ಬೆಂಗಳೂರು :ಕರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮೇ ತಿಂಗಳ ಪಡಿತರ ವಸ್ತುಗಳನ್ನು ಪಡೆಯಲು ಪಡಿತರ ಚೀಟಿದಾರರ ಬೆರಳು ಮುದ್ರೆ(ಬಯೋಮೆಟ್ರಿಕ್)ಯನ್ನು ಪಡೆಯುದೇ ವಿತರಿಸಬೇಕೆಂದು ರಾಜ್ಯ ಸರ್ಕಾರ ಆದೇಶಿಸಿದೆ. ಪಡಿತರ ಚೀಟಿದಾರರು ಮತ್ತು ನ್ಯಾಯಬೆಲೆ ಅಂಗಡಿಗಳ ಮಾಲೀಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಬೆರಳಚ್ಚು ನೀಡಲು ಒತ್ತಾಯಿಸುವ ಹಾಗಿಲ್ಲ ಎಂದಿದೆ.
ಮೇ ತಿಂಗಳ ಪಡಿತರ ವಸ್ತುಗಳನ್ನು ಪಡಿತರ ಚೀಟಿದಾರರು ಆಧಾರ್ ಜೊತೆ ಜೋಡಿಸಿಕೊಂಡಿರುವ ಮೊಬೈಲ್​ ಸಂಖ್ಯೆಗೆ ಒಟಿಪಿ ಕಳುಹಿಸಿ ವಿತರಿಸಲಾಗುತ್ತದೆ. ಜೊತೆಗೆ ವಯೋವೃದ್ಧರು, ಅನಾರೋಗ್ಯಪೀಡಿತರು ಮತ್ತು ವಿಶೇಷಚೇತನರಿಗೆ ವಿನಾಯಿತಿ ಸೌಲಭ್ಯದಡಿ ವಿತರಿಸಲಾಗುವುದು. ಪಡಿತರ ಚೀಟಿದಾರರ ಚೆಕ್​ಲಿಸ್ಟ್​ / ಮಾನ್ಯುಯಲ್ ಮೂಲಕವೂ ನೇರವಾಗಿ ವಿತರಿಸಲಾಗುವುದು. ರಾಜ್ಯ ಮತ್ತು ಹೊರರಾಜ್ಯದ ಪಡಿತರ ಚೀಟಿದಾರರಿಗೆ ಪೋರ್ಟಬಲಿಟಿ ಮೂಲಕ ಪಡಿತರ ವಿತರಣೆ ಸೌಲಭ್ಯ ಕೂಡ ಇರಲಿದೆ ಎಂದು ರಾಜ್ಯದ ಆಹಾರ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ನಡುವೆ ಸೈಬರ್ ವಾರ್; ಮೋದಿ ನಿಂದಿಸಿದ್ದಕ್ಕೆ 54 ಜನರ ಮೇಲೆ ಬಿತ್ತು ಕೇಸ್!
ಕರೊನಾ ಹಿನ್ನೆಲೆಯಲ್ಲಿ ಪಡಿತರದಾರರಿಗೆ ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಆರೋಗ್ಯಕರ ವಾತಾವರಣದಲ್ಲಿ ಸರಳ ಕ್ರಮ ತೆಗೆದುಕೊಂಡು ವಸ್ತುಗಳ ವಿತರಣೆ ಮಾಡುವ ಉದ್ದೇಶ ಸರ್ಕಾರದ್ದಾಗಿದೆ. ಪಡಿತರ ಚೀಟಿದಾರರಿಗೆ ಯಾವುದೇ ಅನಾನುಕೂಲಗಳಾದಲ್ಲಿ ಆಹಾರ, ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತಾಲಯಕ್ಕೆ 1967, 14445 ಅಥವಾ 1800 425 9339 ಗೆ ಕರೆ ಮಾಡಿ ದೂರು ಸಲ್ಲಿಸಬಹುದು. ಈ ಬಗ್ಗೆ ಸಂಬಂಧಿತ ಗ್ರಾಮ ಪಂಚಾಯಿತಿಗಳಿಗೆ ಅಥವಾ ತಹಸೀಲ್ದಾರ್​ಗಳಿಗೆ ಕೂಡ ದೂರು ದಾಖಲಿಸಬಹುದಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ರೋಗ ಹರಡುವ ವೈರಸ್​ಅನ್ನು ಶಸ್ತ್ರವಾಗಿ ಬಳಸಲು ಚೀನಾ ಚಿಂತನೆ ನಡೆಸುತ್ತಿತ್ತು ಎನ್ನುವ ದಾಖಲೆ ಪತ್ತೆ

ಪ್ರಾಣ ಕೈಗೆ ನೀಡಿದವರಿಗೆ ನಂಬಿಕೆದ್ರೋಹ… 7 ಜನರಿಗೆ ಮಾರಣಾಂತಿಕ ಚುಚ್ಚುಮದ್ದು ನೀಡಿದ ನರ್ಸ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × four =
Remember me
