ಬೆಂಗಳೂರು:ದ್ವಿತೀಯ ಪಿಯುಸಿಯ ಇಂಗ್ಲಿಷ್ ಭಾಷಾ ಪರೀಕ್ಷೆ ಹಾಜರಾದ ಮಕ್ಕಳಿಗಷ್ಟೇ 26 ಗ್ರೇಸ್ ಮಾರ್ಕ್​ ಸಿಗಲಿದೆ ಎಂಬ ಒಕ್ಕಣೆ ಇರುವ ಸಚಿವ ಸುರೇಶ್ ಕುಮಾರ್ ಅವರ ಟ್ವೀಟೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಟ್ವೀಟ್​ನ ಮಾಹಿತಿ ಇಷ್ಟು-ಸಚಿವ ಸುರೇಶ್ ಕುಮಾರ್ ಅವರ ಖಾತೆಯಿಂದಲೇ ಜುಲೈ 13 ರ ಸಂಜೆ 6.50ಕ್ಕೆ ಮಾಡಿರುವ ಟ್ವೀಟ್​ ಸಂದೇಶದಂತೆ ಇದೆ ಆ ಇಮೇಜ್​. ಅದರಲ್ಲಿರುವ ಟಿಪ್ಪಣಿ ಇಷ್ಟು- ಮಧ್ಯಾಹ್ನದ ನಂತರ ದ್ವಿತೀಯ ಪಿಯುವಿನ ಬಹಳಷ್ಟು ಮಕ್ಕಳು ನನಗೆ ಕರೆ ಮಾಡುತ್ತಿದ್ದಾರೆ. ಜೂನ್​ 18ರಂದು ನಡೆಸಲಾದ ಇಂಗ್ಲಿಷ್ ಭಾಷೆಯ ಪರೀಕ್ಷೆಗೆ ಸಂಬಂಧಿಸಿ ಗ್ರೇಸ್ ಮಾರ್ಕ್ಸ್ ಕುರಿತು ಕೇಳತೊಡಗಿದ್ದಾರೆ. ಎಲ್ಲ ಮೌಲ್ಯಮಾಪಕರಿಗೆ ಈಗಾಗಲೇ ನೋಟಿಸ್ ಕಳುಹಿಸಲಾಗಿದ್ದು, ಇಂಗ್ಲಿಷ್ ಭಾಷಾ ಪರೀಕ್ಷೆಗೆ ಹಾಜರಾದವರಿಗೆ ಮಾತ್ರವೇ 26 ಗ್ರೇಸ್ ಅಂಕ ಕೊಡಿ ಎಂದು ಸೂಚಿಸಲಾಗಿದೆ.
ಇದನ್ನೂ ಓದಿ:ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿಗೆ ಅಗ್ರಪಟ್ಟ, ಚಿತ್ರದುರ್ಗಕ್ಕೆ ಕೊನೇ ಸ್ಥಾನ
ಸತ್ಯಾಂಶ ಏನು?:ಸಚಿವ ಸುರೇಶ್ ಕುಮಾರ್ ಅವರು ಈ ಟ್ವೀಟ್ ನ ಸ್ಕ್ರೀನ್ ಶಾಟ್​ ಇಮೇಜ್ ಟ್ವೀಟ್​ ಮಾಡಿದ್ದಾರೆ. ಅದರ ಮೇಲೆ ಫೇಕ್ ಎಂದು ಷರಾ ಬರೆದು ಊಹಾಪೋಹ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ. ಅರ್ಥಾತ್​, ಇಂಗ್ಲಿಷ್ ಭಾಷಾ ಪರೀಕ್ಷೆ ಬರೆದವರಿಗೆ ಗ್ರೇಸ್ ಮಾರ್ಕ್​ ನೀಡುತ್ತಿರುವ ಸುದ್ದಿ ಸುಳ್ಳು ಎಂಬುದನ್ನು ಖಚಿತ ಪಡಿಸಿದ್ದಾರೆ.
pic.twitter.com/0fILlMCSt8
— S.Suresh Kumar (@nimmasuresh)July 14, 2020

ದ್ವಿತೀಯ ಪಿಯು ಫಲಿತಾಂಶ ಇಂದು 11.30ಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
