ಬೆಂಗಳೂರು: ನರೇಗಾ ಕಾಮಗಾರಿಗಳಲ್ಲಿನ ಲೋಪದೋಷಗಳಿಗೆ ಕಾರಣರಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ದಂಡ ವಿಧಿಸಲು ಆದೇಶ ಹೊರಡಿಸಲಾಗಿದೆ.
ಸಾಮಗ್ರಿ ವೆಚ್ಚದ ಎಫ್‌ಟಿಓಗಳು ತಿರಸ್ಕೃತವಾಗಲು ಕಾರಣರಾದ ಗ್ರಾಮ ಪಂಚಾಯತಿ ಮತ್ತು ಅನುಷ್ಠಾನ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಗುರುತಿಸಿ ತಲಾ 1000 ರೂ. ದಂಡ ವಿಧಿಸಲು ಸೂಚಿಸಲಾಗಿದೆ.
ಮೊದಲ ಹಂತದ ಜಿಯೋ ಟ್ಯಾಗ್ ಫೋಟೋದಲ್ಲಿ ಸಾರ್ವಜನಿಕ ಮಾಹಿತಿ ಫಲಕ ಇಲ್ಲದ ಇರುವುದು, ಸಾರ್ವಜನಿಕ ಮಾಹಿತಿ ಫಲಕಗಳಲ್ಲಿ ಕಾಮಗಾರಿಗೆ ಸಂಬಂಧಿಸಿದ ಮಾಹಿತಿ ನಮೂದಿಸದೇ ಇರುವುದು, ಒಂದೇ ಕಾಮಗಾರಿಯ ಮಾಹಿತಿ ಫಲಕವನ್ನು ಬೇರೆ ಬೇರೆ ಕಾಮಗಾರಿಗಳಿಗೆ ಅಳವಡಿಸಿ ಜಿಯೋ ಟ್ಯಾಗ್ ಮಾಡಿರುವುದು, ಮೊದಲ ಹಂತದ ಜಿಯೋ ಟ್ಯಾಗ್ ಫೋಟೋ ಕಾಮಗಾರಿ ಪ್ರಾರಂಭಕ್ಕಿಂತ ಮೊದಲು ಮತ್ತು ಎರಡನೇ ಫೋಟೋ ಕಾಮಗಾರಿ ಪ್ರಗತಿ ಹಂತದಲ್ಲಿ ಹಾಗೂ ಮೂರನೇ ಫೋಟೋ ಆಸ್ತಿ ಸೃಜನೆಯಾದ ಮೇಲೆ ತೆಗೆಯಬೇಕು.
ಕೆಲವು ಕಾಮಗಾರಿಗಳಲ್ಲಿ ಒಂದೇ ಫೋಟೋವನ್ನು 3 ಹಂತದಲ್ಲಿಯೂ ಅಪ್‌ಲೋಡ್ ಮಾಡಲಾಗಿದೆ.ಬಹಳಷ್ಟು ಕಾಮಗಾರಿಗಳ 3ನೇ ಹಂತದ ಜಿಯೋ ಟ್ಯಾಗ್ ಫೋಟೋದಲ್ಲಿ ಸೃಜನೆಯಾದ ಆಸ್ತಿ ಕಂಡುಬರುವುದಿಲ್ಲ. ಕಾಮಗಾರಿಗಳ ಅಂದಾಜು ಪತ್ರಿಕೆಯಲ್ಲಿ ನಮೂದಿಸಲಾದ ಚಟುವಟಿಕೆಗಳ ಬದಲಾಗಿ ಎಂಐಎಸ್‌ನಲ್ಲಿ ಬೇರೆ ಚಟುವಟಿಕೆ ನಮೂದಿಸಿ ಹಣ ಪಾವತಿಸಿರುವುದು, ಅಂದಾಜು ವೆಚ್ಚಕ್ಕಿಂತ ಹೆಚ್ಚಿನ ಮೊತ್ತ ಪಾವತಿಸಿರುವುದು ಬೆಳಕಿಗೆ ಬಂದಿದೆ.ಅಂದಾಜು ಪಟ್ಟಿಯಲ್ಲಿ ನಿರ್ದಿಷ್ಟ ಚಟುವಟಿಕೆಗೆ ಮೀಸಲಿರಿಸಿದ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ಪಾವತಿಸಿರುವುದು ಹಾಗೂ ಅನುಮೋದಿತ ಅಂದಾಜು ಪಟ್ಟಿಯಲ್ಲಿ ನಮೂದಿಸದೇ ಇರುವ ಚಟುವಟಿಕೆಗಳಿಗೆ ಹಣ ಪಾವತಿಸಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಕ್ರಮಕ್ಕೆ ಮುಂದಾಗಿದೆ.ಕಾಮಗಾರಿಗಳ ಅನುಷ್ಠಾನದಲ್ಲಿ ಲೋಪದೋಷಗಳನ್ನು ಎಸಗಿ ಜಿಲ್ಲಾ ಪಂಚಾಯತಿ ಹಂತದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಸಾಮಗ್ರಿ ವೆಚ್ಚದ ಎಫ್‌ಟಿಓಗಳು ತಿರಸ್ಕೃತವಾಗಲು ಕಾರಣರಾದ ಗ್ರಾಮ ಪಂಚಾಯತಿ ಮತ್ತು ಅನುಷ್ಠಾನ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಗುರುತಿಸಿ ನರೇಗಾ ಅಧಿನಿಯಮದ ಸೆಕ್ಷನ್ 25ರಂತೆ ತಲಾ 1000 ರೂ.ದಂಡ ವಿಧಿಸಿ ಆದೇಶ ಹೊರಡಿಸಿ, ವಿಧಿಸಲಾದ ದಂಡವನ್ನು ವಸೂಲಿ ಮಾಡಲು ಮತ್ತು ದಂಡನೆಗೆ ಒಳಗಾದ ಸರ್ಕಾರಿ ಅಧಿಕಾರಿಗಳ ಸೇವಾ ಪುಸ್ತಕದಲ್ಲಿ ದಂಡನೆಯ ಅಂಶವನ್ನು ದಾಖಲಿಸುವಂತೆಯೂ ಎಲ್ಲ ಜಿಪಂ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಸೂಚಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 18 =
Remember me
