಳೇ ಬೇಕಿಲ್ಲ..ಹಿತ್ತಲಲ್ಲಿ ಬೆಳೆಯುವ ಈ ಎಲೆಗಳು ಸಾಕು..ಇಲ್ಲಿದೆ ಶಾಶ್ವತ ಪರಿಹಾರ..!
4) ಕಾಫಿ ಪುಡಿಗೆ 1 ಚಮಚ ಅಲೋವೆರಾ ಜೆಲ್ ಹಾಕಿಕೊಳ್ಳಬೇಕು. ಇವೆರನ್ನು ಸಣ್ಣಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ವೃತ್ತಾಕಾರದಲ್ಲಿ ಮುಖಕ್ಕೆ ಮಸಾಜ್ ಮಾಡಿಕೊಳ್ಳಬೇಕು. 10 ನಿಮಿಷದ ಬಳಿಕ ತಣ್ಣೀರಲ್ಲಿ ಮುಖ ತೊಳೆದುಕೊಳ್ಳಬೇಕು. ಈ ರೀತಿ ಕಾಫಿ ಪುಡಿಯನ್ನು ಫೇಸ್ ಮಾಸ್ಕ್, ಸ್ಕ್ರಬ್‍ ನಲ್ಲಿ ಬಳಸುವ ಮೂಲಕ ಮನೆಯಲ್ಲೇ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ..ವಾರಕ್ಕೊಮ್ಮೆಯಾದರೂ ಮೀನು ತಿನ್ಬೇಕಂತೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
