ಬೆಂಗಳೂರು:ಕೆಲವು ದಿನಗಳಿಂದ ವಾಟ್ಸ್​ಆ್ಯಪ್​ನಲ್ಲಿ ಎಳನೀರು ಕುಡಿದು ಕ್ಯಾನ್ಸರ್​ ಗುಣಪಡಿಸಬಹುದು ಎನ್ನುವ ಸಂದೇಶ ಎಲ್ಲೆಡೆ ಹರಿದಾಡುತ್ತಿದೆ. ಈ ಸಂದೇಶದಲ್ಲಿ ಎಳನೀರನ್ನು ಬಿಸಿ ಮಾಡಿ ಕುಡಿದರೆ ಅದು ಕ್ಯಾನ್ಸರ್​ಗೆ ರಾಮಬಾಣ ಎಂದು ಬರೆದು ಜನರ ದಿಕ್ಕು ತಪ್ಪಿಸುತ್ತಿದೆ.
ಬಿಪಿ ನಿಯಂತ್ರಿಸುತ್ತೆ, ನರದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತೆ ಎಂದೆಲ್ಲಾ ಈ ಸಂದೇಶದಲ್ಲಿ ಬರೆಯಲಾಗಿದ್ದು ಅವುಗಳ ಜೊತೆಗೆ ಬಿಸಿ ಎಳನೀರು ಕುಡಿದರೆ ಕ್ಯಾನ್ಸರ್​ ಗುಣಪಡಿಸಬಹುದು. ಇದು ಸದ್ಯ ಬಳಕೆಯಲ್ಲಿ ಇರುವ ಅತ್ಯಾಧುನಿಕ ತಂತ್ರ ಎಂದು ಬರೆಯಲಾಗಿತ್ತು. ಈ ಸಂದೇಶವನ್ನು ಟಾಟಾ ಮೆಮೊರಿಯಲ್​ ಆಸ್ಪತ್ರೆಯ ಡಾ| ರಾಜೇಂದ್ರ ಹೆಸರಲ್ಲಿ ಹರಿ ಬಿಡಲಾಗಿತ್ತು.
ಈ ಬಗ್ಗೆ ಟಾಟಾ ಮೆಮೊರಿಯಲ್​ ಆಸ್ಪತ್ರೆ ಪತ್ರಿಕಾಗೋಷ್ಟಿ ಮೂಲಕ ಪ್ರತಿಕ್ರಿಯೆ ನೀಡಿದ್ದು ಪತ್ರದಲ್ಲಿ ಈ ಸುದ್ದಿ ಸುಳ್ಳು. ಟಾಟಾ ಮೆಮೊರಿಯಲ್​ ಆಸ್ಪತ್ರೆ ಅಥವಾ ಡಾ|ರಾಜೇಂದ್ರ ಈ ವಿಧಾನವನ್ನು ಒಪ್ಪುವುದಿಲ್ಲ. ಅದಲ್ಲದೇ ಬಿಸಿ ಎಳನೀರು ಕುಡಿದರೆ ಯಾವುದೇ ರೀತಿಯ ಕ್ಯಾನ್ಸರ್​ ಗುಣಪಡಿಸಬಹುದು ಎನ್ನುವ ಬಗ್ಗೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ. ಇದ್ದು ಸುಳ್ಳು ಸುದ್ದಿ. ಜನರು ಇಂತಹ ಸುದ್ದಿಗಳನ್ನು ನಂಬಬಾರದು ಎಂದು ಸ್ಪಷ್ಟನೆ ನೀಡಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
